Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಯುಕೊ ಅಧ್ಯಕ್ಷ ಮಂಜು ಚಿಣ್ಣಪ್ಪಗೆ ಸನ್ಮಾನ*
  • *ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*
  • *3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*
  • *ಕುಶಾಲನಗರ ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ ಆಚರಣೆ*
  • *ಕುಶಾಲನಗರ : ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ‌ಅವಘಡಗಳ‌ ಕುರಿತು ವಿಶೇಷ ಕಾರ್ಯಾಗಾರ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ನಡೆಯುವ ಪಂದ್ಯಗಳು*
  • ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.18 ರಂದು ಗೆಲುವು ಸಾಧಿಸಿದ ತಂಡಗಳು
  • *ಮಡಿಕೇರಿ : ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ” ಉದ್ಘಾಟನೆ*
  • *ಕಾಂಗ್ರೆಸ್ ಮುಖವಾಡ ಕಳಚಿಬಿದ್ದಿದೆ : ಕೊಡಗು ಬಿಜೆಪಿ ಅಸಮಾಧಾನ*
  • *ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡಗು  ಜಿಲ್ಲಾ  ಔಷಧ ವ್ಯಾಪಾರಸ್ಥರ ಸಂಘದಿಂದ ಫಾಮ೯ ಭವನ ಲೋಕಾಪ೯ಣೆ ಆನ್ ಲೈನ್ ಔಷಧ ವಹಿವಾಟಿಗೆ ಕಡಿವಾಣ ಮೂಲಕ ಮಾದಕ ದ್ರವ್ಯ ಮಾರಾಟ ಸ್ಥಗಿತಗೊಳಿಸಿ – ಆರ್. ರಘುನಾಥ ರೆಡ್ಡಿ ಒತ್ತಾಯ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡಗು  ಜಿಲ್ಲಾ  ಔಷಧ ವ್ಯಾಪಾರಸ್ಥರ ಸಂಘದಿಂದ ಫಾಮ೯ ಭವನ ಲೋಕಾಪ೯ಣೆ ಆನ್ ಲೈನ್ ಔಷಧ ವಹಿವಾಟಿಗೆ ಕಡಿವಾಣ ಮೂಲಕ ಮಾದಕ ದ್ರವ್ಯ ಮಾರಾಟ ಸ್ಥಗಿತಗೊಳಿಸಿ – ಆರ್. ರಘುನಾಥ ರೆಡ್ಡಿ ಒತ್ತಾಯ*

ಫೆಬ್ರವರಿ 19, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ, NEWS DESK ಫೆ.19   ಆನ್ ಲೈನ್ ನಲ್ಲಿ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಮಾದಕ ದ್ರವ್ಯಗಳಿಗೂ ಸಂಪೂಣ೯ ತಡೆ ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟಿರುವ ಕನಾ೯ಟಕ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ  ಆರ್ ರಘುನಾಥ ರೆಡ್ಡಿ, ಆನ್ ಲೈನ ಮೂಲಕ ಮಾದಕ ದ್ರವ್ಯ ಸಾಗಾಣಿಕೆ ಊಹೆಗೂ ಮೀರಿ ಬೆಳೆಯುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ನಗರದಲ್ಲಿ ಕೊಡಗು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ನೂತನವಾಗಿ ನಿಮಿ೯ಸಲಾದ ಸಂಘದ ಕಛೇರಿ, ಸಭಾಂಗಣವನ್ನು ಹೊಂದಿರುವ ಎರಡಂತಸ್ತಿನ ಫಾಮಾ೯ ಭವನ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯ ಸಾಗಾಣಿಕೆ ದೇಶವ್ಯಾಪಿ ವಿಸ್ತಾರಗೊಳ್ಳುತ್ತಿದೆ. ಆನ್ ಲೈನ್ ನಲ್ಲಿ ಔಷಧಿ ವಹಿವಾಟು ನೆಪದಲ್ಲಿ ಮಾದಕ ದ್ರವ್ಯ ಸಾಗಾಣಿಕೆಯೂ ಹೆಚ್ಚಾಗುತ್ತಿದೆ. ಇಂಥ ಸಂದಭ೯ ಅನಗತ್ಯವಾಗಿ ಔಷಧಿ ವ್ಯಾಪಾರಿಗಳನ್ನು ತನಿಖಾ ಸಂಸ್ಥೆಗಳು ವಿಚಾರಣೆಗೊಳಪಡಿಸುತ್ತಿವೆ.  ಆನ್ ಲೈನ್ ಮೂಲಕ ಮಾದಕ  ವಸ್ತುಗಳನ್ನು ಸಲೀಸಾಗಿ ಸಾಗಾಣಿಕೆ ಮಾಡುವ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್ ಲೈನ್ ಔಷಧಿ ವಹಿವಾಟಿಗೇ ತಡೆಯೊಡ್ಡುವ ನಿಟ್ಟಿನಲ್ಲಿ ಸಕಾ೯ರ ಮುಂದಾಗಬೇಕೆಂದು ಒತ್ತಾಯಿಸಿದರು. ಸಂಘದ ಅಧೀನದಲ್ಲಿರುವ ಔಷಧ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಮಾದಕ ಪದಾಥ೯ಗಳು, ಮಾದಕ ದ್ರವ್ಯಗಳ ಮಾರಾಟಕ್ಕೆ ಅವಕಾಶ ನೀಡಬಾರದೆಂದೂ ಈಗಾಗಲೇ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ ಎಂದೂ  ರಘುನಾಥ ರೆಡ್ಡಿ  ಹೇಳಿದರು.


