Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
  • *ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*
  • *ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*
  • *ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*
  • *ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*
  • *‘ಜಂತು ಹುಳು ರಹಿತ ಮಕ್ಕಳು – ಆರೋಗ್ಯವಂತ ಮಕ್ಕಳು’ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ*
  • *ಫೆ.14 ರಂದು ಕೊಡವ ಭವನ ಉದ್ಘಾಟನೆ*
  • *ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*
  • *ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*
  • *104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಕುಶಾಲನಗರ ರೋಟರಿ ಸಂಭ್ರಮೋತ್ಸವಕ್ಕೆ ಚಾಲನೆ… ಕಾವೇರಿ ನದಿ ಸೇತುವೆ ಬಳಿ ಬಾಟಲಿ ಮಾದರಿಯ ತೊಟ್ಟಿ ಉದ್ಘಾಟನೆ..*
ಇತ್ತೀಚಿನ ಸುದ್ದಿಗಳು

*ಕುಶಾಲನಗರ ರೋಟರಿ ಸಂಭ್ರಮೋತ್ಸವಕ್ಕೆ ಚಾಲನೆ… ಕಾವೇರಿ ನದಿ ಸೇತುವೆ ಬಳಿ ಬಾಟಲಿ ಮಾದರಿಯ ತೊಟ್ಟಿ ಉದ್ಘಾಟನೆ..*

February 9, 20262 Mins Read
Share
Facebook Twitter LinkedIn Pinterest WhatsApp Email

ಕುಶಾಲನಗರ NEWS DESK ಫೆ.9 : ಕುಶಾಲನಗರ ರೋಟರಿ ಸಂಸ್ಥೆಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರೋಟರಿ ಸಂಸ್ಥೆ ಸುವರ್ಣ ಸಂಭ್ರಮೋತ್ಸವ ಆಚರಿಸುತ್ತಿದೆ. ಇದರ ಅಂಗವಾಗಿ ಶನಿವಾರ ನಗರದ ಕಾವೇರಿ ನದಿ ಸೇತುವೆ ಬಳಿ ನೂತನವಾಗಿ ನಿರ್ಮಿಸಿದ ಪ್ಲಾಸ್ಟಿಕ್ ಬಾಟಲಿ ಮಾದರಿಯ ಬಾಟಲಿಗಳ ಸಂಗ್ರಹಣಾ ತೊಟ್ಟಿಯನ್ನು ರೋಟರಿ 3181 ರ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಜಿಲ್ಲೆಯ ಪ್ರವೇಶ ದ್ವಾರದಲ್ಲಿರುವ ಕಾವೇರಿ ನದಿಗೆ ಕೈ ಮುಗಿದು ಜಿಲ್ಲೆಯ ಪರಿಸರಕ್ಕೆ ಹಾನಿಯಾಗದ ಹಾಗೆ ಸ್ವಚ್ಛತೆಯನ್ನು ಮೈಗೂಡಿಸಿ ಹಾಗೆಯೇ ಮರಳಬೇಕೆಂದು ರೋಟರಿ ಸಂಸ್ಥೆ ಅವರಲ್ಲಿ ಮನವಿ ಮಾಡುತ್ತದೆ. ಈ ನಿಟ್ಟಿನಲ್ಲಿ ಸೇತುವೆಯ ಎರಡು ಗೋಡೆಗಳ ಮೇಲೆ ಜನಜಾಗೃತಿ ಮೂಡಿಸುವ ಬರಹಗಳು ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ನದಿ – ಪರಿಸರ ಹಾಗೂ ಕೊಡಗಿನ ಸ್ವಚ್ಛತೆಯ ಕುರಿತು ಮಾಹಿತಿಯನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದರು. ಕುಶಾಲನಗರ ರೋಟರಿ ಸಂಸ್ಥೆಯ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ, ರೋಟರಿ ಸುವರ್ಣ ಸಂಭ್ರಮೋತ್ಸವದ ಸವಿ ನೆನಪಿಗೆ ಕುಶಾಲನಗರವನ್ನು ಸ್ವಚ್ಛವಾಗಿ ರೂಪಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಆದ್ದರಿಂದ ಕಂಡ ಕಂಡಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಕುವುದನ್ನು ತಪ್ಪಿಸಲು ನಗರದ ಪ್ರವೇಶ ದ್ವಾರದ ಕಾವೇರಿ ನದಿ ಬಳಿ ಬಾಟಲಿ ಮಾದರಿಯ ತೊಟ್ಟಿಯನ್ನು ನಿರ್ಮಿಸಿದ್ದು ಪ್ರವಾಸಿಗರು ಹಾಗೂ ಸಾರ್ವಜನಿಕರು ಇದರ ಬಳಕೆಯ ಮೂಲಕ ಪರಿಸರವನ್ನು ಸ್ವಚ್ಛವಾಗಿಡಲು ರೋಟರಿ ಹಾಗೂ ಪುರಸಭೆಯೊಂದಿಗೆ ಕೈಜೋಡಿಸಬೇಕಿದೆ. ಹಾಗೆಯೇ ಸೇತುವೆ ಬಳಿಯ ಬ್ರಿಟಿಷರ ಕಾಲದ ಹಳೆ ಸೇತುವೆಯನ್ನು ರೋಟರಿ ವತಿಯಿಂದಲೇ ಅಭಿವೃದ್ಧಿ ಗೊಳಿಸಿ ಉದ್ಯಾನವನವಾಗಿ ರೂಪಿಸಲು ಪುರಸಭೆ ಅವಕಾಶ ನೀಡಬೇಕೆಂದು ಕೋರಿದರು.
ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ಕುಮಾರ್ ಮಾತನಾಡಿ, ಜಿಲ್ಲೆಯ ಪ್ರವೇಶ ದ್ವಾರದ ನಗರ ಕುಶಾಲನಗರದ ಸ್ವಚ್ಛತೆಗೆ ಪುರಸಭೆಯೊಂದಿಗೆ ಕೈಜೋಡಿಸಿರುವ ರೋಟರಿ ಸಂಸ್ಥೆಗೆ ಎಲ್ಲಾ ಅಗತ್ಯ ನೆರವು ನೀಡಲಾಗುವುದು. ಹಾಗೆಯೇ ಸಾರ್ವಜನಿಕರು ಕೂಡ ನಗರದ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕೆಂದು ಕೋರಿದರು.

