
ಮಡಿಕೇರಿ ಜ.8 NEWS DESK : ಮಾನವಕುಲ ಭೂಮಂಡಲದಲ್ಲಿ ಸೃಷ್ಟಿಯಾದ ಗಳಿಗೆಯಿಂದಲೂ ಆದಿಮಸಂಜಾತ ಏಕ ಬುಡಕಟ್ಟು ಜನಾಂಗದ ಕೊಡವರು ಆರ್ವಿಭವಿಸಿ ಕೊಡವಲ್ಯಾಂಡ್ ನಲ್ಲಿ ಅರಳಿ ವಿಕಾಸವಾಗಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನದಲ್ಲಿ ತೊಡಗಿದ್ದು, ಇವರುಗಳ ವಿರುದ್ಧ ಕೊಡವರು ಜಾಗೃತರಾಗಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕರೆ ನೀಡಿದ್ದಾರೆ. ಸಿಎನ್‍ಸಿ ವತಿಯಿಂದ ಭಾಗಮಂಡಲದಲ್ಲಿ ನಡೆದ 23ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ 40 ವರ್ಷಗಳಿಂದ ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ವಿಶ್ವ ವಿದ್ಯಾನಿಲಯವೊಂದರ ವ್ಯಕ್ತಿಗಳಿಂದ ನಡೆಯುತ್ತಿದೆ. ಕೊಡಗು ಹಾಗೂ ಈ ದೇಶಕ್ಕೆ ಕೊಡವರ ಕಾಣಿಕೆ ಏನೇನೂ ಇಲ್ಲ ಎಂದು ಪ್ರತಿಬಿಂಬಿಸುವ ಮೂಲಕ ಕೊಡವರನ್ನು ಖಳನಾಯಕರಂತೆ ತೋರಿಸುವ ಕ್ರೂರ ಹುನ್ನಾರ ಮುಂದುವರೆದಿದೆ. ದುರುಳ ಚರಿತ್ರೆಯನ್ನೇ ಕೊಡವರ ಕುರಿತಾದ ಅಧಿಕೃತ ಚರಿತ್ರೆ ಎಂದು ಬಿಂಬಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ರಾಜ್ಯ ಪತ್ರಗಾರ ಹಾಗೂ ಪ್ರಾಚ್ಯ ದಾಖಲೆ ಇಲಾಖೆಗೆ ತುರಕಲಾಗುತ್ತಿದೆ. ಈ ತಪ್ಪು ಮಾಹಿತಿಯ ಆಧಾರದಲ್ಲಿ ಕಂದಾಯ ಮಂತ್ರಿಗಳು ಇತ್ತೀಚೆಗೆ ಜಮ್ಮಾ ಮಸೂದೆ ಸಂಬಂಧ ತಪ್ಪು ಹೇಳಿಕೆ ನೀಡಿದ್ದನ್ನು ಗಮನಿಸಬಹುದಾಗಿದೆ ಎಂದು ಆರೋಪಿಸಿದರು. ಪಿಹೆಚ್‍ಡಿ ಪದವಿಯ ಕೊಡವ ಯುವಕ ಹಾಗೂ ಯುವತಿಯರ ಮೂಲಕ ಸುಳ್ಳು ಚರಿತ್ರೆಯನ್ನು ಸೃಷ್ಟಿಸಿ ಕಳಂಕ ತರಲಾಗುತ್ತಿದೆ ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ಬಂದೂಕು ಹಕ್ಕಿನ ಕುರಿತು ಪ್ರಶ್ನೆ ಮಾಡಿ ವಿಕೃತಿ ಮೆರೆಯಲಾಗಿದೆ. ಈ ವಿದ್ವಂಸಕ ಕೂಟವು ಆ್ಯನಿಮಿಸ್ಟಿಕ್ ನಂಬಿಕೆಯ ಆದಿಮಸಂಜಾತ ಏಕಜನಾಂಗೀಯ ಕೊಡವ ಪರಂಪರೆಯ ಮೇಲೆ ಅನ್ಯರನ್ನು ಪರಕಾಯ ಪ್ರವೇಶ ಮಾಡಲು ನಿರಂತರ ಪ್ರಚೋದಿಸುತ್ತ ಕ್ಷೋಭೆ ನಿರ್ಮಾಣ ಮಾಡಲು ಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡವ ಲ್ಯಾಂಡ್ ಗಾಗಿ ಒತ್ತಾಯಿಸಿ ಮತ್ತು ಕೊಡವರ ಕುರಿತು ಸುಳ್ಳು ಚರಿತ್ರೆ ಸೃಷ್ಟಿಯ ವಿರುದ್ಧ ಜನಜಾಗೃತಿ ಮೂಡಿಸಲು ಇದೇ ತಿಂಗಳಿನಿಂದ ಜಿಲ್ಲೆಯಾದ್ಯಂತ ಅಭಿಯಾನ ಆರಂಭಿಸಲಾಗುವುದು ಎಂದು ಎನ್.ಯು.ನಾಚಪ್ಪ ಅವರು ತಿಳಿಸಿದರು. ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಆದಿಮಸಂಜಾತ (ಆನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು, ಶಾಸ್ತ್ರೀಯವು, ಸಮೃದ್ಧವು, ಶ್ರೀಮಂತವು ಹಾಗೂ ಪ್ರಾಚೀನವಾದ ಕೊಡವರ ಮಾತೃಭಾಷೆಯಾದ ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು, ಸಂವಿಧಾನದ 7ನೇ ತಿದ್ದುಪಡಿ ಅನ್ವಯ ರಾಜ್ಯಾಂಗದ 347, 350ಎ, 350ಬಿ ಪ್ರಕಾರ 1956ರ ರಾಜ್ಯ ಪುನರ್ ಘಟನಾ ಕಾಯ್ದೆ ಅನ್ವಯ ಕೊಡವ ತಕ್ಕನ್ನು ಆಡಳಿತಾಂಗ ಮತ್ತು ಪಠ್ಯ ಕ್ರಮದಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು. 2026-27ರಲ್ಲಿ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು ಪ್ರತ್ಯೇಕವಾಗಿ ‘ಕೊಡವ’ ಎಂದು ದಾಖಲೀಕರಣಗೊಳ್ಳುವಂತೆ ಮನವಿ ಮಾಡಿದರು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಕೊಡವರ ಪೂರ್ವಾರ್ಜಿತ ಭೂ ಹಕ್ಕು ಮತ್ತು ಧಾರ್ಮಿಕ ಸಂಸ್ಕಾರ ತೋಕ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಎನ್.ಯು.ನಾಚಪ್ಪ ಅವರು ಪ್ರಸ್ತಾಪಿಸಿದರು. ಆದಿಮಸಂಜಾತ ಏಕ ಜನಾಂಗೀಯ ಆ್ಯನಿಮಿಸ್ಟಿಕ್ ನಂಬಿಕೆಯ ಕೊಡವರು ಯಾವುದೇ ಜಾತಿ, ಧರ್ಮದ ಬಂಧನ ಅಥವಾ ಕಳಂಕವಿಲ್ಲದೆ ಸ್ವತಂತ್ರವಾಗಿ ಬದುಕಿದ ಮತ್ತು ಬದುಕುತ್ತಿರುವ ಅತೀ ಅಪರೂಪದ ಸೂಕ್ಷ್ಮ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕೊಡವ ನೆಲ ಬಿಟ್ಟರೆ ಬೇರೆ ಎಲ್ಲೂ ಕೊಡವರಿಗೆ ಸ್ವಂತ ಸ್ಥಳವಿಲ್ಲ. ಇಂದಿನ ಕಾಲಮಾನದಲ್ಲಿ ಕೊಡವರ ರಕ್ಷಣೆಯಾಗಬೇಕಾಗಿದೆ ಮತ್ತು ಸಂಪೂರ್ಣ ಸಬಲೀಕರಣವಾಗಬೇಕಾಗಿದೆ. ಇದು ದೇಶದ ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ವಿವರಿಸಿದರು. ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಕೊಡವರಿಗೆ ಪಾರ್ಲಿಮೆಂಟ್ ಮತ್ತು ಎಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ ಸಿಗಬೇಕಾದರೆ, ಕೊಡವರ ಪೂರ್ವರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕಾದರೆ ಕೊಡವರ ಪ್ರತ್ಯೇಕ ಗುರುತು ರಾಷ್ಟ್ರೀಯ ಜನಗಣತಿಯ ಸಂದರ್ಭ `ಕೊಡವ’ ಎಂದು ದಾಖಲೀಕರಣವಾಗಬೇಕು. ಹೀಗೆ ಮಾಡಿದಾಗ ಮಾತ್ರ ನಮಗೆ ಸಂವಿಧಾನ ಬದ್ಧ ಹಕ್ಕು ದೊರೆಯಲಿದೆ ಎಂದರು. 2026-27ರ 16ನೇ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್‍ಟಿ ಪಟ್ಟಿಯಲ್ಲಿ ವರ್ಗೀಕರಿಸಬೇಕು. ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಉಳಿಸಬೇಕು, ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗೆ ನೀಡಿದ “ಸಂಘ” ಕ್ಷೇತ್ರದಂತೆಯೇ 2026-27 ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಆದಿಮಸಂಜಾತ (ಆನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು, ಶಾಸ್ತ್ರೀಯವು, ಸಮೃದ್ಧವು, ಶ್ರೀಮಂತರು ಹಾಗೂ ಪ್ರಾಚೀನವಾದ ಕೊಡವರ ಮಾತೃಭಾಷೆಯಾದ ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು, ಸಂವಿಧಾನದ 7ನೇ ತಿದ್ದುಪಡಿ ಅನ್ವಯ ರಾಜ್ಯಾಂಗದ 347, 350ಎ, 350ಬಿ ಪ್ರಕಾರ 1956ರ ರಾಜ್ಯ ಪುನರ್ ಘಟನಾ ಕಾಯ್ದೆ ಅನ್ವಯ ಕೊಡವ ತಕ್ಕನ್ನು ಆಡಳಿತಾಂಗ ಮತ್ತು ಪಠ್ಯ ಕ್ರಮದಲ್ಲಿ ಆಳವಡಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದರು. ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಚೇರಂಬಾಣೆ, ಚೆಟ್ಟಳ್ಳಿ, ಅಮ್ಮತ್ತಿ, ಶ್ರೀಮಂಗಲ, ಬುಟ್ಟಂಗಾಲ, ಹುದಿಕೇರಿ, ಕುಟ್ಟದಲ್ಲಿ, ಪಾಲಿಬೆಟ್ಟ, ತಿತಿಮತಿ, ಭಾಗಮಂಡಲದಲ್ಲಿ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು. ಮಾನವ ಸರಪಳಿಯಲ್ಲಿ ಕಲಿಯಂಡ ಮೀನಾ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಬಿ.ಎಂ ಪಾರ್ವತಿ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಕರವಂಡ ಲವ ನಾಣಯ್ಯ, ಪಟ್ಟಮಾಡ ಕುಶ, ಮುಕ್ಕಾಟಿರ ಸುಬ್ಬಯ್ಯ, ಮಂದಪಂಡ ಮನೋಜ್, ಕೊಟ್ಟ್‍ಕತ್ತಿರ ಬಾಬಿ ಪಳಂಗಪ್ಪ, ಕೂಪದಿರ ಸಾಬು, ಮಂಗೇರಿರ ಜಗದೀಶ್, ಬೊಳ್ಳಾರ್ಪಂಡ ಸಾಬು ಚೆಂಗಪ್ಪ, ಮಣೋಟ್ಟಿರ ಜಗದೀಶ್, ಕರವಂಡ ರವಿ ಬೋಪಣ್ಣ, ಮಂದಪಂಡ ಸೂರಜ್, ಪಟ್ಟಮಾಡ ನಾಚಪ್ಪ, ಮುಕ್ಕಾಟೀರ ಪೊನ್ನಣ್ಣ, ಮುಕ್ಕಾಟಿರ ಬಿನ್ನು ತಿಮ್ಮಯ್ಯ, ಮುಕ್ಕಾಟೀರ ರಂಜನ್ ಪೂವಯ್ಯ, ಪಟ್ಟಮಾಡ ಅಶೋಕ್, ಚೀಯಬೇರ ಸತೀಶ್, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ತಿಮ್ಮಯ್ಯ, ಕೊಟ್ಟ್‍ಕತ್ತಿರ ಗೌತಮ್ ಪೊನ್ನಣ್ಣ, ಶರತ್ ಅಹುಜಾ, ಮಣೋಟ್ಟಿರ ಶಿವಣಿ ಸೋಮೇಶ್, ಮಣೋಟ್ಟಿರ ಸ್ವರೂಪ್, ಮಣೋಟ್ಟಿರ ನಂದಾ, ಪೆಬ್ಬಟ್ಟಿರ ತಮ್ಮಯ್ಯ, ಪೆಬ್ಬಟ್ಟಿರ ಶರಣು ಹಾಗೂ ನಂದೇಟಿರ ಜೀವನ್ ಪಾಲ್ಗೊಂಡಿದ್ದರು. ಗುರು-ಕಾರೋಣ-ಸೂರ್ಯ-ಚಂದ್ರ, ಜಲದೇವಿ ಕಾವೇರಿ, ಪರ್ವತ ದೇವಿ, ಪ್ರಕೃತಿ ದೇವಿ, ಭೂದೇವಿ ಮತ್ತು ಪವಿತ್ರ ಸಂವಿಧಾನದ ಹೆಸರಿನಲ್ಲಿ ಸಿಎನ್‍ಸಿ ಹೋರಾಟದ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಷ್ಟ್ರಗೀತೆ ಜನ-ಗಣ-ಮನ ಪಠಣದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.








