
ಮಡಿಕೇರಿ ಜ.10 NEWS DESK : ಪುಟ್ಟ ಮಕ್ಕಳು ಮನೆಗಿಂತ ಹೆಚ್ಚಾಗಿ ಅಂಗನವಾಡಿಗಳಲ್ಲಿಯೇ ಪಾಲನೆಯಾಗುತ್ತಿರುವ ಈ ದಿನಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಅಂಗನವಾಡಿ ಕಾಯ೯ಕತೆ೯ಯರ ಪಾತ್ರ ಮಹತ್ವದ್ದು ಎಂದು ಮಡಿಕೇರಿ ನಗರಸಭೆಯ ಅಧ್ಯಕ್ಷೆ ಕಲಾವತಿ ಹೇಳಿದ್ದಾರೆ. ನಗರದ ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ನ ಕೊಡಗು ಘಟಕದಿಂದ ಆಯೋಜಿತ ಮಡಿಕೇರಿ ತಾಲೂಕಿನ ಅಂಗನವಾಡಿಗಳ ಸಾಧಕ ಕಾಯಕತೆ೯ಯರಿಗೆ ಸನ್ಮಾನ ಕಾಯ೯ಕ್ರಮ ಉದ್ಗಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ, ಪ್ರೀತಿ, ಬುದ್ದಿಯನ್ನು ಅಂಗನವಾಡಿಗಳಲ್ಲಿ ಕಾಯ೯ಕತೆ೯ಯರು ಕಲಿಸಬೇಕು. ಅಂಗನವಾಡಿ ಶಿಕ್ಷಕಿಯರು ಮಕ್ಕಳ ಪಾಲಿಗೆ ದೇವರ ಸಮಾನವಾಗಿದ್ದು ಇಂಥ ಮಕ್ಕಳನ್ನು ಹೆಚ್ಚಿನ ಮಮತೆಯಿಂದ ಬಾಲ್ಯದಲ್ಲಿ ಬೆಳೆಸಬೇಕೆಂದು ಕಲಾವತಿ ಕಿವಿ ಮಾತು ಹೇಳಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈರಾಜೇಶ್ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕಾಯ೯ವೈಖರಿ ಶ್ಲಾಘನೀಯವಾಗಿದೆ. ಕೊಡಗಿನಲ್ಲಿಯೂ ಮಳೆಗಾಲದಲ್ಲಿ ಕಾಳಜಿ ಕೇಂದ್ರದ ಮೂಲಕ ರೆಡ್ ಕ್ರಾಸ್ ನಿರಾಶ್ರಿತರಿಗೆ ನೆರವಾಗುತ್ತಾ ಅಗತ್ಯವಿದ್ದಲೆಲ್ಲಾ ಕಷ್ಯದಲ್ಲಿದ್ದವರಿಗೆ ನೆರವಾಗುತ್ತಿದೆ ಎಂದರು. ಅಂಗನವಾಡಿ ಕಾಯ೯ಕತೆ೯ಯರ ಶ್ರಮ ಸಮಾಜದಲ್ಲಿ ಸದಾ ಶ್ಲಾಘನೀಯವಾಗಿದ್ದು, ಪುಟ್ಟ ಮಕ್ಕಳಿಗೆ ಉತ್ತಮ ಬಾಲ್ಯ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಮಕ್ಕಳ ಏಳಿಗಯಲ್ಲಿ ಮಹತ್ವದ ಕಾಯ೯ನಿವ೯ಹಿಸುತ್ತಿರುವ ಅಂಗನವಾಡಿ ಕಾಯ೯ಕತೆ೯ಯರ ಸೇವೆಯನ್ನು ಗುರುತಿಸಿ ಸನ್ಮಾನದ ಗೌರವ ನೆರವೇರಿಸುವ ಮೂಲಕ ರೆಡ್ ಕ್ರಾಸ್ ಸಂಸ್ಥೆ ಉತ್ತಮ ಕಾಯ೯ಕ್ರಮ ರೂಪಿಸಿದೆ ಎಂದೂ ಬಿ.ವೈ.