
ವಿರಾಜಪೇಟೆ ಜ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನಡೆಯಿತು. ವಿರಾಜಪೇಟೆಯ ಶಿಕ್ಷಕರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಉದ್ಘಾಟಿಸಿದರು. ಬೆಳ್ತಂಗಡಿ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ರಮೇಶ್, ಬಿ.ಸಿ ಯೋಜನಾಧಿಕಾರಿ ಪ್ರವೀಣ್, ಕೊಡಗು ಜಿಲ್ಲೆಯ ಎಂವೈಎಸ್ ಯೋಜನಾಧಿಕಾರಿ ಪ್ರವೀಣ್, ಕೊಡಗು ಜಿಲ್ಲಾ ಆಡಿಟರ್ ಪ್ರಮೋದ್, ತಾಲೂಕಿನ ಯೋಜನಾಧಿಕಾರಿ ಹರೀಶ್ ಕಾರ್ಯಾಗಾರದ ವಿಚಾರವನ್ನು ಸೇವಾ ಪ್ರತಿನಿಧಿಗಳಿಗೆ ವಿವರಿಸಿ ಮಾಹಿತಿ ನೀಡಿದರು. ಈ ಸಂದರ್ಭ ವಿವಿಧ ವಲಯಗಳ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.









