ಮಡಿಕೇರಿ NEWS DESK ಫೆ.7 : ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿರಾಜಪೇಟೆಯಲ್ಲಿ ಇಂದು ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ‘ಕೊಡವ ಪುಸ್ತಕ ಪತ್ತಾಯ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂವರನ್ನು ಸನ್ಮಾನಿಸುವ ಸಂದರ್ಭ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಉಪಾಧ್ಯಕ್ಷ ಪೊನ್ನಿರ ಗಗನ್ ಉತಯ್ಯ, ಪೊಟ್ಡಂಡ ಗಣೇಶ್, ಕೊಡವ ಸವಿತಾ ಸಮಾಜದ ಮುಖಂಡರುಗಳಾದ ತಪನೇರ ಸಾಬು, ಮಹೇಶ್, ಪೂಣಚ್ಚಿರ ಮನೋಜ್, ತಪಾನೇರ ಮಹೇಶ್, ವೇದಪಂಡ ಬಿದ್ದಪ್ಪ, ಹಲ್ ಚಿರ ದೇವಯ್ಯ ಹಾಗೂ ನಿರ್ದೇಶಕರುಗಳು ಕಕ್ಕಬೆ ಚೋವಂಡ ಜೀಜ, ತೊರೆರ ಪೊನ್ನಕ್ಕಿ, ಕೊಡವ ಕೆಂಬಟ್ಟಿ ಸಮುದಾಯದ ಅಧ್ಯಕ್ಷರಾದ ಬಿಲ್ಲರೀಕುಟ್ಟಡ ಪ್ರಭು ಐಯ್ಯಪ್ಪ, ಬಾಳೆಕುಟ್ಟಡ ಉದಯ್ ಮಾದಪ್ಪ, ಪೆಗ್ಗೋಲಿ ದಿನೇಶ್, ಚಾವರೆ ಕುಟ್ಟಡ ಜೀವನ್, ಕೋಪರೆಕುಟ್ಟಡ ಸಾಗರ್ ಪೊವಣ್ಣ, ಚಿಮ್ಮಿಕುಟ್ಟಡ ನಿತೇಶ್. ಬಣ್ಣ ಸಮಾಜ ಬಿಕಚಂಡ ಬೆಳ್ಳಿಪ್ಪ, ಅರಮನೆಪಾಲೆ ಸಮಾಜ ದೇವಯ್ಯ, ದಿನೇಶ್, ಮಲೆಯ ಸಮಾಜ ಕಾರ್ಯದರ್ಶಿ ಮಲೆಯಂಡ ಬಿದ್ದಪ್ಪ, ಹ್ಯಾರಿ ಲೋಕೇಶ್ ತಂಡ, ಕೊಯವ ಸಮಾಜದ ಅಧ್ಯಕ್ಷ ಜಿಲ್ಲಂಡ ದಾದು, ಕುಂದ ಪಣಿಕ ಸಮಾಜ ದೇವಮಕ್ಕಡ ಗಿಣಿ ಪಣಚ್ಚ, ಪಾವೇರಿಯಂಡ ಪುಷ್ಪಾವತಿ, ಕುಸುಮ ಕಾವೇರಮ್ಮ, ದೇವಮಕ್ಕಡ ಮೀನಾಕ್ಷಿ, ಚಿಯಮಂಡ ಪುಷ್ಕ, ಗೊಲ್ಲ ಸಮಾಜದ ಚೋಕಿರ ವಾಸುದೇವ್ ಹಾಗೂ ಅರೆಯಂಡ ರಘು ಭೀಮಯ್ಯ ಹಾಜರಿದ್ದರು.