ರಾಜೇಶ್ ನುಡಿದರು. ಮಹಿಳಾ ಮತ್ತ ಮಕ್ಕಳ ಅಭಿವೖದ್ದಿ ಇಲಾಖೆಯ ಕೊಡಗು ಜಿಲ್ಲಾ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀತ೯ನ್ ಮಾತನಾಡಿ, 1975 ರಲ್ಲಿ 100 ಅಂಗನವಾಡಿಗಳು ಕನಾ೯ಟಕದಲ್ಲಿ ಪ್ರಾರಂಭವಾಗಿದ್ದವು. ಮಾಸಿಕ 150 ರು. ವೇತನದಲ್ಲಿ ಪ್ರಾರಂಭವಾದ ಅಂಗನವಾಡಿ ಕಾಯ೯ಕತೆ೯ಯರ ಕೆಲಸ ಈಗಲೂ ಸಕ್ರಿಯವಗಿ ಮುಂದುವರೆದಿದೆ. ಈಗ ಸಮಾಜದ ಇತರೆಲ್ಲಾ ನಾಗರಿಕರಿಗೆ ಎಲ್ಲಾ ಸೌಲಭ್ಯಗಳು ದೊರಕುತ್ತಿದ್ದರೂ ಅಂಗನವಾಡಿ ಕಾಯ೯ಕತೆ೯ಯರಿಗೆ ಮಾಸಿಕ ಕೇವಲ 12 ಸಾವಿರ ರು. ವೇತನಮಾತ್ರವಿದೆ. ಅಲ್ಪ ವೇತನದಲ್ಲಿಯೇ ಅಂಗನವಾಡಿ ಕಾಯ೯ಕತೆ೯ಯರು ಜೀವನ ರೂಪಿಸಿಕೊಳ್ಳಬೇಕಾಗಿದೆ ಎಂದರು. ಅಂಗನವಾಡಿ ಮಕ್ಕಳ ಶ್ರೇಯೋಭಿವೖದ್ದಿಗಾಗಿ ಮಹತ್ವದ ನೆರವು. ಮಕ್ಕಳಿಗೆ ಸ್ವಪ್ರಯತ್ನದ ಮೇರೆಗೆ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವಲ್ಲಿ ಶ್ರಮ ವಹಿಸುತ್ತಿರುವ ಅಂಗನವಾಡಿ ಕಾಯ೯ಕತೆ೯ಯರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುತ್ತಿದೆ. ಅಂಗನವಾಡಿ ಕಾಯ೯ಕತೆ೯ಯರೇ ಮಕ್ಕಳಿಗೆ ಮೊದಲ ಗುರುವಿನಂತೆ ಇದ್ದಾರೆ ಎಂದು ಶ್ಲಾಘಿಸಿದರು. ಸಕಾ೯ರ ಎಷ್ಟೇ ಕೆಲಸಕಾಯ೯ಗಳ ಗುರಿ ನೀಡಿದರ ಬೇಸರ ಪಟ್ಟಕೊಳ್ಳದೇ, ನಿಲ೯ಕ್ಷ್ಯ ವಹಿಸದೇ ಶೖದ್ದೆಯಿಂದ ಎಲ್ಲಾ ಕೆಲಸಗಳನ್ನೂ ಅಂಗನವಾಡಿ ಕಾಯ೯ಕತೆ೯ಯರು ನಿವ೯ಹಿಸುತ್ತಿದ್ದಾರೆ ಎಂದೂ ಸವಿತಾ ಹೇಳಿದರು. ಕೊಡಗಿನ ಅಂಗನವಾಡಿ ಕೇಂದ್ರಗಳು ಯಾವುದೇ ಕಾನ್ವೆಂಟ್ ಶಿಕ್ಷಣಕ್ಕೆ ಕಮ್ಮಿಯಿಲ್ಲದಂತೆ ಎಲ್ಲಾ ಸೌಲಭ್ಯಗಳನ್ನೂ ಹೊಂದುವಂತಾಗಲು ವಿವಿಧ ಸಂಘಸಂಸ್ಥಗಳ ಮಹತ್ವದ ಕೊಡುಗೆ ಇದೆ ಎಂದೂ ಸವಿತಾ ಕೀತ೯ನ್ ಹೆಮ್ಮೆಯಿಂದ ನುಡಿದರು. ಮಕ್ಕಳ ಹಿತಕ್ಕಾಗಿ ಅಂಗನವಾಡಿ ಕಾಯ೯ಕತೆ೯ಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸವ೯ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದೂ ಅವರು ಹೇಳಿದರು. ಅನೇಕ ಅಂಗನವಾಡಿ ಕಾಯ೯ಕತೆ೯ಯರು ಸಾಕಷ್ಟು ಸಾಧನೆ ತೋರಿದ್ದು ಇಂಥವರನ್ನು ಗುರುತಿಸಿ ಸನ್ಮಾನಿಸುವುದು