
ವಿರಾಜಪೇಟೆ ಜ.26 NEWS DESK : ಬೈತೂರು ಉತ್ಸವ ಹಿನ್ನೆಲೆ ದಕ್ಷಿಣ ಕೊಡಗಿನ ವಿರಾಜಪೇಟೆಯಿಂದ ಕೇರಳದ ಬೈತೂರಪ್ಪ ದೇವಾಲಯಕ್ಕೆ ಕೊಡಗಿನ ಯುವಕರು 4ನೇ ವರ್ಷದ ಪಾದಯಾತ್ರೆ ನಡೆಸಿದರು. ಭಕ್ತರಾಗಿರುವ ಚೆಟ್ಟೋಳಿರ ಶರತ್ ಸೋಮಣ್ಣ, ಕಾಳಮಂಡ ರಾಬಿನ್ ಅಚ್ಚಮ್ಮ, ಮಾಚಂಗಡ ಸಚಿನ್ ತಮ್ಮಯ್ಯ, ಮುದ್ದಿಯಡ ಕರಣ್ ಕಾವೇರಪ್ಪ, ಚೈಯ್ಯಂಡ ಕೀರ್ತನ್ ಅಯ್ಯಪ್ಪ ಇವರುಗಳೊಂದಿಗೆ ಯುವತಿಯಾದ ಅಳ್ಳಂಡ ಶಹನಾ ಚೋಂದಮ್ಮ ಪಾದಯಾತ್ರೆ ಮಾಡಿದರು. ಜ.22 ರಂದು ವಿರಾಜಪೇಟೆಯಿಂದ ಪಾದಯಾತ್ರೆ ಪ್ರಾರಂಭಿಸಿದ ಇವರು ಪೆರುಂಬಾಡಿ, ಮಾಕುಟ್ಟ, ಕೂಟುಪೊಳೆ, ಹುಲಿಕಲ್ ಮೂಲಕ ಪಾದಯಾತ್ರೆ ಮಾಡಿ ಸುಮಾರು 40 ಕಿ.ಮಿ. ಕ್ರಮಿಸಿ ದೇವಾಲಯಕ್ಕೆ ತಲುಪಿದರು. ನಂತರ ನಾಲ್ಕು ದಿನ ಅಲ್ಲಿಯೇ ತಂಗಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿ, ವಿರಾಜಪೇಟೆಗೆ ಹಿಂತಿರುಗಿದರು.









