
ಮಡಿಕೇರಿ ಜ.24 NEWS DESK : ಅಂತರರಾಷ್ಟ್ರೀಯ ಶೋಲಿಂಗ್ ಕುಂಗ್ಫು ಸಂಸ್ಥೆಯ ವತಿಯಿಂದ ಚೆಟ್ಟಿಮಾನಿಯ ಸಾಂದೀಪನಿ ಶಾಲೆಯಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಚೆಟ್ಟಿಮಾನಿಯ ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಳದಿ, ಅರೇಂಜ್ ಹಾಗೂ ಹಸಿರು ಬೆಲ್ಟ್ ಪಡೆದು ಸಾಧನೆ ಮಾಡಿದ್ದಾರೆ. ಶಾಲೆಯ ಒಟ್ಟು ಮೂವತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದು, ಹನ್ನೊಂದು ವಿದ್ಯಾರ್ಥಿಗಳು ಹಳದಿ, ಹತ್ತು ವಿದ್ಯಾರ್ಥಿಗಳು ಅರೇಂಜ್, ಒಂಭತ್ತು ವಿದ್ಯಾರ್ಥಿಗಳು ಹಸಿರು ಬೆಲ್ಟ್ ಗೆದ್ದುಕೊಂಡಿದ್ದಾರೆ. ಪರೀಕ್ಷಾರ್ಥಿಗಳಾಗಿ ಇಂಡಿಯನ್ ಗ್ರ್ಯಾಂಡ್ ಮಾಸ್ಟರ್ ಶಿಫು ಇಂದ್ರಜಿತ್, ಇಂಡಿಯನ್ ತರಬೇತುದಾರರಾದ ದೇವರಾಜ್, ಕೊಡಗು ಜಿಲ್ಲೆಯ ತರಬೇತುದಾರರಾದ ವೇಣು ಗೋಪಾಲ್, ಕರ್ನಾಟಕ ರಾಜ್ಯದ ತರಬೇತುದಾರರಾದ ನಾಟೋಳಂಡ ನಂಜುಂಡ ಪಾಲ್ಗೊಂಡಿದ್ದರು. ಉತ್ತಿರ್ಣರಾದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಅಭಿನಂದಿಸಿದರು.









