
ಸುಂಟಿಕೊಪ್ಪ ಜ.27 NEWS DESK : ದೇಶದ ಪ್ರತಿಯೊಬ್ಬ ನಾಗರೀಕರಿಗೆ ಸಂವಿಧಾನದ ಅರಿವು ಮತ್ತು ತಿಳುವಳಿಕೆ ಇರಬೇಕು. ಸಂವಿಧಾನ ಓದದವರು ದೇಶದ ಅಭಿವೃದ್ಧಿಯ ಹಿನ್ನಡೆಗೆ ಕಾರಣರಾಗುತ್ತಾರೆ ಎಂದು ಶಿಕ್ಷಕ ಸತೀಶ್ ಕಾಜೂರು ಹೇಳಿದ್ದಾರೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಸುಂಟಿಕೊಪ್ಪ ಜಿ.ಯಂ.ಪಿ.ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು ನಾಗರೀಕರಿಗೆ ತಮ್ಮ ಹಕ್ಕುಗಳು ಮತ್ತು ಜವಾಬ್ಧಾರಿಗಳ ಬಗ್ಗೆ ಅರಿವಿದ್ದು, ಸಂವಿಧಾನ ಬದ್ಧವಾಗಿ ನಡೆದುಕೊಂಡಾಗ ದೇಶದ ಏಳಿಗೆಗೆ ನಾವು ಕೊಡುಗೆ ನೀಡಿದಂತಾಗುತ್ತದೆ. ಭಾರತದ ಸಂವಿಧಾನವು ವಿಶ್ವದಲ್ಲೇ ಏಕೈಕ ಲಿಖಿತ ಸಂವಿಧಾನವಾಗಿದ್ದು, ಆಯಾ ಆಯಾ ಕಾಲಕ್ಕೆ ಜನರು ಒಪ್ಪುವ ರೀತಿಯಲ್ಲಿ ಅವರ ಹಕ್ಕುಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ತಿದ್ದುಪಡಿ ಮತ್ತು ಬದಲಾವಣೆಗಳನ್ನು ಮಾಡಲಾಗಿದೆ. 1950 ರಲ್ಲಿ ಜಾರಿಗೆ ಬಂದ ಸಂವಿಧಾನವು ಇನ್ನು ಜೀವಂತವಾಗಿದೆ. ಆದರೆ ಪಕ್ಕದ ಪಾಕಿಸ್ಥಾನದಲ್ಲಿ ಎಷ್ಟೋ ಬಾರಿ ಮತ್ತು ನೇಪಾಳ ಮತ್ತು ಬಾಂಗ್ಲಗಳಲ್ಲಿ ಹಲವು ಬಾರೀ ಅವರ ಸಂವಿಧಾನವು ಬುಡಮೇಲಾಗಿದೆ ಎಂದು ಸತೀಶ್ ಕಾಜೂರು ಹೇಳಿದರು. ಭಾರತದಂತಹ ವಿವಿಧ ಧರ್ಮಗಳ, ವಿವಿಧ ಭಾಷೆಗಳ ಬಹು ಸಂಸ್ಕøತಿಯ ನಾಡಿನಲ್ಲಿ ಎಲ್ಲಾರೂ ಒಪ್ಪುವಂತಹ ಸಂವಿಧಾನ ರಚನೆ ಸವಾಲಿನ ಕೆಲಸ ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಬುದ್ಧಿವಂತಿಕೆ ಅವರ ದೂರದರ್ಶಿತ್ವ ಅಧ್ಯಾಯನದ ಫಲವಾಗಿ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ನಾವು ಹೊಂದಿದ್ದೇವೆ ಎಂದು ಸತೀಶ್ ಕಾಜೂರು ಬಣ್ಣಿಸಿದರು. ಪೊಲೀಸ್ ಇಲಾಖೆ ವತಿಯಿಂದ ರಾಷ್ಟ್ರಧ್ವಜಕ್ಕೆ ಗೌರವ ರಕ್ಷೆ ಸಮರ್ಪಿಸಿದರು. ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಧ್ವಜಾರೋಹಣ ನೇರವೇರಿಸಿದರು. