
ವಿರಾಜಪೇಟೆ ಜ.24 NEWS DESK : ವಿರಾಜಪೇಟೆಯ ಅಮ್ಮತ್ತಿ ಕಾರ್ಮಾಡುವಿನ ರಾಮಮಂದಿರದಲ್ಲಿ ಜಾತ್ಯತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಜೆಡಿಎಸ್ ಎಸ್‍ಸಿ-ಎಸ್ಟಿ ಘಟಕದ ಜಿಲ್ಲಾಧ್ಯಕ್ಷೆ, ಗ್ರಾ.ಪಂ ಮಾಜಿ ಸದಸ್ಯೆ ಅಮ್ಮತಿ ಜಯಮ್ಮ ಅವರ ನೇತೃತ್ವದಲ್ಲಿ ಪುಟಾಣಿ ಮಕ್ಕಳು, ಸಾರ್ವಜನಿಕರು, ಮಹಿಳೆಯರು ಹಾಗೂ ಪಕ್ಷದ ಮುಖಂಡರು ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸದರು. ಈ ಸಂದರ್ಭ ವಿರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜೀದ್ ಚೋಕಂಡಳ್ಳಿ, ಮಡಿಕೇರಿ ತಾಲೂಕಿನ ಅಲ್ಪಸಂಖ್ಯಾತರ ಘಟಕದ ಅಶ್ರಫ್, ಸಿದ್ದಾಪುರದ ಸಿಯಾಬುದ್ದೀನ್, ವಿರಾಜಪೇಟೆ ತಾಲ್ಲೂಕು ಕಾರ್ಯದರ್ಶಿ, ಹರ್ಷ ಟಿ.ಆರ್, ಮೇಘನಾ, ಸುಮತಿ, ಗೀತಾ, ಸರಸು ಸೇರಿದಂತೆ ಇತರ ಕಾರ್ಯಕರ್ತರು ಹಾಜರಿದ್ದರು.