ಎಲ್ಲರ ಆದ್ಯತೆಯಾಗಬೇಕೆಂದೂ ಅವರು ಹೇಳಿದರು. ರೆಡ್ ಕ್ರಾಸ್ ಕೊಡಗು ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಜಾಗತಿಕವಾಗಿ ಅತ್ಯಂತ ಮಹತ್ವದ ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು, ಜಗತ್ತಿನ ಎಲ್ಲಿಯೇ ಆದರೂ ಶಾಂತಿ ಸ್ಥಾಪನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾ ಬಂದಿದೆ ಎಂದರು. ದೇಶಗಳ ನಡುವೆ ಯುದ್ದದ ಪ್ರಕೋಪ ಸ್ಥಿತಿ ಕಂಡುಬಂದಾಗ ರೆಡ್ ಕ್ರಾಸ್ ಮಧ್ಯಪ್ರವೇಶಿಸಿ ಕದನ ವಿರಾಮಕ್ಕೆ ಪ್ರಯತ್ನಿಸುತ್ತಿದೆಯಲ್ಲದೇ, ಶಾಂತಿ ಸ್ಥಾಪನೆಗೆ ಹೆಚ್ಚಿನ ಗಮನ ನೀಡುತ್ತಿದೆ ಎಂದರು. ಕೊಡಗು ರೆಡ್ ಕ್ರಾಸ್ ವತಿಯಿಂದ ಮಳಗಾಲ, ಕೋವಿಡ್ ಸಂಕಷ್ಟದ ಸಂದಭ೯ಗಳಲ್ಲಿಯೂ ವಿವಿಧ ಕಾಯ೯ಕ್ರಮಗಳೊಂದಿಗೆ ಜನಸಮುದಾಯಕ್ಕೆ ಅಗತ್ಯ ನೆರವು ನೀಡಲಾಗಿದೆ ಎಂದೂ ರವೀಂದ್ರ ರೈ ಹೇಳಿದರು. ಭವಿಷ್ಯದಲ್ಲಿ ಮಡಿಕೇರಿಯಲ್ಲಿನ ರೆಡ್ ಕ್ರಾಸ್ ಭವನದ ಮೇಲಂತಸ್ತಿನ ಕಾಮಗಾರಿ ಪ್ರಾರಂಭವಾಗಲಿದ್ದು, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ಹಲವಾರು ಕಾಯ೯ಕ್ರಮಗಳನ್ನು ಆಯೋಜಿಸುವುದಾಗಿ ಹೇಳಿದರು. ರೆಡ್ ಕ್ರಾಸ್ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ಆರು ವರ್ಷದ ಒಳಗಿನ ಮಕ್ಕಳ ಆರೋಗ್ಯ ಪೌಷ್ಟಿಕ ಮಟ್ಟವನ್ನು ವೃದ್ಧಿಸುವುದು,ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರಅಡಿಪಾಯವನ್ನು ಹಾಕುವುದು, ಮಕ್ಕಳಲ್ಲಿ ಸಾವು, ಅನಾರೋಗ್ಯ,ಅಪೌಷ್ಟಿಕತೆ, ಶಾಲೆ ಬಿಡುವಿಕೆಯನ್ನು ಕಡಿಮೆಗೊಳಿಸುವುದು ಸೇರಿದಂತೆ , ತಾಯಂದಿರಿಗೆ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ ಅಗತ್ಯಗಳನ್ನು ಸರಿಯಾಗಿ ನೋಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಅಂಗನವಾಡಿ ಕಾರ್ಯಕರ್ತೆಯರ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಈ ದಿನ ಗುರುತಿಸಲಾಗಿದೆ ಎಂದರು. ರೆಡ್ ಕ್ರಾಸ್ ಪ್ರಧಾನ ಕಾಯ೯ದಶಿ೯ ಎಂ.