
ಮಡಿಕೇರಿ ಜ.10 NEWS DESK : ಶಬರಿಮಲೆಯ ಶ್ರೀ ಅಯ್ಯಪ್ಪನ ದರ್ಶನಕ್ಕೆ ತೆರಳುವ ವ್ರತಧಾರಿಗಳಿಗೆ ಕಟ್ಟು ತುಂಬುವ ವಿಶೇಷ ಪೂಜಾ ಕಾರ್ಯಕ್ರಮ ನಗರದ ಓಂಕಾರ ಸದನದಲ್ಲಿ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಗುರುಸ್ವಾಮಿ ಕಣ್ಣನ್ ಅವರ ನೇತೃತ್ವದಲ್ಲಿ 55 ಮಂದಿ ಶ್ರೀ ಅಯ್ಯಪ್ಪನ ವ್ರತಧಾರಿಗಳಿಗೆ, ಕೊಬ್ಬರಿಗೆ ತುಪ್ಪ ತುಂಬುವ ಮೂಲಕ ಕಟ್ಟು ಕಟ್ಟುವ ಕಾರ್ಯ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ಶ್ರೀ ಅಯ್ಯಪ್ಪನ ಘೋಷಣೆಗಳೊಂದಿಗೆ ಕಟ್ಟು ಪೂಜೆ ನೆರವೇರಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣಾ ಕಾರ್ಯ ನೆರವೇರಿತು.