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಅಧ್ಯಕ್ಷತೆಯನ್ನ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ವಹಿಸಿ ದಿನದ ಮಹತ್ವದ ಕುರಿತು ಮಾತನಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ಶಬ್ಬೀರ್, ಆಲಿಕುಟ್ಟಿ, ರಫೀಕ್‍ಖಾನ್, ಪ್ರಸಾದ್‍ಕುಟ್ಟಪ್ಪ, ಸೋಮನಾಥ್, ವಸಂತಿ, ಶಾಂತಿ, ನಾಗರತ್ನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ಕೆ.ಇ.ಕರೀಂ, ರೋಸ್‍ಮೇರಿ ರಾಡ್ರಿಗಸ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಕಾರ್ಯದರ್ಶಿ ರಹೆನಾ ಫೈರೋಜ್, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಲತಾ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾದ್ಯಾಯ ಪಿ.ಇ.ನಂದ, ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾದ ಬಾಲಕೃಷ್ಣ, ಪಂಚಾಯಿತಿ ಲೆಕ್ಕ ಪರಿಶೋಧಕಿ ಚಂದ್ರಕಲಾ, ಸಿಬ್ಬಂದಿ ಸಂಧ್ಯಾ, ಡಿ.ಎಂ.ಮಂಜುನಾಥ್, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾದ್ಯಾಯನಿ ಗೀತಾ, ವರ್ಕಶಾಫ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್, ಪ್ರಾ.ಕೃ.ಪ.ಸ.ಸಂ.ನಿರ್ದೇಶಕಿ ಲೀಲಾಮೇದಪ್ಪ, ನಿವೃತ್ತ ಶಿಕ್ಷಕಿ ಮುತ್ತಮ್ಮ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಪದಾಧಿಕಾರಿಗಳು, ಸ್ತ್ರೀಶಕ್ತಿ ಸಂಘದ ಸದಸ್ಯರು ಮತ್ತಿತರರು ಇದ್ದರು. ಪುಟಾಣಿ ವಿದ್ಯಾರ್ಥಿಗಳ ಭಾರತಾಂಬೆಗೆ ನಮನ ಸಲ್ಲಿಸುವ ಅಂಗಸಾಧನೆಯ ನೃತ್ಯ ಜನಮನ ರಂಜಿಸಿತು. ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ವಿವಿಧ ಶಾಲೆಗಳ ಮಕ್ಕಳು ನೇರೆದಿದ್ದವರನ್ನು ಮನರಂಜಿಸಿದರು. ಇದೇ ಸಂದರ್ಭದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಎಂ.ಎಡ್ ಪದವಿಯಲ್ಲಿ 5 ಚಿನ್ನದ ಪದಕ 1 ನಗದು ಬಹುಮಾನಕ್ಕೆ ಭಾಜನರಾದ ಬಿ.ಪಿ.ಕೃತಿಕಾ, ನಿವೃತ್ತಿ ಸ.ಮಾ.ಪ್ರಾ.ಮುಖ್ಯೋಪಾದ್ಯಾಯನಿ ಗೀತಾ ಪಾರ್ಥ, ಸಂ.ಅಂ.ಶಾಲೆಯ ನಿವೃತ್ತ ಶಿಕ್ಷಕಿ ಮುತ್ತಮ್ಮ, ಸ.ಪ.ಪೂ.ಕಾ.ನಿವೃತ್ತ ಉಪನ್ಯಾಸಕಿ ಪದ್ಮ, ಸುಂಟಿಕೊಪ್ಪ ಪಂಚಾಯಿತಿ ವಿಆರ್‍ಡಬ್ಲ್ಯು ಸಿಬ್ಬಂದಿ ಮಂದಣ್ಣ ಅವರುಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.









