
ಮಡಿಕೇರಿ NEWS DESK ಜ.17 : ಸ್ನೇಹಜೀವಿ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಹಿರಿಯ ನಿರ್ದೇಶಕ, ಸಮಾಜ ಸೇವಕ ಹಾಗೂ ಮಡಿಕೇರಿಯ ಏಲಕ್ಕಿ ವ್ಯಾಪಾರಿ ಬಾಬುಚಂದ್ರ ಉಳ್ಳಾಗಡ್ಡಿ (78) ಅವರು ಇಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅಪಾರ ಸ್ನೇಹಿತರನ್ನು ಹೊಂದಿದ್ದ ಸ್ನೇಹಜೀವಿ ಉಳ್ಳಾಗಡ್ಡಿ ಅವರು ಅತ್ಯಂತ ಚಟುವಟಿಕೆಯ ವರ್ತಕರಾಗಿದ್ದರು. ಇತ್ತೀಚೆಗೆ ತಮಗೆ ಸಿಕ್ಕ ಸ್ನೇಹಿತರ ಬಳಿ ಅವರು ಹೇಳುತ್ತಿದ್ದ ಒಂದೇ ಒಂದು ಮಾತು “ನನಗೂ ವಯಸ್ಸಾಯಿತು, ವ್ಯಾಪಾರಕ್ಕೂ ವಯಸ್ಸಾಯಿತು” ಎಂದು. ಅವರ ಅಗಲಿಕೆಯಿಂದ ವರ್ತಕ ವೃಂದ ಹಾಗೂ ಚೇಂಬರ್ ಆಫ್ ಕಾಮರ್ಸ್ ತೀವ್ರ ದು:ಖವನ್ನು ವ್ಯಕ್ತಪಡಿಸಿದೆ. ಕಾಕತಾಳೀಯ ಎಂಬಂತೆ ಬಾಬುಚಂದ್ರ ಉಳ್ಳಾಗಡ್ಡಿ ಅವರು ತಮ್ಮ ಸ್ಟೇಟಸ್ ನಲ್ಲಿ ಇಂದು ಬೆಳಿಗ್ಗೆ 6.14 ಕ್ಕೆ ಹಾಕಿಕೊಂಡ ಸಂದೇಶ ಕಾಕತಾಳೀಯವಾಗಿದೆ.
*ಅವರು ಹಾಕಿಕೊಂಡ ಸಂದೇಶ ಇಲ್ಲಿದೆ*









