Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಉಡುಪಿ ಜಿಲ್ಲಾ ಕುಪ್ಮಾ ಸಮಿತಿ ಪದಗ್ರಹಣ
ಇತ್ತೀಚಿನ ಸುದ್ದಿಗಳು ಕರ್ನಾಟಕ

ಉಡುಪಿ ಜಿಲ್ಲಾ ಕುಪ್ಮಾ ಸಮಿತಿ ಪದಗ್ರಹಣ

ಜನವರಿ 16, 20261 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಉಡುಪಿ ಜ.16 NEWS DESK : ಜಾಗತಿಕ ಸವಾಲುಗಳಿಗೆ ಉತ್ತರ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸಾಧ್ಯವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಮತ್ತು ಅವರ ಫಲಿತಾಂಶಗಳ ಸುಧಾರಣೆಗೆ ಖಾಸಗಿ ಸಂಸ್ಥೆಗಳ ಪಾತ್ರ ದೊಡ್ಡದು ಎಂದು ಕುಪ್ಮಾ ರಾಜ್ಯ ಸಮಿತಿಯ ಅಧ್ಯಕ್ಷರಾದ ಮೋಹನ್ ಆಳ್ವಾ ತಿಳಿಸಿದರು. ಉಡುಪಿ ಜಿಲ್ಲಾ ಕುಪ್ಮಾ ಸಮಿತಿ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಯೊಳಗೆ ವ್ಯಾಪಾರ ಮನೋಧರ್ಮದ ಬದಲಾಗಿ ಸೇವಾ ಮನೋಭಾವವೇ ಮೂಲವಾಗಬೇಕು. ಅನಗತ್ಯ ಟೀಕೆ ಟಿಪ್ಪಣಿಗಳಿಗೆ ಚಿಂತಿಸದೆ ಫಲಿತಾಂಶದ ಕಡೆಗೆ ದುಡಿಯುವ ಮನಸ್ಸು ನಮ್ಮದಾಗಬೇಕು. ಪ್ರತೀ ಜಿಲ್ಲೆಗಳಲ್ಲೂ ಕುಪ್ಮಾ ಸಂಘಟನೆ ಬಲವಾಗಬೇಕು ಎಂದು ಅವರು ಹೇಳಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಮಾತನಾಡಿ, ಇಲಾಖೆ ಮತ್ತು ಕುಪ್ಮಾ ಸಂಘಟನೆ ಜೊತೆಗೂಡಿ ಕೆಲಸ ನಿರ್ವಹಿಸಬೇಕು. ಪ್ರತೀ ಮಗುವಿಗೂ ಶಿಕ್ಷಣ ಸಿಗಲು ಖಾಸಗಿ ಸಂಸ್ಥೆಗಳ ಪಾಲು ದೊಡ್ಡದು ಎಂದು ಶುಭಹಾರೈಸಿದರು. ಕುಪ್ಮಾ ರಾಜ್ಯ ಸಮಿತಿಯ ಗೌರವಾಧ್ಯಕ್ಷರಾದ ರಾಧಾಕೃಷ್ಣ ಶೆಣೈ ಮಾತನಾಡಿ, ಎಲ್ಲಾ ಖಾಸಗಿ ಸಂಸ್ಥೆಗಳು ಆರೋಗ್ಯಕರವಾದ ಸ್ಪರ್ಧೆಗಳು ಇರಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಪ್ರಶಾಂತ್ ಶೆಟ್ಟಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಧ್ವನಿಯಾಗಿ ಕುಪ್ಮಾ ಕೆಲಸ ನಿರ್ವಹಿಸುತ್ತಿದೆ ಎಂದರು. ಉಡುಪಿ ಜಿಲ್ಲಾ ಕುಪ್ಮಾ ಸಮಿತಿಯ ಖಜಾಂಚಿ ಡಾ. ಸುಧಾಕರ್ ಶೆಟ್ಟಿ ಆಶಯ ನುಡಿಗಳನ್ನಾಡಿ, ವಿದ್ಯಾರ್ಥಿಗಳ ಏಳಿಗೆಗೆ ಅವಿರಥವಾಗಿ ಶ್ರಮವಹಿಸಲು ಎಲ್ಲರೂ ಒಗ್ಗೂಡಿ ಕೆಲಸ ನಿರ್ವಹಿಸಬೇಕು ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕುಪ್ಮಾ ಉಡುಪಿ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾದ ಸಿ.ಎ.ಗೋಪಾಲಕೃಷ್ಣ ಭಟ್ ಮಾತನಾಡಿ, ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಹೋರಾಟಗಳಿಗೆ ಸಂಘಟನೆಯ ಅವಶ್ಯಕತೆ ಇದೆ ಎಂದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಸಮಿತಿಯ ಪದಾದಿಕಾರಿಗಳು, ಶಿಕ್ಷಣ ತಜ್ಞರು, ಶಿಕ್ಷಕರು ಉಪಸ್ಥಿತರಿದ್ದರು. ಸಿ.ಎ.ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಲೋಹಿತ್ ಎಸ್.ಕೆ ನಿರೂಪಿಸಿದರು. ಕುಪ್ಮಾ ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಅಶ್ವತ್ಥ್ ಎಸ್.ಎಲ್.ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

