
ಮಡಿಕೇರಿ ಜ.17 NEWS DESK : ಬೆಟ್ಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಟಗೇರಿ -ಹೆರವನಾಡು-ಕೇಟೋಳಿ-ಕಾರಗುಂದ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿದರು. ಹೆರವನಾಡು ಗ್ರಾಮ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡ ಶಾಸಕರು, ಕಾಳೇರಮ್ಮನ ಐನ್ ಮನೆ, ಕಡ್ಯದ ಐನ್ ಮನೆ ಹಾಗೂ ನಿಂಗಪ್ಪನ ಐನ್ ಮನೆಗೆ ತೆರಳುವ ರಸ್ತೆಗಳಿಗೆ ನೂತನವಾಗಿ ಕಾಂಕ್ರೀಟೀಕರಣಗೊಳಿಸಲು ಭೂಮಿ ಪೂಜೆಯನ್ನು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಈ ಭಾಗದ ಜನರು ಈ ಹಿಂದೆ ತನ್ನನ್ನು ಭೇಟಿ ಮಾಡಿದ ಸಂದರ್ಭ ದಶಕಗಳಿಂದ ಈ ಭಾಗಕ್ಕೆ ಯಾವುದೇ ರೀತಿಯ ಅಭಿವೃದ್ಧಿಗೆ ಸರಕಾರದ ವತಿಯಿಂದ ಅನುದಾನಗಳು ಒದಗಿಲ್ಲ ಹಾಗೂ ಈ ಹಿಂದಿನ ಶಾಸಕರ ಅವಧಿಯಲ್ಲಿ ಹೆಚ್ಚಿನ ಕೆಲಸಗಳು ಆಗಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಜನರ ಮನವಿಗೆ ಸ್ಪಂದಿಸಿದ ಎ.ಎಸ್ ಪೊನ್ನಣ್ಣ ಅವರು ತಕ್ಷಣವೇ ಈ ಭಾಗಕ್ಕೆ ಅಭಿವೃದ್ಧಿಪಡಿಸಲು ಅನುದಾನವನ್ನು ಒದಗಿಸಿ ಜನರ ಬೇಡಿಕೆಗೆ ಸ್ಪಂದಿಸಿದ್ದರು. ಇಂದು ಈ ಎಲ್ಲಾ ಭಾಗಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕರು ಶುಭ ಕೋರಿದರು. ಈ ಸಂದರ್ಭ ಹೆರವನಾಡು ಮೇದರ ಸಮುದಾಯ ಭವನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಶಾಸಕರು ಕುಡಿಯುವ ನೀರು, ರಸ್ತೆ ಹಾಗೂ ಇತರ ವಿಷಯಗಳ ಬಗ್ಗೆ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ ಕೂಡಲೇ ಪರಿಹಾರ ಮಾಡಿಕೊಡಲು ಸೂಚಿಸಿದರು. ಬೆಟ್ಟಗೇರಿ ಪಂಚಾಯಿತಿ ಅಧ್ಯಕ್ಷರು ಕಮಲ ಉತ್ತಯ್ಯ, ಮುಖಂಡರು ಕೇಟೋಳಿ ಮೋಹನ್ ರಾಜ್, ಕುಮಾರ್, ದೀಪಕ್, ಬೆಟ್ಟಗೇರಿ ವಲಯ ಅಧ್ಯಕ್ಷರು, ಕೊಡಗನ ತೀರ್ಥ ಪ್ರಸಾದ್, ಪಕ್ಷದ ಮುಖಂಡರಾದ ಸೂರಜ್ ಹೊಸೂರು, ಸುರೇಶ್, ನಾಪ್ಪಂಡ ಗಣೇಶ್, ಸಾಬು, ಹನೀಫ್ , ಜಿಲ್ಲಾ ಕಾಂಗ್ರೆಸ್ ವಕ್ತರರು ತೆನ್ನಿರ ಮೈನಾ, ತುಳಸಿ ಗಾಂಧಿ ಪ್ರಸಾದ್, ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ಹಂಸ ಕೊಡಿ, ಸೋಮಣ್ಣ, ಬಶೀರ್, ರೀತಿನ್, ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.









