
ಶನಿವಾರಸಂತೆ NEWS DESK ಜ.24 : ಶನಿವಾರಸಂತೆ ಒಕ್ಕಲಿಗರ ಸಂಘದ ನೂತನ ಆಡಳಿತ ಮಂಡಳಿ ರಚನೆಗೊಂಡಿದ್ದು, ಅಧ್ಯಕ್ಷರಾಗಿ ಕೇಶವಮೂರ್ತಿ ಆಯ್ಕೆಯಾಗಿದ್ದಾರೆ. ಗೌರವ ಸಲಹಾ ಅಧ್ಯಕ್ಷರಾಗಿ ಕಳಲೆ ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಆರ್.ಹರೀಶ್ ಕುಮಾರ್, ಉಪಾಧ್ಯಕ್ಷರಾಗಿ ಜೆ.ಗಿರೀಶ್, ಶೆಟ್ಟಿಗನಹಳ್ಳಿ ಸಾಗರ್, ಪುಷ್ಪ ಪೊನ್ನಪ್ಪ, ಕಾರ್ಯದರ್ಶಿಯಾಗಿ ಚಂದ್ರಕಾಂತ್, ಖಜಾಂಚಿಯಾಗಿ ಎಸ್.ಡಿ.ಬಸವರಾಜು, ಸಂಘಟನಾ ಕಾರ್ಯದರ್ಶಿಗಳಾಗಿ ತಾಳೂರು ಪುನೀತ್, ಮೂದ್ರೊಳ್ಳಿ ವಿನೋದ್, ಎಂ.ಡಿ.ಯೋಗಾನಂದ, ಚಂದನ್, ಅಜ್ಜಳ್ಳಿ ನವೀನ್, ಗಂಗನಹಳ್ಳಿ ಮಂಜುನಾಥ್ ಹಾಗೂ ಪೂರ್ಣಿಮಾ ಕಿರಣ್ ಆಯ್ಕೆಯಾದರು. ನೂತನ ಆಡಳಿತ ಮಂಡಳಿಯ ಮೊದಲ ಸಭೆ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಸ್ಥಾಪಕ ಅಧ್ಯಕ್ಷ ತಿಪ್ಪಳ್ಳಿ ಸುಬ್ಬಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯತ್ವ ನೋಂದಾವಣಿಗೆ ಸ್ಥಾಪಕಾಧ್ಯಕ್ಷರು ಚಾಲನೆ ನೀಡಿದರು. ನೂತನ ಅಧ್ಯಕ್ಷ ಕೇಶವಮೂರ್ತಿ ಅವರು ಮಾತನಾಡಿ ಸರ್ವರು ನಮ್ಮೊಂದಿಗೆ ಕೈಜೋಡಿಸುವುದರೊಂದಿಗೆ ಸಂಘವನ್ನು ಕಟ್ಟಿ ಬೆಳೆಸಲು ಸಹಕರಿಸಬೇಕೆಂದು ಮನವಿ ಮಾಡಿದರು. ಪೂರ್ಣಿಮಾ ಕಿರಣ್ ಪ್ರಾರ್ಥಿಸಿದರು, ನೂತನ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಸ್ವಾಗತಿಸಿದರು, ಕಾರ್ಯದರ್ಶಿ ಚಂದ್ರಕಾಂತ್ ವಂದಿಸಿದರು. ಮಾಜಿ ಅಧ್ಯಕ್ಷರಾದ ಜಗನ್ಪಾಲ್ ಹಾಗೂ ಅಪ್ಪಸ್ವಾಮಿ ಗೌಡ್ರು ಉಪಸ್ಥಿತರಿದ್ದರು. ಸಭೆಯಲ್ಲಿ ಮೃತರಿಗೆ ಸಂತಾಪ ಸೂಚಿಸಲಾಯಿತು.












