
ಸುಂಟಿಕೊಪ್ಪ ಜ.19 NEWS DESK : ಶ್ರೀಮದ್‍ಭಗವದ್ಗೀತಾ ಅಧ್ಯಯನದಿಂದ ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಲೌಕಿಕ ಜೀವನದಲ್ಲಿ ಕೂಡ ನಾವು ಯಶಸ್ಸನ್ನು ಸಾಧಿಸಬಹುದು ಎಂದು ಪಂಡಿತ ಲೋಕಾನಂದ ಆರ್ಯ ಹೇಳಿದ್ದಾರೆ. ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅತ್ತೂರು ನಲ್ಲೂರು ಗ್ರಾಮದಲ್ಲಿ ಶ್ರೀ ಬ್ರಹ್ಮಜ್ಞಾನ ಧ್ಯಾನ ಮಂದಿರ ಸಭಾಂಗಣದಲ್ಲಿ ಆಯೋಜಿತವಾಗಿದ್ದ ಗೀತಾ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪೋಷಕರಿಗೆ ಮತ್ತು ಆಸಕ್ತರಿಗೆ ಶ್ರೀಮದ್‍ಭಗವದ್ಗೀತಾ ಗ್ರಂಥವನ್ನು ಉಚಿತವಾಗಿ ನೀಡುವ ಯೋಜನೆಯನ್ನು ಚಾಲನೆಗೊಳಿಸಿ ಮಾತನಾಡಿದರು. ಬ್ರಿಟಿಷರ ಮೆಕಾಲೆ ಶಿಕ್ಷಣದಿಂದ ಭಾರತದಲ್ಲಿ ಗುರುಕುಲ ಪದ್ಧತಿ ಶಿಕ್ಷಣ ಮದ್ಯವಾಗಿದ್ದ ಸಂಸ್ಕøತ ಮತ್ತು ಧರ್ಮ ಶಿಕ್ಷಣ ಹಾಳಾಯಿತು. ಇಂಗ್ಲಿಷ್ ಶಿಕ್ಷಣ ಪಾಶ್ಚಿಮಾತ್ಯ ಬದುಕಿನ ಶೈಲಿಯನ್ನು ನಮ್ಮ ಮೇಲೆ ಏರಿದ್ದು, ನಮ್ಮತನ ಕಳೆದು ಹೋಗಿ ಯಾವುದೇ ರೀತಿಯ ಪದ್ಧತಿ ಪರಂಪರೆ ಆಚಾರ ವಿಚಾರಗಳು ನಮ್ಮಗೆ ಗೊತ್ತಿಲ್ಲದಂತಹ ಪರಿಸ್ಥಿತಿಗೆ ತಲುಪಿದ್ದೇವೆ. ಶ್ರೀಮದ್‍ಭಗವದ್ಗೀತೆಯು 4 ವೇದಗಳ ಸಾರವಾಗಿದ್ದು, ಇದರ ಅಧ್ಯಯನದಿಂದ ನಮ್ಮ ಆಚಾರ ವಿಚಾರಗಳಲ್ಲಿ ಲೌಕಿಕ ಮತ್ತು ಪರಮಾರ್ಥಿಕ ವಿಚಾರಗಳಲ್ಲಿ ಅದ್ಭುತ ಸಾಧನೆಯನ್ನು ಮಾಡುವುದರ ಮೂಲಕ ಮೋಕ್ಷ ಸಾಧನೆಗೆ ಮುಂದಾಗಬೇಕೆಂದು ಅವರು ಕರೆ ನೀಡಿದರು. ಸಂಸ್ಕøತ ಭಾಷೆಯ ಪುನರುತಾನ ಮನೆ ಮನೆಗಳಲ್ಲಿ ಶ್ರೀಮದ್‍ಭಗವದ್ಗೀತೆಯೊಂದಿಗೆ ನಮ್ಮ ಧರ್ಮದ ಆಚರಣೆಯನ್ನು ಮಕ್ಕಳಲ್ಲಿ ಮತ್ತು ಯುವಜನತೆಯಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆರೋಗ್ಯ ನೆಮ್ಮದಿಗಾಗಿ ಮಾತ್ರವಲ್ಲದೆ ಲೋಕ ಕಲ್ಯಾಣಕ್ಕಾಗಿ ಕೂಡ ನಾವು ಶ್ರಮಿಸಿದಂತಾಗುತ್ತದೆ ಎಂದು ಅವರು ಹೇಳೀದರು. ಮಂದಿರದ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷರಾದ ಎಂ.ವಿ.ರಘುನಾಥ ಅವರು ಮಾತನಾಡಿ, ಶ್ರೀಮದ್‍ಭಗವದ್ಗೀತಾ ಅದ್ಯಯನವು ವೇದೋಕ್ತ ಧರ್ಮ ಆಚರಣೆಗೆ ಪೂರಕ ಎಂದು ಹೇಳಿದರಲ್ಲದೆ ಆದ್ಯಾತ್ಮಿಕ ಮಾರ್ಗದಲ್ಲಿ ಮೋಕ್ಷ ಸಾಧನೆಗೆ ತೊಡಗಲು ಶ್ರೀಮದ್‍ಭಗವದ್ಗೀತಾ ಅದ್ಯಯನವು ಮೊದಲ ಮೆಟ್ಟಿಲಾಗಿದೆ ಎಂದು ಅವರು ಹೇಳಿದರು. ರಾಮಾಯಣ, ಮಹಾಭಾರತ ಉಪನಿಶತ್ತುಗಳು 18 ಪುರಾಣಗಳು ಮತ್ತು ಉಪಪುರಾಣಗಳ ಆದ್ಯಯನ ಅರ್ಥ ಮಾಡಿಕೊಳ್ಳುವಿಕೆಗೆ ಶ್ರೀಮದ್‍ಭಗವದ್ಗೀತಾ ಗ್ರಂಥ ಶಿಖರಪ್ರಾಯವಾಗಿದೆ ಎಂದು ಬಣ್ಣಿಸಿದರು. ಗೀತಾ ಜ್ಞಾನ ಯಜ್ಞನವು ಹಂತ ಹಂತವಾಗಿ ಎಲ್ಲಾರನ್ನು ತಲುಪಲು ಪ್ರಯತ್ನಿಸುತ್ತಿದ್ದು, ಹಂತ ಹಂತವಾಗಿ ಧಾರ್ಮಿಕ ಪ್ರವಚನ ಸತ್ಸಂಗಗಳು ಮುಂಬರುವ ದಿನಗಳಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿಯ ತುಂಗಾಮ್ಮ ವೆಂಕಪ್ಪ, ವಾರಿಜ ರಘೂನಾಥ್, ಕೃಷ್ಣಪ್ಪ, ಸಿದ್ದಪ್ಪ, ಬಿ.ಸಿ.ದಿನೇಶ್ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.









