ಮಡಿಕೇರಿ NEWS DESK ಫೆ.9 : ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪೈನಲ್ ಗೆ ಮೇ 2 ರಂದು ಗೆ ನಾಪೋಕ್ಲುವಿಗೆ ಬರಲು ಕೇಂದ್ರ ಕ್ರೀಡಾ ಸಚಿವರಾದ ಡಾ. ಮಾನ್ಸೂಕ್ ಲಕ್ಷ್ಮಣಭಾಯ್ ಮಾಂಡವೀಯ ಸಮ್ಮತಿ ಸೂಚಿಸಿದ್ದಾರೆ. ಚೇನಂಡ ಕೊಡವ ಹಾಕಿ ಪಂದ್ಯಾವಳಿ ಸಮಿತಿಯ ಪ್ರಮುಖರ ನಿಯೋಗ ಇಂದು ನವದೆಹಲಿಯಲ್ಲಿ ಸಂಸದ ಯದುವೀರ್ ಒಡೆಯರ್ ಅವರ ನೇತೖತ್ವದಲ್ಲಿ ಕೇಂದ್ರ ಕ್ರೀಡಾ ಸಚಿವ ಮಾನ್ಸೂಕ್ ಮಾಂಡವೀಯ ಅವರನ್ನು ಭೇಟಿಯಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಬರುವಂತೆ ಆಹ್ವಾನ ನೀಡಿದ ಸಂದಭ೯, ಇದಕ್ಕೆ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಕೊಡವ ಕುಟುಂಬಗಳ ನಡುವಿನ 26 ನೇ ವಷ೯ದ ಹಾಕಿ ಪಂದ್ಯಾವಳಿಗೆ ಖಂಡಿತಾ ಬರುವುದಾಗಿ ಹೇಳಿದ ಸಚಿವರು, ಕುಟುಂಬಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಒಗ್ಗಟ್ಟು, ಬೆಸುಗೆಯಾಗಿ ರೂಪಿಸಿರುವುದು ಮಾದರಿಯಾಗಿದೆ ಎಂದು ಹೆಮೆ ವ್ಯಕ್ತಪಡಿಸಿದರು. ಇದೇ ಸಂದಭ೯ ಚೇನಂಡ ಹಾಕಿ ಪಂದ್ಯಾವಳಿಯ ಬ್ರೋಷರ್ ನ್ನೂ ಸಚಿವರಿಗೆ ನೀಡಲಾಯಿತು. ಕೊಡವ ಕೌಟುಂಬಿಕ ಹಾಕಿ ಕ್ರೀಡೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಸಚಿವರು ಕೊಡವ ಕೌಟುಂಬಿಕ ಹಾಕಿ ಕ್ರೀಡಾಪಂದ್ಯಾಟದ ಯಶಸ್ವಿ ಆಯೋಜನೆಗೆ ಶುಭಹಾರೈಸಿದರು. ನಿಯೋಗದಲ್ಲಿ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಸಮಿತಿ ಅಧ್ಯಕ್ಷರಾದ ಕರುಂಬಯ್ಯ ಸಿ.ಪಿ. ಕಾಯಾ೯ಧ್ಯಕ್ಷ ದೀನಾ ಚೇನಂಡ , ವಿವೇಕ್ ಪೂಣಚ್ಚ, ಬ್ರಿಗೇಡಿಯರ್ ಸಿ.ಎನ್.ಚೀಯಣ್ಣ, ದ್ರೋಣಾಚಾಯ೯ ಪ್ರಶಸ್ತಿ ವಿಜೇತರಾದ ವಿಶುಕುಟ್ಟಪ್ಪ, ಹಾಜರಿದ್ದರು.








