
ನಾಪೋಕ್ಲು ಜ.5 NEWS DESK : ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪುಟಾಣಿ ವಿಜ್ಞಾನ ಬಳಗದ ವತಿಯಿಂದ ಅಂತಾರಾಷ್ಟ್ರೀಯ ಗಣಿತ ಪ್ರತಿಭಾ ಪರೀಕ್ಷೆಯನ್ನು ಆಯೋಜಿಸಲಾಯಿತು. ಪರೀಕ್ಷೆಯಲ್ಲಿ ಶ್ರೀ ರಾಜರಾಜೇಶ್ವರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದಿಂದ ಒಟ್ಟು 40 ವಿದ್ಯಾರ್ಥಿಗಳು ಹಾಜರಾಗಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಡಿಂಪನ ಬಿ.ಜೆ ಹಾಗೂ 7ನೇ ತರಗತಿ ವಿದ್ಯಾರ್ಥಿ ದುಶ್ಯಂತ್ ಎಂ.ಎಸ್ ರಾಜ್ಯಮಟ್ಟದಲ್ಲಿ ಐದನೇ ಸ್ಥಾನ ಹಾಗೂ 6ನೇ ತರಗತಿ ವಿದ್ಯಾರ್ಥಿ ವರ್ಧನ್ ತಾಲ್ಲೂಕು ಮಟ್ಟದಲ್ಲಿ ಐದನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಶಾಲೆಯ ಗಣಿತ ಶಿಕ್ಷಕರಾಗಿರುವ ಅನಿಲ್ ಯು.ಎಂ, ಬೃಂದಾಕವನ್ ಕುದುಪಜೆ ಹಾಗೂ ಡಿ.ಎಂ.ರಾಜೇಶ್ವರಿ ಮುಖ್ಯ ಶಿಕ್ಷಕರಾದ ಕವನ್ ಕುದುಪಜೆ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸ್ವರೂಪ್ ಕೆ.ಬಿ.ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ವರದಿ : ದುಗ್ಗಳ ಸದಾನಂದ.









