Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *‘ಪೌತಿ ಖಾತೆ ಆಂದೋಲನ’ ಮುಂದುವರಿಸಲು ಮಾಜಿ ಶಾಸಕರ ಒತ್ತಾಯ*
ಇತ್ತೀಚಿನ ಸುದ್ದಿಗಳು

*‘ಪೌತಿ ಖಾತೆ ಆಂದೋಲನ’ ಮುಂದುವರಿಸಲು ಮಾಜಿ ಶಾಸಕರ ಒತ್ತಾಯ*

January 23, 20262 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಮಡಿಕೇರಿ ಜ.23 NEWS DESK : ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ ಆರಂಭಿಸಿದ್ದ, ‘ಜಮ್ಮಾಬಾಣೆ’ ಸಮಸ್ಯೆ ಬಗೆಹರಿಕೆಗೆ ಪೂರಕವಾಗಿರುವ ‘ಪೌತಿ ಖಾತೆ ಆಂದೋಲನ’ವನ್ನು ಈಗಿನ ಸರಕಾರ ಮುಂದುವರಿಸಬೇಕು ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಮ್ಮಾಬಾಣೆ’ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿಯ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪ್ರಮುಖರು ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜಮ್ಮಾಬಾಣೆ ಸಮಸ್ಯೆಯ ಶೇ.90ರಷ್ಟನ್ನು ಬಿಜೆಪಿ ಅಧಿಕಾರದ ಅವಧಿಯಲ್ಲಿ ಬಗೆಹರಿಸಲಾಗಿದೆ. ಅದರ ಲಾಭ ಬಿಜೆಪಿಗೆ ಹೋಗುತ್ತದೆ ಎನ್ನುವ ಆತಂಕದಲ್ಲಿರುವ ಕಾಂಗ್ರೆಸ್ ರಾಜಕೀಯ ಕಾರಣಗಳಿಗೋಸ್ಕರ ಬಿಜೆಪಿ ಸರಕಾರದ ಕ್ರಮಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆ.ಜಿ.ಬೋಪಯ್ಯ, 2012ರಲ್ಲಿ ರಾಷ್ಟ್ರಪತಿಗಳ ಅಂಕಿತವಾಗಿ ಬಂದ ಜಮ್ಮಾಬಾಣೆ ವಿಧೇಯಕವನ್ನು ಜಾರಿಗೊಳಿಸಕೂಡದೆಂದು ಸಲ್ಲಿಕೆಯಾಗಿದ್ದ ನಾಲ್ಕು ರಿಟ್ ಪಿಟೀಷನ್‍ಗಳನ್ನು 2024ರಲ್ಲಿ ವಜಾಗೊಳಿಸಿರುವ ರಾಜ್ಯ ಉಚ್ಚ ನ್ಯಾಯಾಲಯ, ಸಮಸ್ಯೆಯ ಬಗೆಹರಿಕೆಗೆ ಅಗತ್ಯ ಆದೇಶವನ್ನು ನೀಡಿ, 30 ದಿನಗಳಲ್ಲಿ ಜಾರಿಗೊಳಿಸುವಂತೆ ತಿಳಿಸಿದ್ದನ್ನು ಉಲ್ಲೇಖಿಸಿದರು. ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾಂಗ್ರೆಸ್ ಸರಕಾರ, ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜಮ್ಮಾಬಾಣೆ ಸಮಸ್ಯೆ ಇತ್ಯರ್ಥಕ್ಕೆ ತಂದ ಕಂದಾಯ ಕಾಯ್ದೆ ತಿದ್ದುಪಡಿಗಳನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಆ ಕಾರಣದಿಂದ ಕಂದಾಯ ಕಾಯ್ದೆ ಸೆಕ್ಷನ್ 127 ಕ್ಕೆ ತಿದ್ದುಪಡಿ ತಂದಿರುವುದಾಗಿ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದರು. ಆದರೆ, ಇವರು ತಂದ ತಿದ್ದುಪಡಿಯ ಟಿಪ್ಪಣಿಯಲ್ಲಿ, ರಿಟ್ ಅರ್ಜಿಯ ನಿರ್ದೇಶನದ ಬಗ್ಗೆ ಪ್ರಸ್ತಾಪವಿಲ್ಲ ಮತ್ತು ‘ನ್ಯಾಯಿಕ ಘೋಷಣೆಗಳ ನಿಟ್ಟಿನಲ್ಲಿ’ ಎಂದು ಮಾತ್ರ ಉಲ್ಲೇಖಿಸಲಾಗಿದೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 2024ರ ಅ.31 ರಂದು ಸುತ್ತೋಲೆ ಹೊರಡಿಸಿ, ನೋಂದಾಯಿತ ಅಲ್ಲದ ಒಪ್ಪಂದ ಪತ್ರಗಳ ಆಧಾರದ ಮೇಲೆ ಮ್ಯುಟೇಷನ್‍ಗೆ ಅವಕಾಶ ಕೂಡದೆನ್ನುವ ಸೂಚನೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಆದರೆ, ಕೊಡಗಿನಲ್ಲಿರುವ ಕೊಡವರು ಹಿಂದೂ ಮಿತಾಕ್ಷರ ಕಾಯ್ದೆ ಮತ್ತು ಹಿಂದೂ ಸಕ್ಸಶನ್ ನಿಯಮಕ್ಕೆ ಒಳಪಡುತ್ತಾರೆ. ಈ ನಿಯಮಗಳಲ್ಲಿ ಹಿಂದೂಗಳು ಬಾಯಿ ಮಾತಿನ ಮೂಲಕ, ಒಪ್ಪಂದ ಪತ್ರಗಳ ಅಥವಾ ನೋಂದಾಯಿತ ಕರಾರಿನ ಮೂಲಕ ಮಾಡಿಕೊಳ್ಳಲು ಅವಕಾಶವಿದೆ. ನೋಂದಾವಣೆ ಎನ್ನುವುದು ಹಿಂದೂಗಳಿಗೆ ಐಚ್ಛಿಕವಾಗಿದೆ. ಈ ವಿಚಾರ ಮಹಾನ್ ಕಾನೂನು ಪಂಡಿತರಿಗೆ ಗೊತ್ತಿದ್ದರು ಅದನ್ನು ಜಾರಿಗೊಳಿಸಲು ಯಾಕೆ ಸಲಹೆ ನೀಡಲಿಲ್ಲ ಎಂದು ಕೆ.