ಪೂಜಾರಿರ ಮೊಣ್ಣಪ್ಪ ಅರೆಭಾಷಿಕ ಯುವ ಜನಾಂಗಕ್ಕೆ ಮಾದರಿ : ಡಾ.ಕಾವೇರಿಮನೆ ಬೋಜಪ್ಪ

ಅಕ್ಟೋಬರ್ 12, 2026

ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಅನಾವರಣ

ಅಕ್ಟೋಬರ್ 12, 2026

ಮಡಿಕೇರಿಯಲ್ಲಿ ಅ.19 ರಂದು ಮಹಿಳಾ ದಸರಾ : ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 12, 2026

ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಅನಾವರಣ

ಅಕ್ಟೋಬರ್ 12, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, ಅ.12 NEWS DESK : ಪತ್ರಕರ್ತರ ನಡುವೆ ಬಾಂಧವ್ಯ ವೃದ್ಧಿಸಿ, ಸಂಘಟನಾತ್ಮಕವಾಗಿ ಬಲವರ್ಧನೆಗೊಳ್ಳಲು ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದು ಮಡಿಕೇರಿ…

ಮಡಿಕೇರಿಯಲ್ಲಿ ಅ.19 ರಂದು ಮಹಿಳಾ ದಸರಾ : ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 12, 2026

ಬೇಂಗ್ ನಾಡ್ ಕೊಡವ ಸಮಾಜದಲ್ಲಿ ಕೈಲ್ ಪೋದ್ ಒತ್ತೋರ್ಮೆ ಕೂಟ; ಕೊಡವ ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು: ಚಿರಿಯಪಂಡ ಸುರೇಶ್ ನಂಜಪ್ಪ

ಅಕ್ಟೋಬರ್ 12, 2026

ಸುಂಟಿಕೊಪ್ಪದಲ್ಲಿ ಅ.20ರಂದು 56ನೇ ವರ್ಷದ ಆಯುಧಪೂಜಾ ಸಮಾರಂಭ

ಅಕ್ಟೋಬರ್ 12, 2026

ಸುಂಟಿಕೊಪ್ಪದಲ್ಲಿ ಅ.15ರಂದು 19ನೇ ವರ್ಷದ ಓಣಂ ಆಚರಣೆ

ಅಕ್ಟೋಬರ್ 12, 2026

ಕಂಬಿಬಾಣೆಯಲ್ಲಿ 71ನೇ ವರ್ಷದ ನವರಾತ್ರಿ ಉತ್ಸವಕ್ಕೆ ಚಾಲನೆ: ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

ಅಕ್ಟೋಬರ್ 12, 2026

ಮಡಿಕೇರಿ ದಸರಾದಲ್ಲಿ ಕಾಫಿ ಘಮ: 54 ಮಳಿಗೆಗಳಲ್ಲಿ ಕಾಫಿ ಲೋಕ ಅನಾವರಣ

ಅಕ್ಟೋಬರ್ 12, 2026

ವಿರಾಜಪೇಟೆ ಕಾವೇರಿ ಕಾಲೇಜಿನ ಬಾಲಕರ ತಂಡಕ್ಕೆ ರನ್ನರ್ಸ್ ಟ್ರೋಫಿ

ಅಕ್ಟೋಬರ್ 12, 2026

ಎಸ್‌ಐಆರ್ ವಿರುದ್ಧ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ; ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ರಸ್ತೆ ತಡೆ

ಅಕ್ಟೋಬರ್ 12, 2026

ಬೆಂಗಳೂರಿನಿಂದ ಮೈಸೂರಿಗೆ ದಕ್ಷಿಣ ಕರ್ನಾಟಕ ಅಂಚೆ ವಲಯದ ಪ್ರಧಾನ ಕಚೇರಿ ಸ್ಥಳಾಂತರಕ್ಕೆ ತಾತ್ವಿಕ ಒಪ್ಪಿಗೆ

ಅಕ್ಟೋಬರ್ 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.