
ಮಡಿಕೇರಿ ಜ.13 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಮಹಿಳಾ ಲೇಖಕಿಯರು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. 2025-26ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಮಹಿಳಾ ಲೇಖಕಿಯರು ತಾವು ರಚಿಸಿದ ಸೃಜನಶೀಲ, ಸಮಾಜಮುಖಿ ಕಥೆ, ಕಾದಂಬರಿ, ಕವನ ಸಂಕಲನ ಕೃತಿಗಳ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಕಳುಹಿಸಬೇಕು. 2020ರ ನಂತರ ಪ್ರಕಟಿತ ಪುಸ್ತಕಗಳನ್ನು ಮಾತ್ರ ಕಳುಹಿಸಬೇಕು. ಸ್ಪರ್ಧೆಗೆ ಪುಸ್ತಕ ಕಳಿಸುವ ಲೇಖಕಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು. ಓರ್ವ ಲೇಖಕಿ ಒಂದು ಕೃತಿಯನ್ನು ಮಾತ್ರ ಕಳುಹಿಸಬೇಕು. ಲಕೊಟೆಯ ಮೇಲೆ “ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ” ಎಂದು ಬರೆಯತಕ್ಕದ್ದು. ಕೊಡಗು ಜಿಲ್ಲೆಯ ಲೇಖಕಿಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. :: ಕಳುಹಿಸಬೇಕಾದ ವಿಳಾಸ : ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಮೊಬೈಲ್ ಸಂಖ್ಯೆ – 94483 46276. ದಿನಾಂಕ 25.01.2026 ರ ಒಳಗಾಗಿ ತಲುಪಿಸಬೇಕೆಂದು ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