ಜಿ.ಬೋಪಯ್ಯ ಪ್ರಶ್ನಿಸಿದರು. ವಿಬಿ ರಾಮ್ ಜಿ ಕಾಯ್ದೆಯಡಿ ಗ್ರಾಮ ಪಂಚಾಯ್ತಿಗಳಿಗೆ, ಗ್ರಾಮಸಭೆಗಳಿಗೆ ಕಾಮಗಾರಿಗಳನ್ನು ನಿರ್ಧರಿಸುವ, ಕ್ರಿಯಾಯೋಜನೆ ತಯಾರಿಸುವ ಹಕ್ಕನ್ನು ನೀಡಲಾಗಿದೆ. ಯೋಜನೆಯಡಿ ಶೇ.40 ರ ಹಣ ನೀಡಲು ಸಾಧ್ಯವಾಗದ್ದರಿಂದ ವಿರೋಧಿಸುತ್ತಿದೆ ಎಂದು ಟೀಕಿಸಿದರು. *‘ಏಜೆಂಟ್’ ಪದ ತೆಗೆಯಿರಿ* ಜಮ್ಮಾಬಾಣೆ ಸಮಸ್ಯೆ ಬಗೆಹರಿಕೆ ಕುರಿತ ವಿಧೇಯಕವನ್ನು ತರುವ ಹಂತದಲ್ಲಿ ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ‘ಪಟ್ಟೆದಾರ’ ಎನ್ನುವವರು ಬ್ರಿಟಿಷರ ಏಜೆಂಟ್ ಎಂದು ಹೇಳಿದ್ದಾರೆ. ತಿಳುವಳಿಕೆ ಇಲ್ಲದೆ ಅಂತಹ ಮಾತನ್ನು ಅವರು ಆಡಿರಬಹುದು. ಆದರೆ, ಈ ವಿಚಾರ ಕಡತಕ್ಕೆ ಸೇರಿದೆ. ಆ ಹಂತದಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಇರುವವರು ಅದನ್ನು ಕಡತದಿಂದ ತೆಗೆಸುವ ಕಾರ್ಯವನ್ನು ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ, ಬಿಜೆಪಿ ಅವಧಿಯಲ್ಲಿ ಜಮ್ಮಾಬಾಣೆ ಸಮಸ್ಯೆಯ ಶೇ.90ರಷ್ಟನ್ನು ಬಗೆಹರಿಸಲಾಗಿತ್ತು. ಉಳಿದ ಶೇ.10 ರಷ್ಟು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸುವ ಹಂತದಲ್ಲೆ, ಎಲ್ಲಾ ಸಮಸ್ಯೆ ಬಗೆಹರಿಸಿರುವುದಾಗಿ ಕಾಂಗ್ರೆಸ್ ಮಂದಿ ಡಂಗೂರ ಸಾರಿ ಕುಣಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಹೆಸರನ್ನು ವಿಬಿ ರಾಮ್ ಜಿ ಎಂದು ಬದಲಿಸಲಾಗಿದೆ. ಮತ್ತೆ ಯೋಜನೆಯಲ್ಲಿ ಮಹಾತ್ಮಾ ಗಂಧಿ ಹೆಸರನ್ನು ಸೇರಿಸಬೇಕೆನ್ನುವ ಕಾಂಗ್ರೆಸ್, ತಾನು ಅಧಿಕಾರದಲ್ಲಿದ್ದ ಸಂದರ್ಭ ತಂದ ಬಹುತೇಕ ಯೋಜನೆಗಳಿಗೆ ನೆಹರು, ಇಂದಿರಾ, ರಾಜೀವ್ ಹೆಸರುಗಳನ್ನು ಇಟ್ಟಿದೆ. ಆ ಸಂದರ್ಭ ಮಹಾತ್ಮಾ ಗಾಂಧೀಜಿ ಅವರ ಹೆಸರು ಅವರ ಗಮನಕ್ಕೆ ಬರಲಿಲ್ಲವೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್‍ಸಿ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಹಾಗೂ ವಕ್ತಾರ ಬಿ.ಕೆ.ಅರುಣ್ ಕುಮಾರ್ ಉಪಸ್ಥಿತರಿದ್ದರು.

 

 

Share. Facebook Twitter Pinterest LinkedIn Tumblr Email WhatsApp
Previous Articleಕಾನೂನು ಅರಿವು ಮತ್ತು ನೆರವು ಶಿಬಿರ : ಹಿರಿಯ ನಾಗರಿಕರು ಸಮಾಜದ ಆಸ್ತಿ : ಹಿರಿಯ ಸಿವಿಲ್ ನ್ಯಾಯಾಧೀಶೆ ಶುಭ*
Next Article ಯಶಸ್ವಿನಿ ಯೋಜನೆ : ಸದಸ್ಯತ್ವ ಮತ್ತು ಹೊಸ ಸದಸ್ಯರ ನೋಂದಣಿಗೆ ಅವಕಾಶ

Related Posts

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಮಡಿಕೇರಿ, NEWS DESK ಫೆ.11 : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ…

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.