
ಮಡಿಕೇರಿ ಜ.26 NEWS DESK : ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಿಲಯದ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪಿ.ಆನಂದನ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದ ಸಂವಿಧಾನವು ಜಾರಿಗೆ ಬಂದು ಭಾರತವು ಗಣರಾಜ್ಯವಾದ ಈ ದಿನವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ದಿನವಾಗಿದೆ ಎಂದರು. ಕಾರ್ಯಕ್ರಮ ನಿರ್ವಾಹಕ ಅಧಿಕಾರಿ ಎಂ.ಶಕುಂತಲಾ ಅವರು ಮಾತನಾಡಿ, ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವಲ್ಲಿ ಶ್ರವ್ಯ ಮಾಧ್ಯಮವಾದ ಆಕಾಶವಾಣಿಯ ಪಾತ್ರ ಪ್ರಮುಖವಾಗಿದೆ ಎಂದರು. ಇಂಜಿನಿಯರಿಂಗ್ ವಿಭಾಗದ ಕೆ.ಎಸ್.ಉದಯಕುಮಾರ್, ಎ.ರೆಂಜಿತ್ ಕುಮಾರ್, ಎ.ಎಸ್.ಸೋಮಶೇಖರ್ ಹಾಗೂ ಸಿಬ್ಬಂದಿಗಳಾದ ಟಿ.ಸಿದ್ದೋಜಿ ರಾವ್,ಪುರುಷೋತ್ತಮ, ಭದ್ರತಾ ಸಿಬ್ಬಂದಿಗಳಾದ ಸುಬ್ರಾಯ ಕಾಸ್ಪಾಡಿ, ಕೇಡನ ವಾಸು ಮತ್ತಿತರ ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು.










