Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
  • *ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*
  • *ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*
  • *ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*
  • *ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ತಾಯಿ ಆಸೆ ಈಡೇರಿಸಲು ಸ್ಕೂಟರ್‌ನಲ್ಲಿ ದೇಶ ಪರ್ಯಟನೆ : ಮಡಿಕೇರಿಗೆ ಆಗಮಿಸಿದ ತಾಯಿ-ಮಗನಿಗೆ ರೋಟರಿ ಸಂಸ್ಥೆಯಿಂದ ಆತ್ಮೀಯ ಸ್ವಾಗತ*
ಇತ್ತೀಚಿನ ಸುದ್ದಿಗಳು

*ತಾಯಿ ಆಸೆ ಈಡೇರಿಸಲು ಸ್ಕೂಟರ್‌ನಲ್ಲಿ ದೇಶ ಪರ್ಯಟನೆ : ಮಡಿಕೇರಿಗೆ ಆಗಮಿಸಿದ ತಾಯಿ-ಮಗನಿಗೆ ರೋಟರಿ ಸಂಸ್ಥೆಯಿಂದ ಆತ್ಮೀಯ ಸ್ವಾಗತ*

January 13, 20262 Mins Read
Share
Facebook Twitter LinkedIn Pinterest WhatsApp Email

ಮಡಿಕೇರಿ ಜ.13 NEWS DESK : ಕೂಡು ಕುಟುಂಬದಲ್ಲಿ ಅಡುಗೆ ಮನೆಗಷ್ಟೆ ಸೀಮಿತವಾಗಿದ್ದ ಅಮ್ಮನನ್ನು, ಅಪ್ಪ ಕೊಡಿಸಿದ್ದ ಬಜಾಜ್ ಚೇತಕ್ ಸ್ಕೂಟರ್‍ನಲ್ಲಿ ಭಾರತದ ಎಲ್ಲಾ ರಾಜ್ಯವನ್ನು ಒಳಗೊಂಡಂತೆ ಸುತ್ತಮುತ್ತಲ ಮೂರು ದೇಶಗಳಿಗೆ ಕರೆದೊಯ್ದು, ಅಲ್ಲಿನ ಪುಣ್ಯ ಸ್ಥಳ ಪ್ರವಾಸಿ ತಾಣಗಳಿಗೆ ಭೇಟಿ ಮಾಡಿಸಿ ಮನಃಸಂತೋಷ ಪಡುತ್ತಿರುವ ಡಿ. ಕೃಷ್ಣಕುಮಾರ್ ಮತ್ತು ಅವರಮ್ಮ ಚೂಡಾ ರತ್ನಮ್ಮ ಮಂಜಿನ ನಗರಿ ಮಡಿಕೇರಿಗಿಂದು ಭೇಟಿ ನೀಡಿದರು. ಮೂಲತಃ ಮೈಸೂರಿನವರಾದ ಕೃಷ್ಣ ಕುಮಾರ್ ಅವರು ತಮ್ಮಮ್ಮನೊಂದಿಗೆ 2018 ರ ಜ.16 ರಂದು ಆರಂಭಿಸಿರುವ ಪ್ರವಾಸ ಇಂದಿಗೂ ಮುಂದುವರೆದಿದೆ. ಇವರು ಇಲ್ಲಿಯವರೆಗೆ ಭಾರತದ ವಿವಿಧ ರಾಜ್ಯಗಳು, ನೆರೆಯ ನೇಪಾಳ, ಬೂತಾನ್, ಮ್ಯಾನ್ಮಾರ್ ದೇಶ ಸೇರಿದಂತೆ ಒಂದು ಲಕ್ಷ ಕಿ.ಮೀ.