
ಮಡಿಕೇರಿ ಜ.19 NEWS DESK : ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿಯಲ್ಲಿ ಶ್ರೀ ರಾಮ ಲಲ್ಲಾನ ಭವ್ಯ ಮಂದಿರ ನಿರ್ಮಾಣವಾಗಿ ಭಕ್ತ ಜನಕೋಟಿಗೆ ಲೋಕಾರ್ಪಣೆಯಾದ ಪುಣ್ಯ ದಿನದ ಪ್ರಯುಕ್ತ ಮಡಿಕೇರಿಯ ಶ್ರೀ ರಾಮ ಜನ್ಮ ಭೂಮಿ ಸೇವಾ ಸಮಿತಿಯಿಂದ ನಿರಂತರವಾಗಿ ಅನ್ನ ಪ್ರಸಾದ ವಿತರಣೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಶ್ರೀ ರಾಮ ಲಲ್ಲಾನ ಪ್ರತಿಷ್ಠಾಪನೆಯ ಜ.22 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಹಳೇ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಸಾರ್ವಜನಿಕರಿಗೆ 3ನೇ ವರ್ಷದ ಅನ್ನ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಈ ಪುಣ್ಯ ಕಾರ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಆಗಮಿಸುವಂತೆ ಶ್ರೀ ರಾಮ ಜನ್ಮ ಭೂಮಿ ಸೇವಾ ಸಮಿತಿ ಮನವಿ ಮಾಡಿದೆ.









