
ಸುಂಟಿಕೊಪ್ಪ ಜ.8 NEWS DESK : ಗರಗಂದೂರು ರಾಯಲ್ ಪಾರ್ಮೆರ್ಸ್ ಕ್ಲಬ್ ವತಿಯಿಂದ ಹರದೂರು ಗ್ರಾಮ ಪಂಚಾಯಿತಿ ಕಚೇರಿಗೆ ಗಡಿಯಾರವನ್ನು ಕೊಡುಗೆಯಾಗಿ ನೀಡಿದ್ದಾರೆ. ರಾಯಲ್ ಪಾರ್ಮೆರ್ಸ್ ಕ್ಲಬ್ ಉದ್ಘಾಟನೆಯ ಅಂಗವಾಗಿ ಸಂಘದ ಅಧ್ಯಕ್ಷ ವಿ.ಸಂತೋಷ್ ಹಾಗೂ ಪದಾಧಿಕಾರಿಗಳು ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಗೋಡೆ ಗಡಿಯಾರವನ್ನು ಅಧ್ಯಕ್ಷೆ ಭೋಜಮ್ಮ, ಪಂಚಾಯಿತಿ ಅಧಿಕಾರಿ ಪೂರ್ಣಿಮಾ ಅವರಿಗೆ ಕೊಡುಗೆಯಾಗಿ ನೀಡಿದರು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಮುಸ್ತಾಫ, ಸದಸ್ಯರುಗಳು ರಾಯಲ್ ಪಾರ್ಮೆರ್ಸ್ ಕ್ಲಬ್‍ನ ಉಪಾಧ್ಯಕ್ಷ ಸುಧಾಕರ್, ಕಾರ್ಯದರ್ಶಿ ವಿ.ಎ.ಸಂತೋಷ್ ಹಾಗೂ ಪದಾಧಿಕಾರಿಗಳು ಇದ್ದರು.









