
ಶನಿವಾರಸಂತೆ ಜ.14 NEWS DESK : ಅಂಕನಹಳ್ಳಿಯ ಮನೆಹಳ್ಳಿಮಠ ತಪೋವನ ಕ್ಷೇತ್ರದ ಅನಘ ಪೌಂಡೇಶನ್ ವತಿಯಿಂದ ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಜ.17 ರಂದು ಶನಿವಾರಸಂತೆ –ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು “ನಾನು ಮತ್ತು ಪರೀಕ್ಷೆ ‘’ ಕಾರ್ಯಾಗಾರ ನಡೆಯಲಿದೆ ಎಂದು ಅನಘ ಫೌಂಡೇಶನ್ ಕಾರ್ಯದರ್ಶಿ ನಿಖಿಲೇಶ್ ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ 9.30 ಕ್ಕೆ ಚಂಗಡಹಳ್ಳಿ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಕಾರ್ಯಾಗಾರವನ್ನು ಮನೆಹಳ್ಳಿಮಠ ತಪೋವನ ಕ್ಷೇತ್ರ ಅನಘ ಪೌಂಡೇಶನ್ ಅಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಹೈಕೋರ್ಟ್ ಹಿರಿಯ ನ್ಯಾಯಾವಾದಿ ಹೆಚ್.ಎಸ್.ಚಂದ್ರಮೌಳಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಶಿಕ್ಷಣ ತಜ್ಞ ಹಾಗೂ ವಿಶ್ಲೇಷಣಾತ್ಮಕ ತತ್ವಜ್ಞಾನಿ ಎ.ಹೆಚ್.ಸಾಗರ್, ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಹಾಗೂ ವಕೀಲ ಜಗದೀಶ್ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಸಂಜೆ 3-30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಾಲ್ಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಹಾಗೂ ಅನಘ ಫೌಂಡೇಶನ್ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಕಾರ್ಯಾಗಾರದಲ್ಲಿ ಚಿಕ್ಕಅಳುವಾರ ಕೊಡಗು ವಿಶ್ವವಿದ್ಯಾಲಯ ಉಪನ್ಯಾಸಕ ಜಮೀರ್ ಅಹಮದ್ ಅವರು “ಪರೀಕ್ಷೆ ಮತ್ತು ಆತ್ಮವಿಶ್ವಾಸ’’, ಅಂತರರಾಷ್ಟ್ರೀಯ ಶಿಕ್ಷಣ ತಜ್ಞ ಎ.ಹೆಚ್.ಸಾಗರ್ “ವಿದ್ಯಾರ್ಥಿಗಳಿಗೆ ಅಗತ್ಯವಾದ ಜ್ಞಾನ, ಕೌಶಲ್ಯಗಳು ಮತ್ತು ಮನೋಭಾವ’’, ಕುಶಾಲನಗರ ನಿವೃತ್ತ ಶಿಕ್ಷಕ ಊ.ರಾ.ನಾಗೇಶ್ “ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ ಮತ್ತು ಜ್ಞಾಪಕ ಶಕ್ತಿ’’ ಹಾಗೂ ಕೊಡ್ಲಿಪೇಟೆ ಪಿಯು ಕಾಲೇಜ್ ಮುಖ್ಯಶಿಕ್ಷಕ ಅಬ್ದುಲ್ ರಬ್ “ ಕ್ಲಿಷ್ಟ ವ್ಯಾಕರಣಾಂಶಗಳನ್ನು ಸರಳೀಕರಿಸುವುದು’’ – ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ನಿಖಿಲೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