ಧನಂಜಯ್ ವಂದಿಸಿ, ದೇವಕ್ಕಿ ಪ್ರಾಥಿ೯ಸಿ, ಅನಿಲ್ ಹೆಚ್.ಟಿ. ನಿರೂಪಿಸಿದರು. ರೆಡ್ ಕ್ರಾಸ್ ಖಜಾಂಜಿ ಪ್ರಸಾದ್ ಗೌಡ ನಿದೇ೯ಶಕರಾದ ದೀಘ೯ಕೇಶಿ ಶಿವಣ್ಣ, ಅಂಬೆಕಲ್ ಜೀವನ್, ಮಧುಕರ್ ಶೇಟ್ , ವಿಕ್ರಂಶೆಟ್ಟಿ, ಕೆ.ಟಿ. ಉತ್ತಪ್ಪ, ಕೆ. ಎಂ.. ವೆಂಕಟೇಶ್, ಸಿ.ಕೆ. ಪ್ರಭಾಕರ್ , ಕೆ.ಸಿ.ವಸಂತ್, ರತ್ನಾಕರ್ ರೈ, ಬಿ.ಕೆ. ಕಾಯ೯ಪ್ಪ, ಪಿ.ಆರ್.ರಾಜೇಶ್, ಕೌಶಿ ಪೊನ್ನಮ್ಮ ಸೇರಿದಂತೆ ಹಲವರು ಹಾಜರಿದ್ದರು. :: ಸನ್ಮಾನಿತರಾದ ಅಂಗನವಾಡಿ ಕಾಯ೯ಕತೆ೯ಯರು :: ಮರಗೋಡು ಅಂಗನವಾಡಿ ಕಾಯ೯ಕತೆ೯ ಅಕ್ಕಮ್ಮ ( 21 ವಷ೯ಗಳ ಸೇವೆ) ,ಬಾಣೆಮೊಟ್ಟೆ ಅಂಗನವಾಡಿ ಕೇಂದ್ರದ ಟಿ. ಇ. ಅಮುದ ( 25 ವಷ೯ಗಳ ಸೇವೆ) , ತಾವೂರು ಅಂಗನವಾಡಿ ಕೇಂದ್ರದ ಹೆಚ್.ಆರ್.ಹೇಮಾವತಿ (26 ವಷ೯ಗಳ ಸೇವೆ), ಕೊಚ್ಚಿ ಅಂಗನವಾಡಿ ಕೇಂದ್ರದ ಕೆ.ಯಶೋಧ ( 32 ವಷ೯ಗಳ ಸೇವೆ), ಮಡಿಕೇರಿ ಭಗವತಿ ನಗರ ಅಂಗನವಾಡಿ ಕೇಂದ್ರದ ಕೆ.ಯು. ಶಶಿ ( 33 ವಷ೯ಗಳ ಸೇವೆ), ಹೂಕಾಡು ಪೈಸಾರಿ ಅಂಗನವಾಡಿ ಕೇಂದ್ರದ ಜಯಶ್ರೀ ರೈ ( 8 ವಷ೯ಗಳ ಸೇವೆ), ಪರಂಬು ಪೈಸಾರಿ ಅಂಗನವಾಡಿ ಕೇಂದ್ರದ ಎಂ.ಕೆ. ಭವಾನಿ ( 35 ವಷ೯ಗಳ ಸೇವೆ), ವಣಚಲು ಅಂಗನವಾಡಿ ಕೇಂದ್ರದ ಪಿ.ಆರ್. ಧರಣಿ ( 6 ವಷ೯ಗಳ ಸೇವೆ), ಬಿಳಿಗೇರಿ ಅಂಗನವಾಡಿ ಕೇಂದ್ರದ ಎಚ್.ಪಿ. ದೇವಕಿ ( 36 ವಷ೯ಗಳ ಸೇವೆ), ಅಯ್ಯಂಗೇರಿ ಅಂಗನವಾಡಿ ಕೇಂದ್ರದ ಜಮೀಲಾ ಐ.ಎ. ( 30 ವಷ೯ಗಳ ಸೇವೆ) , ಐವತ್ತೋಕ್ಲು ಅಂಗನವಾಡಿ ಕೇಂದ್ರದ ಎ.ಟಿ. ಇಂದಿರಾ ( 37 ವಷ೯ಗಳ ಸೇವೆ) , ಅರಪಟ್ಟು ಪೈಸಾರಿ ಅಂಗನವಾಡಿಯ ಟಿ.ಕೆ. ಕವಿತಾ ( 31 ವಷ೯ಗಳ ಸೇವೆ), ಚಟ್ಟೆಕಾಡು ಅಂಗನವಾಡಿ ಕೇಂದ್ರದ ಹರಿಣಿ ಟಿ. ( 26 ವಷ೯ಗಳ ಸೇವೆ), ಜೋಡುಪಾಲ ಅಂಗನವಾಡಿ ಕೇಂದ್ರದ ಎಂ.ಮನೋಹರಿ ( 34 ವಷ೯ಗಳ ಸೇವೆ), ಮಡಿಕೇರಿ ರಾಜೇಶ್ವರಿ ನಗರದ ಅಂಗನವಾಡಿಯ ಕೆ.ಸಿ. ಇಂದಿರಾ ( 20 ವಷ೯ಗಳ ಸೇವೆ)