ಹಳೆ ಸೇತುವೆಯನ್ನು ರೋಟರಿ ಸಂಸ್ಥೆಯವರ ನಿರ್ವಹಣೆಗೆ ನೀಡುವುದಾಗಿ ಹೇಳಿದರು. ಈ ಸಂದರ್ಭ ರೋಟರಿ ಉಪರಾಜ್ಯಪಾಲ ಉಲ್ಲಾಸ ಕೃಷ್ಣ, ಸುವರ್ಣ ಸಂಭ್ರಮೋತ್ಸವದ ಅಧ್ಯಕ್ಷ ಎಸ್. ಕೆ. ಸತೀಶ್, ಪದಾಧಿಕಾರಿಗಳಾದ ಕ್ರಿಜ್ವಲ್ ಕೋಟ್ಸ್, ಶಿಭು ಥೋಮಸ್, ಎಸ್.ಎನ್.ರಾಜೇಂದ್ರ, ಡಾ. ಹರಿ ಎ. ಶೆಟ್ಟಿ, ಆರತಿ ಶೆಟ್ಟಿ, ಪ್ರಕಾಶ್, ಕುಶಾಲನಗರ ರೋಟರಿ ಕಾರ್ಯದರ್ಶಿ ಮಂಜುನಾಥ್, ಪ್ರಿನ್ಸ್ ಮತ್ತಿತರರು ಇದ್ದರು.

Share. Facebook Twitter Pinterest LinkedIn Tumblr Email WhatsApp
Previous Article*ಚೇನಂಡ ಕೊಡವ ಕೌಟುಂಬಿಕ ಹಾಕಿ ಫೈನಲ್ಸ್ ಗೆ ರಾಜ್ಯಸಭಾ ಸದಸ್ಯ ಅಜಯ್ ಮಖಾನ್*  
Next Article *ಮಾರ್ಚ್ ಅಂತ್ಯದೊಳಗೆ ಹೋಂ ಸ್ಟೇಗೆ ಪರವಾನಗಿ ಹಾಗೂ ನವೀಕರಣಕ್ಕೆ ಜಿಲ್ಲಾಧಿಕಾರಿ ಸೋಮಶೇಖರ್ ಸೂಚನೆ*  

Related Posts

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026

ಮಡಿಕೇರಿ,  NEWS DESK ಫೆ.10:-ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಹಲವು ಕಾಯಕ ಶರಣರು ವರ್ಣ ವ್ಯವಸ್ಥೆ,…

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

*ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*

February 10, 2026

*ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*

February 10, 2026

*ಫೆ.14 ರಂದು ಕೊಡವ ಭವನ ಉದ್ಘಾಟನೆ*

February 10, 2026

*ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*

February 10, 2026

*ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*

February 10, 2026

*104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*

February 10, 2026

*ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ*

February 10, 2026

*ಫೆ.15ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ : ಏಪ್ರಿಲ್ ನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.