
ಮಡಿಕೇರಿ NEWS DESK ಫೆ.12 : ವಿರಾಜಪೇಟೆ ಗೌಡ ಸಮಾಜದ ನೂತನ ಅಧ್ಯಕ್ಷರಾಗಿ ಮುಕ್ಕಾಟಿ ವಾಸು ಗಣಪತಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ತಡಿಯಪ್ಪನ ನರೇಂದ್ರ, ಪೊಕ್ಕುಳಂಡ್ರ ರಮೇಶ್, ಕಾರ್ಯದರ್ಶಿಯಾಗಿ ಮಂಜAಡ್ರ ರೇಖಾ ಉಲ್ಲಾಸ್, ಜಂಟಿ ಕಾರ್ಯದರ್ಶಿಯಾಗಿ ಚಂಡಿರ ಸುಂದರ, ಖಜಾಂಚಿಯಾಗಿ ಬಿಳಿಯಂಡ್ರ ಹರಿಪ್ರಸಾದ್ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಪೊಕ್ಕುಲಂಡ್ರ ದನೋಜ್ (ದಿವ್ಯ), ಗೌಡದಾರೆ ಚೋಟು ಬಿದ್ದಪ್ಪ, ಕತ್ರಿ ಕೊಲ್ಲಿ ನಂಜುಂಡ, ತೆಕ್ಕಡೆ ಗಾಯತ್ರಿ, ಉಪ್ಪುಂಡಿ ಬಾಬಿ ದೇವಯ್ಯ, ಮುಕ್ಕಾಟಿ ದಿಲೀಪ್, ಪೊಕ್ಕುಳಂಡ್ರ ದಿನೇಶ್, ಕಾಯರ ತೋಡಿ ನಾಣಯ್ಯ, ಕೊಂಪುಳಿರ ಪೃಥ್ವಿ, ಜೈನೀರ ತನು ತಮ್ಮಯ್ಯ, ಖಾಯಂ ಗೌರವ ಅಧ್ಯಕ್ಷರಾಗಿ ಡಾ.ಕೆ.ವಿ.ಚಿದಾನಂದ, ಡಾ.ಕೆ.ವಿ.ರೇಣುಕಾ ಪ್ರಸಾದ್, ಖಾಯಂ ಸಲಹೆಗಾರರಾಗಿ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಹಾಗೂ ಉಪಾಧ್ಯಕ್ಷ ಡಾ.ರಾಜೇಶ್ ತೇನನ ಅವರು ಮುಂದುವರೆಯಲಿದ್ದಾರೆ ಎಂದು ವಿರಾಜಪೇಟೆ ಗೌಡ ಸಮಾಜದ ಪ್ರಕಟಣೆ ತಿಳಿಸಿದೆ. ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಮಡಿಕೇರಿ ಗೌಡ ಸಮಾಜದ ನಿರ್ದೇಶಕ ತೋಟಂಬೈಲು ಅನಂತ ಕುಮಾರ್ ಸೇರಿದಂತೆ ಗೌಡ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.








