
ಮಡಿಕೇರಿ ಜ.26 NEWS DESK : ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸಿದರು. ಕೆದಮುಳ್ಳೂರು ಪಂಚಾಯತ್ ವ್ಯಾಪ್ತಿಯಲ್ಲಿ ಕ್ಲಬ್ ಮಹೇಂದ್ರ ಕಡೆಗೆ ತೆರಳುವ ಸಾರ್ವಜನಿಕ ರಸ್ತೆಯ ಅಭಿವೃದ್ಧಿಗಾಗಿ ರೂ.10 ಲಕ್ಷಗಳನ್ನು ಒದಗಿಸಿದ್ದು, ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ದಿನಕ್ಕೆ ನೂರಾರು ಜನರು ಓಡಾಡುವ ಈ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಳ್ಳುವ ಉದ್ದೇಶದಿಂದ ಸಾರ್ವಜನಿಕರ ಕೋರಿಕೆ ಮೇರೆಗೆ ರಸ್ತೆ ಅಭಿವೃದ್ಧಿಗೊಳ್ಳಲು ಅನುದಾನ ಒದಗಿಸಿದ್ದೇನೆ. ಸಾರ್ವಜನಿಕರ ಯಾವುದೇ ಪೂರಕವಾದ ಬೇಡಿಕೆಗೆ ಸ್ಪಂದಿಸುತ್ತಾ, ಅಗತ್ಯ ಎನಿಸಿದರೆ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ತಾನು ಸಹಕಾರ ನೀಡುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು. ಅನುದಾನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ರಸ್ತೆ ಇಲ್ಲಿ ನಿರ್ಮಾಣವಾಗುವಂತಾಲಿ ಎಂದು ಶಾಸಕರು ಶುಭ ಹಾರೈಸಿದರು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಕೆಡಿಪಿ ಸದಸ್ಯರು ಮಾಳೇಟೀರ ಪ್ರಶಾಂತ್, ವಲಯ ಅಧ್ಯಕ್ಷರು ನಡಿಕೇರಿಯಂಡ ಮಹೇಶ್ ಪಂಚಾಯಿತಿ ಅಧ್ಯಕ್ಷರು ಜೇಫ್ರಿ ಉತ್ತಪ್ಪ, ಜಾಲಚಂಗಪ್ಪ, ಮಿಟ್ಟು ಅಯ್ಯಪ್ಪ, ಅಮಿತ್ ಬೇಪಡಿಯಂಡ,ಮಿತಲ್ತಂಡ ಇಸ್ಮಾಯಿಲ್, ಆಲಿ, ಡ್ಯಾನಿ, ಜಿತನ್ ಗುತ್ತಿಗೆದಾರ ರಂಜು ಮಾದಪ್ಪ, ರಾಜ, ಮಹಾದೇವ, ಮಂಜುನಾಥ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.









