
ಸುಂಟಿಕೊಪ್ಪ ಜ.16 NEWS DESK : ಸುಂಟಿಕೊಪ್ಪ ಹೋಬಳಿ ನಾಗರಿಕರ ಹೋರಾಟ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಎಂ.ಎ.ಉಸ್ಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಡಿ.ರಾಜು ರೈ ಆಯ್ಕೆಯಾಗಿದ್ದಾರೆ. ಸುಂಟಿಕೊಪ್ಪ ಪ್ರವಾಸಿ ಮಂದಿರದಲ್ಲಿ ನೂತನ ಸಮಿತಿಯನ್ನು ರಚಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನಾಗೇಶ್ ಪೂಜಾರಿ, ಪಟ್ಟೆಮನೆ.ಪಿ.ಉದಯಕುಮಾರ್, ಹೆಚ್.ಎಸ್.ಮುತ್ತಪ್ಪ, ಖಜಾಂಚಿಯಾಗಿ ರಮೇಶ್ ಶೇಟ್, ಸಹಕಾರ್ಯದರ್ಶಿಗಳಾಗಿ ಆರ್.ರಮೇಶ್ ಪಿಳ್ಳೆ, ಕೆ.ಎಸ್.ಅನಿಲ್‍ಕುಮಾರ್, ಎ.ಎಂ.ಶರೀಫ್, ಸಂತೋಷ್ (ದೀನು), ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಸ್.ಅಶೋಕ್ ನೇಮಕಗೊಂಡರು. ಸಮಿತಿ ಸದಸ್ಯರುಗಳಾಗಿ ಯಂಕನ ಶ್ರೀರಾಮ, ಗೌರವಧ್ಯಕ್ಷರುಗಳಾಗಿ ಎಸ್.ಎ.ವಹೀದ್‍ಜಾನ್, ಜಿನ್ನಪ್ಪ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು. ನಂತರ ಎಂ.ಎ.ಉಸ್ಮಾನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು. ಗ್ರಾಮದಲ್ಲಿರುವ 18 ವರ್ಷ ಮೇಲ್ಪಟ್ಟ ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳುವ ಮೂಲಕ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಹೋರಾಟ ನಡೆಸಲು ಸಭೆಯಲ್ಲಿ ಅಂಗೀಕರಿಸಲಾಯಿತು. ಸುಂಟಿಕೊಪ್ಪ ಪಟ್ಟಣವು ಹೋಬಳಿ ಕೇಂದ್ರವಾಗಿದ್ದು, ಸಾಕಷ್ಟು ಭೌಗೋಳಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳನ್ನು ಪರಿಹರಿಸುವ ದಿಸೆಯಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆ ಪೂರಕವಾಗಿ ಸ್ಪಂದಿಸದಿರುವುದು, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಭೆಯಲ್ಲಿ ಚರ್ಚಿಸಿ ಒಗ್ಗಟ್ಟಿನಿಂದ ಹೋರಾಟ ನಡೆಸಿ ಗ್ರಾಮದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸುಂಟಿಕೊಪ್ಪ ಹೋಬಳಿ ನಾಗರಿಕರ ಹೋರಾಟ ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ಅವರು ಎಂ.ಎ.ಉಸ್ಮಾನ್ ಹೇಳಿದರು.









