
ನಾಪೋಕ್ಲು NEWS DESK ಫೆ.18 : : ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕಾಫಿ ಬೆಳೆಯ ಬಗ್ಗೆ ಬೆಳೆಗಾರರಿಗೆ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಆವರು ವಹಿಸಿ ಕಾರ್ಯಗಾರದ ದ್ಯೆಯೋದ್ದೇಶ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಗಿ ಕಾಫಿ ಸಂಶೋಧನಾ ಸಂಸ್ಥೆ ಚಟ್ಟಳ್ಳಿಯ ವಿಜ್ಞಾನಿಗಳಾದ ಡಾ| ಎಸ್ ಎ ನಾಡಫ್, ಡಾ| ಶಿವಲಿಂಗು ಬಿ ಆರ್ , ಪವನ್ ರವರು ರೈತ ಸದಸ್ಯರಿಗೆ ಕಾಫಿ ಬೆಳೆಯ ಬಗ್ಗೆ ಸ್ಲೈಡ್ (ಕಿರು ಚಿತ್ರ ಪರದೆ) ಮೂಲಕ ವಿಸ್ತೃತವಾದ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಅಶೋಕ ಪಿ ಎಂ , ಸಕ್ಡೆನ್ ಕಾಫಿ ಇಂಡಿಯಾ ಲಿಮಿಟೆಡ್ ಕುಶಾಲನಗರದ ಸಂಯೋಜಕರಾದ ಪ್ರಕೃತಿ ಪೊನ್ನಮ್ಮ ಹಾಗೂ ಉದಯ್ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಸಂಘದ ನಿರ್ದೇಶಕರುಗಳು ಹಾಗೂ ಆಸಕ್ತ ರೈತ ಸದಸ್ಯರು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ನಂಜಪ್ಪ ನಿಡ್ಯಮಲೆ ರವರು ಸಂಪನ್ಮೂಲ ವ್ಯಕ್ತಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ದುಗ್ಗಳ ಸದಾನಂದ.











