
ಮಡಿಕೇರಿ ಜ.26 NEWS DESK : ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಎಸ್.ಜಿ ಉಮೇಶ್ ಟ್ರಸ್ಟಿ ಎಂ. ಶ್ರೀಧರ್ ಹೂವಲ್ಲಿ ಹಾಗೂ ಪತ್ರಿಕಾ ಭವನದ ಸಿಬ್ಬಂದಿಗಳಾದ ಯಮುನಾ.ಕೆ.ಪಿ, ರಾಜೇಶ್‍ಬಿ.ಪಿ, ಶೈನಿ.ಹೆಚ್.ಎಂ ಹಾಗೂ ವರ್ತಕರಾದ ರೆಹಮಾನ್, ಶೇಖ್‍ಅಹಮದ್, ಮಕ್ಕಳಾದ ಮೌಲ್ಯ ಬಜೆಕೋಡಿ, ತನುಶ್ರೀ.ಎಸ್.ಯು ಹಾಗೂ ಇನ್ನಿತತರು ಭಾಗವಹಿಸಿದ್ದರು.









