

ಪೊನ್ನಂಪೇಟೆ NEWS DESK ಫೆ.15 : ಪೊನ್ನಂಪೇಟೆ ತಾಲ್ಲೂಕು ಬಿರುನಾಣಿಯ ಪರಕಟಗೇರಿ ಶ್ರೀ ಧಾರಮಹೇಶ್ವರ ದೇವಾಲಯಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ .ಪೊನ್ನಣ್ಣ ಭೇಟಿ ನೀಡಿದರು. ಶಾಸಕರ ಅನುದಾನ ರೂ.5 ಲಕ್ಷಗಳಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ಉದ್ಘಾಟಿಸಿದರು. ಬ್ಲಾಕ್ ಅಧ್ಯಕ್ಷ ಮಿದೇರೀರ ನವೀನ್, ವಲಯ ಅಧ್ಯಕ್ಷ ಕುಪ್ಪಣ್ಣಮಾಡ ಪ್ರೀತಮ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಾಲೂಕು ಬಗರ್ ಹುಕುಂ ಅಧ್ಯಕ್ಷ ಅಣ್ಣಳ್ಳಮಾಡ ಲಾಲಾ ಅಪ್ಪಣ್ಣ, ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಮೊಟ್ಟಯ್ಯ, ಬುಟಿಯಂಡ ತಂಬಿ ನಾಣಯ್ಯ, ಗಣಪತಿ, ಬೊಳೇರ ಅಪ್ಪುಟು, ಕಳಕಂಡ ಜಿತ್ತು, ಚೇತು, ಅಣ್ಣಳ್ಳಮಾಡ ಶನ್ನಿ,ಕಾಳಿಮಾಡ ರಾಶಿಕ, ಕರ್ತಮಾಡ ಸುನಂದ, ನೆಲ್ಲಿರ ಸೋಮಣ್ಣ, ಬೊಟ್ಟಂಗಡ ಜಗದೀಶ್, ಅಣ್ಣಳ್ಳಮಾಡ ಅಮನ್, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರು ಉಪಸ್ಥಿತರಿದ್ದರು.










