



ಮಡಿಕೇರಿ ಜ.30 NEWS DESK : ಹಾಕತ್ತೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ನೂತನ ವಲಯಾಧ್ಯಕ್ಷ ಬಿ.ಕೆ.ನಾರಾಯಣ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಾಜಿ ಅಧ್ಯಕ್ಷ ಪಿಯೂಷ್ ಪೆರೇರ ಅವರ ಉಪಸ್ಥಿತಿಯಲ್ಲಿ ನಡೆಯಿತು. ಕಗ್ಗೋಡ್ಲುವಿನ ನೆಲ್ಲಿಪೂಣಿ ಭುವನ್ ಅವರ ಮನೆಯಲ್ಲಿ ಮೂರು ಬೂತ್ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬೂತ್ ಗಳ ನೂತನ ಅಧ್ಯಕ್ಷರು, ಬಿಎಲ್‍ಓಗಳ ನೇಮಕ, ಪಕ್ಷ ಸಂಘಟನೆ ಮತ್ತಿತರ ವಿಚಾರಗಳ ಕುರಿತು ಚರ್ಚಿಸಲಾಯಿತು. ವಲಯ ಉಪಾಧ್ಯಕ್ಷರಾಗಿ ಕೆ.ವೈ.ಜಲೀಲ್ ಹಾಗೂ ಕಾರ್ಯದರ್ಶಿಯಾಗಿ ಭುವನ್ ನೆಲ್ಲಿಪೂಣಿ ನೇಮಕಗೊಂಡರು. ಹುಲಿತಾಳ ಬೂತ್ ಅಧ್ಯಕ್ಷರಾಗಿ ದಯಾನಂದ (ಅಣ್ಣು), ಬಿಎಲ್‍ಒಗಳಾಗಿ ಅಶ್ವಥ್ ಕುಮಾರ್ ಹಾಗೂ ಶಶಿಕುಮಾರ್, ಕಗ್ಗೋಡ್ಲು ಬೂತ್ ಅಧ್ಯಕ್ಷರಾಗಿ ಎಂ.ಬಿ.ಪ್ರವೀಣ್, ಬಿಎಲ್‍ಓಗಳಾಗಿ ಕೊರಗಪ್ಪ ಪೂಜಾರಿ ಹಾಗೂ ಕಿಶೋರ್, ತೊಂಭತ್ತುಮನೆ ಬೂತ್ ಅಧ್ಯಕ್ಷರಾಗಿ ಹೆಚ್.ಬಿ.ಸುರೇಶ್, ಬಿ.ಎಲ್.ಓಗಳಾಗಿ ಕೆ.ವೈ.ಜಲೀಲ್ ಹಾಗೂ ಬಿ.ಎ.ಷರೀಫ್ ಆಯ್ಕೆಯಾದರು. ಸಭೆಯಲ್ಲಿ ಪ್ರಮುಖರಾದ ದಂಬೆಕೋಡಿ ಕವನ ಭೀಷ್ಮ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.












