
ಮಡಿಕೇರಿ ಜ.14 NEWS DESK : ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಕೊಡಗು ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಲಾಯಿತು. ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರೋಗ್ಯ ಇಲಾಖೆಯ ಜಿಲ್ಲಾ ನಿಗ್ರಹದಳ ಅಧಿಕಾರಿ ಮತ್ತು ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಆನಂದ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋದಕ ಆಸ್ಪತ್ರೆ ಯ ಸಹಾಯಕ ಪ್ರಾಧ್ಯಾಪಕರಾದ ಡಾ. ಮಹೇಶ್ ಹವಾಮಾನ ಬದಲಾವಣೆ ಉಷ್ಣ ಅಲೆಗಳು ಮತ್ತು ಎಚ್ಚರಿಕೆಗಳು, ಉಷ್ಣ ಒತ್ತಡದ ವರ್ಗೀಕರಣ ಕ್ಲಿನಿಕಲ್ ಲಕ್ಷಣಗಳು ಮತ್ತು ಚಿಕಿತ್ಸೆಗಳು, ಶಾಖದ ಬದಲಿಗೆ ಲಕ್ಷಣಗಳು ಮತ್ತು ಕಾರಣಗಳು, ಟ್ರೀಟ್ಮೆಂಟ್ ಪ್ರೋಟೋಕಾಲ್, ಹೀಟ್ ಸ್ಟ್ರೋಕ್ , ದುರ್ಬಲ ಗುಂಪು ( ಗರ್ಭಿಣಿ ಬಾಣಂತಿ ಮಕ್ಕಳು ವಯೋ ವೃದ್ಧರು ), ತುರ್ತು ಪರಿಸ್ಥಿತಿ ಮತ್ತು ಅನಿರೀಕ್ಷಿತ ಘಟನೆಗಳ ತುರ್ತು ಸಿದ್ಧತೆ, ಬೇಸಿಗೆ ಪೂರ್ವ, ಬೇಸಿಗೆ ಸಮಯ, ಬೇಸಿಗೆ ನಂತರ ಮಳೆಯ ಪೂರ್ವ, ಮಳೆ ಸಮಯ, ಮಳೆ ನಂತರದ ಆರೋಗ್ಯ ಸಮಸ್ಯೆ ಗಳ ನಿರ್ವಹಣೆ ಬಗ್ಗೆ ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ.ಸನತ್ ಕುಮಾರ್ , ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲರಾದ ಡಾ.ಅಬ್ದುಲ್ ಅಜೀಜ್, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ರೋಜಾ ಹಾಗೂ ಕಿಶೋರ್ ಪಾಲ್ಗೊಂಡಿದ್ದರು.









