ಕೊಡಗಿನ ಮಳೆಬೆಳೆಗಳ ವರದಾತ, ಭಕ್ತರ ರಕ್ಷಕ, ಭವರೋಗ ನಿವಾರಕನೆಂದೇ ಖ್ಯಾತಿವೆತ್ತ ಪಾಡಿ ಶ್ರೀ ಇಗ್ಗುತಪ್ಪ ದೇವರ *ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವವು* ಇದೇ ಮಾರ್ಚ್ 2 ರ ಸೋಮವಾರ ವಿಜ್ರಂಭಣೆಯಿಂದ ನಡೆಯಲಿದೆ ಎಂದು ತಕ್ಕಮುಖ್ಯಸ್ಥ ರು ಹಾಗು ಭಕ್ತಜನ ಸಂಘದ ಪಧಾಧಿಕಾರಿಗಳು ತಿಳಿಸಿದ್ದಾರೆ.
*ದೇವಕಟ್ಟು*
ಈ ಪ್ರಯುಕ್ತ ಇದೇ ಫೆಬ್ರವರಿ 17 ರಂದು ಮಂಗಳವಾರ ಅಮಾವಾಸ್ಯೆಯ ದಿನದಂದು ಅಪರಾಹ್ನ ಆದಿಸ್ಥಾನ “ಮಲ್ಮ” ದಲ್ಲಿ ಸಂಪ್ರದಾಯದಂತೆ ದೇವರ ಕಟ್ಟುಬೀಳಲಿದೆ.(ನಾಲ್ಕು ನಾಡಿಗೆ ಸೀಮಿತ). ಹಾಗಾಗಿ ಹಬ್ಬ ಸಂಪನ್ನವಾಗುವತನಕ ಯಾವುದೇ
ತುಲಾಭಾರ ಸೇವೆ , ನಾಮಕರಣ, ವಿಶೇಷ ಪೂಜೆಗಳು ನಡೆಯುವದಿಲ್ಲ .
ಮಾರ್ಚ್ 2ರ ಸೋಮವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರು ಹಾಗು ಬಟ್ಯತ್ ವಕ್ಕ ಪೇರಿಯಂಡ ಕುಟುಂಬಸ್ತರ ಹಾಗೂ ಸಂಭಂದಪಟ್ಟ ಇತರ ಕುಟುಂಬಸ್ಥರ ಐನ್ಮನೆಗಳಿಂದ ಜೋಡೆತ್ತು ಪೋರಾಟ,ಪಾಲ್ ಬೈಯ್ಯಾಡ್ ನೊಂದಿಗೆ ಶಾಸ್ತ್ರೋಕ್ತ ವಾಗಿ ಬಂದು ದೇವಳ ತಲುಪುವುದರೊಂದಿಗೆ ಕಲಾಡ್ಚ ಹಬ್ಬ ಪ್ರಾರಂಭವಾಗುವುದು.
ಮದ್ಯಾಹ್ನ ನಿತ್ಯ ಪೂಜೆಯೊಂದಿಗೆ ಪ್ರಸಾದವಿತರಣೆ ಹಾಗು ಅನ್ನ ಸಂತರ್ಪಣೆ ನೆರವೇರಲಿದೆ.
ನಂತರ ಚಂಡೆ ಮದ್ದಳೆಯೊಂದಿಗೆ ದೇವರ ಉತ್ಸವ ಮೂರ್ತಿ ಯನ್ನು ಮೆರವಣಿಗೆಯಲ್ಲಿ ಆದಿಸ್ಥಾನ ಮಲ್ಮಗೆ ಕೊಂಡೊಯ್ಯುವರು. ಅಲ್ಲಿ ಸಾಂಪ್ರದಾಯಿಕ ದುಡಿಕೊಟ್ಟ್ ಪಾಟ್ ನೊಂದಿಗೆ ಪಾಡಿ, ನೆಲಜಿ, ಪೇರೂರಿನ ತಕ್ಕ ಮುಖ್ಯಸ್ತರು ಕೂಡಿ ಎತ್ತ್ ಪೋರಾಟ ಸೇವೆ, ಪಾಲ್ ಬೈಯ್ಯಾಡ್ ನ ಪಾಯಸಮಾಡಿ ಪ್ರಸಾದವಾಗಿ ಅರ್ಪಿಸುವರು.
ಮುಸ್ಸಂಜೆ ವೇಳೆಗೆ ವಿವಿಧ ಪೂಜಾ ಕೈಂಕರ್ಯದೊಂದಿಗೆ “ದೇವಕಟ್ಟು” ಕೊನೆಗೊಳಿಸಿ, ಉತ್ಸವಮೂರ್ತಿಯನ್ನು ಪಾಡಿ ದೇವಾಲಯಕ್ಕೆ ತಂದು ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ಆಕರ್ಷಕ ಆರಾಟ್ ಬೊಳಕ್ ನ್ರತ್ಯದೊಂದಿಗೆ ಉತ್ಸವಕ್ಕೆ ತೆರೆಬೀಳುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ದೇವರಕ್ರಪೆಗೆ ಪಾತ್ರರಾಗ ಬೇಕೆಂದು ದೇವಾಲಯದ ಭಕ್ತಜನಸಂಘ ದ ಪದಾಧಿಕಾರಿಗಳು, ದೇವತಕ್ಕರು ಹಾಗೂ ತಕ್ಕ ಮುಖ್ಯಸ್ಥರು ಕೋರಿದ್ದಾರೆ.






