
ವಿರಾಜಪೇಟೆ ಜ.14 NEWS DESK : ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ಅಯ್ಯಪ್ಪ ದೇವರ ಬನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಮಕರ ಜ್ಯೋತಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕೆದಮುಳ್ಳೂರು ಮಹಾದೇವರ ದೇವಾಸ್ಥಾನದ ಅರ್ಚಕರಾದ ರಾಧಕೃಷ್ಣ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಂಜಾನೆ ದೇವತಾ ಪ್ರಾರ್ಥನೆ ಹಾಗೂ ಶ್ರೀ ಮಹಾಗಣಪತಿ ಹೋಮ ನೆರವೇರಿತು. ನಂತರ ವಿಶೇಷ ಪ್ರಾರ್ಥನೆ ಹಾಗೂ ಚಾಮುಂಡಿ, ಗುಳಿಗ ದೈವ, ಅಯ್ಯಪ್ಪ ದೇವರ ವಾರ್ಷಿಕ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ಪಾಲೇಕಂಡ ಕುಟುಂಬಸ್ಥರು, ಸ್ಥಳೀಯ ಭಕ್ತಾದಿಗಳು ಹಾಜರಿದ್ದರು.









