
ಕುಶಾಲನಗರ NEWS DESK ಫೆ.6 : ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಿರುಗುಪ್ಪೆ ಗ್ರಾಮದಲ್ಲಿ ನೂತನವಾಗಿ ಭದ್ರಕಾಳಿ, ಭಂಟ, ನಾಗನಕಟ್ಟೆ, ಮಾರಿಯಮ್ಮ ಮತ್ತು ಗುಳಿಗ ದೇವರುಗಳ ಪ್ರತಿಷ್ಠಾಪನಾ ಧಾರ್ಮಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯಗಳ ಪ್ರತಿಷ್ಠಾಪನೆ ಹಾಗೂ ಸತ್ಸಂಗಗಳಿಂದ ಗ್ರಾಮಗಳಲ್ಲಿ ಏಕತೆ, ಸಾಮರಸ್ಯ ಮೂಡುತ್ತದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು. ಗ್ರಾಮಗಳಲ್ಲಿ ಕೃಷಿಕರ ಕೈಗೊಳ್ಳುವ ಕೃಷಿ ಚಟುವಟಿಕೆಗಳು ನಿರ್ವಿಘ್ನವಾಗಿ ಸಾಗಲು ಕಾಲಕಾಲಕ್ಕೆ ಮಳೆ ಬೆಳೆ ಆಗುವ ಮೂಲಕ ದೇವರು ಹರಸುವಂತಾಗಬೇಕು. ಭಾರತೀಯರು ಪ್ರಕೃತಿಯ ಆರಾಧಕರು. ನೀರು, ಮರ, ಗಿಡ, ನದಿಗಳು ನಮ್ಮನ್ನು ಪೊರೆಯುತ್ತಿವೆ. ಹಾಗಾಗಿ ಹಾಗೆಯೇ ಭೂಮಿಗೆ ಮಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ಗ್ರಾಮಗಳ ಪ್ರತಿ ಮನೆಗಳಿಂದಲೇ ಆರಂಭವಾಗಲಿ ಎಂದು ಅಪ್ಪಚ್ಚು ರಂಜನ್ ಕರೆಕೊಟ್ಟರು. ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ, 1200 ವರ್ಷಗಳ ಹಿಂದಿನ ಗಂಗರಾಜನ ಕಾಲದ ಶಾಸನ ಅರಿಶಿಣಗುಪ್ಪೆಯಲ್ಲಿದ್ದು ಧಾರ್ಮಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಇರುವ ಗ್ರಾಮವಾಗಿದೆ. ಒಗ್ಗಟ್ಟಿನಲ್ಲಿ ಶ್ರದ್ದೆಯಿಂದ ದೇವತಾ ಕಾರ್ಯಗಳನ್ನು ನೆರವೇರಿಸಿದ ಗ್ರಾಮ ದೇವತಾ ಸಮಿತಿಯ ಸೇವೆಯನ್ನು ಮುತ್ತಪ್ಪ ಶ್ಲಾಘಿಸಿದರು. ಸಿದ್ದಲಿಂಗಪುರದ ಶ್ರೀ ಮಂಜುನಾಥ ದೇವಾಲಯದ ಮುಖ್ಯಸ್ಥರಾದ ಶ್ರೀ ರಾಜೇಶ್ ನಾಥ್ ಗುರೂಜಿ ಆಶೀರ್ವಚನ ಮಾಡಿದರು. ದೇವಾಲಯ ನಿರ್ಮಾಣದಲ್ಲಿ ಶ್ರಮಿಸಿದ ದೇವಾಲಯ ಸಮಿತಿ ಪದಾಧಿಕಾರಿಗಳನ್ನು ಗ್ರಾಮಸ್ಥರು ಸನ್ಮಾನಿಸಿದರು. ತೊರೆನೂರು ಗ್ರಾಪಂ ಅಧ್ಯಕ್ಷೆ ಶೋಭಾ ಪ್ರಕಾಶ್, ಉಪಾಧ್ಯಕ್ಷೆ ರೂಪ ಮಹೇಶ್, ಸದಸ್ಯರಾದ ದೇವರಾಜು, ಎಂ.ಟಿ.ಬೇಬಿ, ತೊರೆನೂರು ಸಹಕಾರ ಸಂಘದ ನಿರ್ದೇಶಕ ಹೆಚ್.ಟಿ.ಕುಶಾಲಪ್ಪ, ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎಸ್.ಶಶಿಕುಮಾರ್, ಅಳುವಾರದಮ್ಮ ದೇವಾಲಯ ಟ್ರಸ್ಟ್ ಅಧ್ಯಕ್ಷ ಎ.ಎನ್.ರಮೇಶ್, ಬಿ.ಪಿ.ಹರೀಶ್ ಕುಮಾರ್, ಗ್ರಾಪಂ ಸದಸ್ಯ ಕೆ.ಬಿ.ದೇವರಾಜು, ಮಾಜಿ ಸದಸ್ಯರಾದ ಪಿ.ಡಿ.ರವಿಕುಮಾರ್, ಯೋಗಿಣಿ ಬೆಳ್ಳಿಯಪ್ಪ, ಮಾಜಿ ಯೋಧ ಧನಂಜಯ, ಬಸಿರು ಗುಪ್ಪೆ ಬಸವೇಶ್ವರ ದೇವಾಲಯ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಧನಂಜಯ, ಗೌರವಾಧ್ಯಕ್ಷ ಆನಂದ್, ಉಪಾಧ್ಯಕ್ಷ ಟಿ.ಸಿ.ಮೋಹನ್, ಕಾರ್ಯದರ್ಶಿ ಹೆಚ್.ಆರ್.ಉದಯಕುಮಾರ್, ಪದಾಧಿಕಾರಿಗಳಾದ ಗುರುಪ್ರಸಾದ್, ಕುಶನ್ ಕುಮಾರ್, ಶಿವಕುಮಾರ್, ಸತೀಶ್ ಕುಮಾರ್, ವಿನೋದ್ ಕುಮಾರ್ ಮೊದಲಾದವರಿದ್ದರು. ದೇವಾಲಯದ ಅರ್ಚಕ ಉರುಂಡೆ ಆಶೋಕ್ ಮೊದಲಾದವರಿದ್ದರು. ಶಿಕ್ಷಕ ಬಸವರಾಜು ನಿರೂಪಿಸಿದರು. ಶಿಕ್ಷಕಿ ಎನ್.ಕೆ.ಜಯಶ್ರೀ ಸ್ವಾಗತಿಸಿದರು.









