ಮಡಿಕೇರಿ, NEWS DESK ನ.27 : ‘ಯುವಂ ಯುಗಂ’ ಕನ್ನಡ ಮಾಸ ಪತ್ರಿಕೆಯ 3ನೇ ವಾರ್ಷಿಕೋತ್ಸವದ ಅಂಗವಾಗಿ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಎಂ. ಶ್ರೀಧರ್ ಹೂವಲ್ಲಿ ಅವರಿಗೆ ಪ್ರತಿಷ್ಠಿತ ‘ಗೋವರ್ಧನ ಗೋಪಾಲ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ನ.25ರಂದು ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಬೋಗಾದಿಯ ಶೈನ್ ಗ್ಲೋಬಲ್ ಹ್ಯೂಮ್ಯಾನಿಟಿ ಟ್ರಸ್ಟ್, ‘ಕಾವೇರಿ ಮಿತ್ರ’ ನ್ಯೂಸ್ ಕನ್ನಡ ಹಾಗೂ ಶ್ರೀಗರಿ ಸಮೂಹ ಮಾಧ್ಯಮ ಸಂಘಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಖ್ಯಾತ ಕವಿ ಹಾಗೂ ಸಾಹಿತಿ ಡಾ. ಜಯಪ್ಪ ಹೊನ್ನಾಳಿ (ಜಯಕವಿ), ರಾಜ್ಯ ಮಾನವ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು, ಖ್ಯಾತ ಕವಿ ರಂಗನಾಥ್, ಸಾಹಿತಿ ಡಾ. ಕೆ. ರಘುರಾಮ್ ವಾಜಪೇಯಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಪಿ. ಸುಶೀಲ, ‘ಯುವಂ ಯುಗಂ’ ಕನ್ನಡ ಮಾಸ ಪತ್ರಿಕೆಯ ಉಪಸಂಪಾದಕ ಸಂದೇಶ್ ಜೋಸೆಫ್ ಡಿ’ಸೋಜಾ ಹಾಗೂ ಶಾನ್ ಡಿ’ಸೋಜಾ ಅವರು ಎಂ. ಶ್ರೀಧರ್ ಹೂವಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದರು.


































