
ವಿರಾಜಪೇಟೆ ಜ.23 NEWS DESK : ಕುಶಾಲನಗರದ ರೈತಭವನದಲ್ಲಿ ನಡೆದಲ್ಲಿ ನಡೆದ ರಾಜ್ಯ ಮಟ್ಟದ 4ನೇ ಅಬಾಕಸ್ ಮತ್ತು ಕ್ಯಾಲಿಗ್ರಫಿ ಸ್ಪರ್ಧೆಯಲ್ಲಿ ರೋಟರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ರೋಟರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಚಿರಂತ್, ಚರಣ್, ಲಿಥಿನ್ ಮತ್ತು ಯದುನಂದನ್ (7ನೇ ತರಗತಿ), ರಕ್ಷಿತಾ (5ನೇ ತರಗತಿ), ಮತ್ತು ಫಾದಿಲ್ ಮತ್ತು ರಕ್ಷಕ್ (4ನೇ ತರಗತಿ) ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಚಿರಂತ್ ಅಬಾಕಸ್ ಹಾಗೂ ಕ್ಯಾಲಿಗ್ರಫಿ ಎರಡರಲ್ಲೂ ಪ್ರಥಮ ಬಹುಮಾನವನ್ನು ಮತ್ತು ಯದುನಂದನ್ ಅಬಾಕಸ್‍ನಲ್ಲಿ ತೃತೀಯ ಹಾಗೂ ಕ್ಯಾಲಿಗ್ರಫಿಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.









