
ವಿರಾಜಪೇಟೆ ಫೆ.17 NEWS DESK : ಕೊಟ್ಟೋಳಿಯ ಶ್ರೀ ಧಾರಾ ಮಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಉತ್ಸವು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದಲ್ಲಿ ಧಾರಾ ಮಹೇಶ್ವರನಿಗೆ ರುದ್ರಾಭಿóಶೇಕ, ಮಹಾ ಮಂಗಳಾರತಿ, ದೇವರ ಜಳಕ, ನೃತ್ಯಬಲಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿತು. ಇದೇ ಸಂದರ್ಭ ಎತ್ತ್ ಪೋರಾಟ್ ನಡೆಯಿತು. ದೇವತಕ್ಕರಾಗಿ ಕೋದಂಡ ಕುಟುಂಬ ಹಾಗೂ ¨ಂಢಾರ ತಕ್ಕರಾಗಿ ಚಂಗಚಂಡ ಕುಟುಂಬ ಕಾರ್ಯನಿರ್ವಹಿಸಿದರು. ಶಿವರಾತ್ರಿ ಉತ್ಸವದ ಸಲುವಾಗಿ ಕದನೂರು ಕೊಟ್ಟೋಳಿ ಕೊಡವ ಸಂಘ ಹಾಗೂ ಇತರ ಸಂಘ ಸಂಸ್ಥೆಗಳ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು. ಜೈ ಭಾರತ್ ಆಟೋ ಚಾಲಕರ ಸಂಘದ ವತಿಯಿಂದ ನೆರೆದ ಭಕ್ತಾಧಿಗಳಿಗಳಿಗೆ ಮಜ್ಜಿಗೆ ವಿತರಣೆ ಮಾಡಲಾಯಿತು. ಜೈ ಭಾರತ್ ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವು, ಗೌರವಾಧ್ಯಕ್ಷರಾದ ಪ್ರವೀಣ್ ಶೇಟ್ ಮಜ್ಜಿಗೆ ವಿತರಣೆ ಕಾರ್ಯ ನಿರ್ವಹಿಸಿದರು. ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದ ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಚಂಗಚಂಡ ಚೇತನ್ ಬೆಳ್ಯಪ್ಪ, ಸಹ ಕಾರ್ಯದರ್ಶೀ ವಿಶ್ವನಾಥ್ ಬಬ್ಬಿ, ದೀಪಾ ವಿಶ್ವನಾಥ್, ಅಧ್ಯಕ್ಷ ಕೋದಂಡ ಅಜಯ್ ಹಾಗೂ ಕುಟುಂಬಸ್ಥರು ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.