ಗೂ ಹೆಚ್ಚಿನ ದೂರವನ್ನು ಕ್ರಮಿಸಿ, ಅಮ್ಮನಿಚ್ಛೆಯ ಪ್ರದೇಶಗಳನ್ನು, ತೀರ್ಥ ಕ್ಷೇತ್ರಗಳ ದರ್ಶನವನ್ನು ಅವರಿಗೆ ಮಾಡಿಸಿದ್ದಾರೆ. ಅಪ್ಪ ದಕ್ಷಿಣಾ ಮೂರ್ತಿಗಳು ಕಾಲವಾದ ಬಳಿಕ, ಅವರು ಕೊಡಿಸಿದ್ದ ‘ಬಜಾಜ್ ಚೇತಕ್’ ಸ್ಕೂಟರ್‍ನಲ್ಲೆ ತಂದೆಯನ್ನು ಕಾಣುತ್ತಿದ್ದೇನೆ. ಇದರಿಂದಾಗಿ ಸ್ಕೂಟರ್‍ನಲ್ಲಿ ಅಮ್ಮನೊಂದಿಗಿನ ಪ್ರವಾಸ ಅಂದರೆ ಅದು ಅಪ್ಪನನ್ನು ಒಳಗೊಂಡ ನಮ್ಮ ಕುಟುಂಬದ ಪ್ರವಾಸವೆಂದೆ ಭಾವಿಸಿದ್ದೇನೆ ಎನ್ನುವ ಕೃಷ್ಣ ಕುಮಾರ್, ಈ ಹಿಂದೆ ಕರ್ಪೋರೇಟ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದವರು. ಬಳಿಕ ಸ್ವಯಂ ನಿವೃತ್ತಿಯನ್ನು ಪಡೆದು, ತಾಯಿಯ ಸಂತೋಷದಲ್ಲೆ ತಮ್ಮ ಸಂತೋಷವನನ್ನು ಕಾಣುತ್ತ ಊರಿಂದೂರಿಗೆ, ರಾಜ್ಯದಿಂದ ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಪಯಣಿಸುತ್ತ ಅಲ್ಲಿನ ಸುಂದರ ತಾಣಗಳನ್ನು, ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಾ ಸಾಗಿರುವುದೊಂದು ಅಚ್ಚರಿ. ಅಮ್ಮನ ಮಾತಿಗೆ ‘ಸಂಕಲ್ಪ’ದ ಶರಾ…. ಅಪ್ಪ ಕಾಲವಾದ ಬಳಿಕ ಮಗ ಕೃಷ್ಣಕುಮಾರ್ ಅವರು ಒಮ್ಮೆ ಲೋಕಾಭಿರಾಮವಾಗಿ ಮಾತನಾಡುತ್ತ ತಾಯಿಯನ್ನು ಕೇಳುತ್ತಾರೆ ‘ಅಮ್ಮ ನೀನು ಯಾವೆಲ್ಲ ಊರು ನೋಡಿದ್ದೀಯ..?’. ಇದಕ್ಕೆ ಅವರಮ್ಮ ‘ ಅಡುಗೆ ಮನೆ ಬಿಟ್ಟು ಬೇರೇನನ್ನು ನೋಡಿಲ್ಲ. ಪಕ್ಕದ ಬೇಲೂರು-ಹಳೆಬೀಡನ್ನೆ ನೋಡಿಲ್ಲ’. ಆ ಸಂದರ್ಭ ಕೃಷ್ಣಕುಮಾರ್ ‘ಅಮ್ಮ ನಿನಗೆ ಇಡೀ ಭಾರತವನ್ನು ತೋರಿಸುತ್ತೇನೆ’ ಎಂದು ನುಡಿದದ್ದಲ್ಲದೆ, ಅದನ್ನು ಸಂಕಲ್ಪವಾಗಿಸಿಕೊಂಡು ಅಮ್ಮನೊಂದಿಗೆ ಬಜಾಜ್ ಸ್ಕೂಟರ್ ಹತ್ತಿದವರು ಇಂದಿಗೂ ಇಳಿದಿಲ್ಲ! ಅಮ್ಮ-ಮಗ ಬಹುಶಃ ರಾಷ್ಟ್ರದ ಯಾವುದೇ ಭಾಗವನನ್ನು ಬಿಡದೆ ಸಂದರ್ಶಿಸುತ್ತಿದ್ದಾರೆ. ‘ಭಾರತದ ಯಾವುದೇ ಪ್ರದೇಶಗಳಿಗೆ ತೆರಳಿದಾಗಲು ಅಲ್ಲಿನ ಜನತೆ ನಮ್ಮನ್ನು ಅತ್ಯಂತ ಪ್ರೀತಿಯಿಂದ ಕಂಡಿದ್ದಾರೆ ಆತಿಥ್ಯವನ್ನು ನೀಡಿದ್ದಾರೆ. ಈ ರಾಷ್ಟ್ರದ ಸಂಸ್ಕøತಿಯಲ್ಲಿ ಅತಿಥಿ ಸತ್ಕಾರದ ವಿಶೇಷ ಅಂತಃಕರಣ ಹಾಸುಹೊಕ್ಕಾಗಿದೆ’ ಎಂದು ತಿಳಿಸುವ ಕೃಷ್ಣ ಕುಮಾರ್, 75 ರ ಇಳಿವಯಸ್ಸಿನ ಅಮ್ಮನೊಂದಿಗೆ ತಮ್ಮ ಸ್ಕೂಟರ್‍ನಲ್ಲೆ ಉತ್ತರ ಭಾರತದ ಗಡಿಭಾಗದ 13,700 ಅಡಿ ಎತ್ತರದ ಪ್ರದೇಶಕ್ಕೂ ಭೇಟಿ ನೀಡಿದ್ದಾರೆ. ಮಗನೊಂದಿಗಿನ ಪ್ರಯಾಣ ಯಾವತ್ತೂ ಆರಾಮದಾಯಕವಾಗಿದೆ. ಆತನ ಸಂಕಲ್ಪದಂತೆ ನಾವಿಬ್ಬರು ವಿವಿಧೆಡೆಗಳಿಗೆ ಭೇಟಿ ನೀಡುತ್ತಿರುವುದಾಗಿ ಚೂಡಾ ರತ್ನಮ್ಮ ತಿಳಿಸುತ್ತಾರೆ. ಅಮ್ಮ ಮಗನ ಸುದೀರ್ಘ ಪ್ರವಾಸವನ್ನು ಗುರುತಿಸಿದ ಬಜಾಜ್ ಸಂಸ್ಥೆ ಇವರಿಗೆ ‘ಬಜಾಜ್ ಇಲೆಕ್ಟ್ರಿಕ್ ಸ್ಕೂಟರ್’ನ್ನು ಕೊಡುಗೆಯಾಗಿ ನೀಡಿರುವುದು ವಿಶೇಷ. :: ಆತ್ಮೀಯ ಸ್ವಾಗತ :: ಮಡಿಕೇರಿಗೆ ಆಗಮಿಸಿದ ಕೃಷ್ಣ ಕುಮಾರ್ ಮತ್ತು ಚೂಡಾ ರತ್ನಮ್ಮ ಅವರನ್ನು ಇಲ್ಲಿನ ಬಾಲ ಭವನದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭ ರೋಟರಿ ಜಿಲ್ಲಾ ರಾಜ್ಯಪಾಲ ಪಿ.ಕೆ.ರಾಮಕೃಷ್ಣ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ ರೈ, ರೋಟರಿ ಸಹಾಯಕ ರಾಜ್ಯಪಾಲ ದಿಲನ್ ಚಂಗಪ್ಪ, ಜಿಲ್ಲಾ ರೋಟರಿ ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ, ರೊಟೇರಿಯನ್ ಬಿ.ಜಿ. ಅನಂತಶಯನ, ರೋಟರಿ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಎಚ್.ಟಿ., ಅನಿತಾ ಪೂವಯ್ಯ ಸೇರಿದಂತೆ ಹಲ ಪ್ರಮುಖರು ಉಪಸ್ಥಿತರಿದ್ದರು.

 

 

Share. Facebook Twitter Pinterest LinkedIn Tumblr Email WhatsApp
Previous Article*ಫೆ.7 ರಂದು ಶನಿವಾರಸಂತೆಯ ನೂತನ ಬಸ್ ನಿಲ್ದಾಣ ಉದ್ಘಾಟನೆ*
Next Article *ನವಜಾತ ಶಿಶುಗಳ ಸಂರಕ್ಷಣೆಗಾಗಿ ತಾಯಿಯ ಎದೆಹಾಲು ಸಂಗ್ರಹ ಕೇಂದ್ರ ಸ್ಥಾಪನೆ*

Related Posts

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

ಮಡಿಕೇರಿ, NEWS DESK ಫೆ.11:-ಹಲವು ದಶಕಗಳಿಂದ ಅರಣ್ಯ/ ಸರ್ಕಾರಿ ಭೂಮಿ ಅನುಭವಿಸಿಕೊಂಡು ಬಂದಿರುವ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯನ್ನು ಹೆಚ್ಚಿನ…

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

*ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*

February 10, 2026

*ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*

February 10, 2026

*ಫೆ.14 ರಂದು ಕೊಡವ ಭವನ ಉದ್ಘಾಟನೆ*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.