
ನಾಪೋಕ್ಲು ಜ.10 NEWS DESK : ಕೊಡಗು ಜಿಲ್ಲೆಯ ನೂತನ ಪೊಲೀಸ್ ವರಿಷ್ಟಾಧಿಕಾರಿಗಿ ಅಧಿಕಾರ ಸ್ವೀಕರಿಸಿರುವ ಆರ್.ಎನ್.ಬಿಂದುಮಣಿ ಅವರನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟ ಅಭಿನಂದಿಸಿದೆ. ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಾಗೆ ಭೇಟಿ ನೀಡಿದ ಒಕ್ಕೂಟದ ಪ್ರಮುಖರು ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಕೊಡಗಿನ ಮತ್ತು ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಪರಿಪಾಲನೆಗೆ ಇಲಾಖೆ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ಕೊಡಗಿನ ಗೌಡ ಸಮುದಾಯದವರು ಸಹಕರಿಸುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಸಿದ ಎಸ್ಪಿ ಬಿಂದುಮಣಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಜನಪರ ಕೆಲಸ ಕಾರ್ಯಗಳು ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಹೆಚ್ಚುವರಿ ಎಸ್ಪಿ ಬಾರಿಕೆ ದಿನೇಶ್, ಇಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ, ಖಜಾಂಚಿ ಅಂಬೆಕಲ್ಲು ನವೀನ್, ಕುಶಾಲನಗರ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ನಡುವಟ್ಟಿರ ಶಿವ ಪ್ರಕಾಶ್, ಕೊಡಗು ಗೌಡ ಸಮಾಜದ ನಿರ್ದೇಶಕರಾದ ಪೊನ್ನಚ್ಚನ ಮಧು, ಪುದಿಯನೆರವನ ರೇವತಿ, ಪಳಂಗೋಟು ವಿನಯ್ ಕಾರ್ಯಪ್ಪ, ಪೆರುಬಾಯಿ ನವೀನ್, ಚೆಟ್ಟಿಮಾಡ ರೋಹಿತ್ ಸೇರಿದಂತೆ ಇತರರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.