ಕನಾ೯ಟಕದಲ್ಲಿ ಪ್ರಸ್ತುತ 26 ಸಾವಿರ ಔಷಧ ಅಂಗಡಿಗಳಿದ್ದು, 45 ಸಾವಿರದಷ್ಟು ಔಷಧ ವ್ಯಾಪಾರಿಗಳಿದ್ದಾರೆ.    ಔಷಧ  ವ್ಯಾಪಾರಿಗಳು ಸಮಾಜಮುಖಿಯಾಗಿ  ನಿಯಮಪಾಲಿಸಿಕೊಂಡು  ಕಾಯ೯ನಿವ೯ಹಿಸುತ್ತಾ ಬಂದಿದ್ದಾರೆ. ಹೀಗಿದ್ದರೂ ಸಕಾ೯ರಗಳು ಒಂದಿಲ್ಲೊಂದು ನಿಯಮಗಳ ಮೂಲಕ ಔಷಧ  ವ್ಯಾಪಾರಿಗಳಿಗೆ ಸಮಸ್ಯೆಯುಂಟು ಮಾಡುತ್ತಿದೆ ಎಂದೂ   ರಘುನಾಥ ರೆಡ್ಡಿ  ಅಸಮದಾನ ವ್ಯಕ್ತಪಡಿಸಿದರು.

ಕೊಡಗು  ಜಿಲ್ಲಾ  ಔಷಧ ವ್ಯಾಪಾರಿಗಳ ಸಂಘದಿಂದ ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಆಥಿ೯ಕತೆಗೆ ನೆರವಾಗುವ ನಿಟ್ಟಿನಲ್ಲಿ ಬ್ಯಾಂಕ್ ಪ್ರಾರಂಭಿಸುವಂತೂ ಅವರು ಸಲಹೆ ನೀಡಿದರು. ಫಾಮಾ೯ ಭವನ ಕೊಡಗಿನ ಔಷಧ ವ್ಯಾಪಾರಸ್ಥಲ್ಲರ ಒಗ್ಗಟ್ಟಿನ ಪ್ರತೀಕದ ಭವನವಾಗಲಿ ಎಂದೂ ರಘುನಾಥ ರೆಡ್ಡಿ ಹಾರೈಸಿದರು.

ಕೊಡಗು ಜಿಲ್ಲೆಯ ಸಹಾಯಕ ಔಷಧ ನಿಯಂತ್ರಕರಾದ ಅಜಯ್ ರಾಜ್ ಷಾ ಮಾತನಾಡಿ, ಭೂಮಿಯಲ್ಲಿ ಜನಿಸಿದವರೆಲ್ಲರೂ ಪ್ರವಾಸಿಗರಂತೆ ಆಗಿದ್ದೇವೆ. ಆ ದೇವನು ಪ್ರವಾಸಿ ಮಾಗ೯ದಶ೯ಕನಂತೆ ನಮಗೆ ದಾರಿದೀಪವಾಗಿದ್ದಾನೆ.  ಹೀಗಿರುವಾಗ ಜೀವಿಸುವ ಅಲ್ಪಾವಧಿಯಲ್ಲಿ ಸ್ವಾಥಿ೯ಗಳಾಗದೇ ಪರರ  ಹಿತಚಿಂತನೆಯನ್ನೂ ಮಾಡುವಂತೆ ಸಲಹೆ ನೀಡಿದರು.


ಸಂಘದ ರಾಜ್ಯ ಕಾನೂನು ಸಲಹೆಗಾರ ಕೆ.ಹರೀಶ್ ಮಾತನಾಡಿ, ಸಕಾ೯ರಗಳು ಸದಾ ಒಂದೊಂದು ನಿಯಮಗಳ ಮೂಲಕ ಔಷಧ  ವ್ಯಾಪಾರಿಗಳ ನೆಮ್ಮದಿ ಕಸಿಯುತ್ತಿವೆ. ಅವೈಜ್ಞಾನಿಕವಾದ ಕಾನೂನುಗಳು ವ್ಯಾಪಾರಸ್ಥರನ್ನು ಅತಂತ್ರಗೊಳಿಸುತ್ತಿವೆ. ಹೀಗಿದ್ದರೂ, ಇಂಥ ಕಾನೂನುಗಳ ವಿರುದ್ದ ರಾಜ್ಯ ಸಂಘವು ನಿರಂತರ  ಹೋರಾಟ ಮಾಡುತ್ತಾ ಔಷಧ ವ್ಯಾಪಾರಿಗಳ ಹಿತಚಿಂತನೆ ಕಾಯಲು ಬದ್ದವಾಗಿದೆ ಎಂದು ಹೇಳಿದರು.

ಕೊಡಗು  ಜಿಲ್ಲಾ  ಔಷಧ ವ್ಯಾಪಾರಿಗಳ  ಸಂಘದ ಅಧ್ಯಕ್ಷ ಅಂಬೇಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಔಷಧ ವ್ಯಾಪಾರಿಗಳು ಸಮಾಜದ ಆರೋಗ್ಯ ರಕ್ಷಕರಂತೆ ಇದ್ದಾರೆ.  ವೈದ್ಯರು  ಸೂಚಿಸುವ  ಔಷಧವನ್ನು ರೋಗಿಗೆ ಸುರಕ್ಷಿತವಾಗಿ ತಲುಪಿಸುವ ಸೇತುವೆಯಂತೆ ಔಷಧಿ ವ್ಯಾಪಾರಸ್ಥರಿದ್ದಾರೆ. ಔಷಧಿ ವ್ಯಾಪಾರಸ್ಥರದ್ದು ಖಂಡಿತಾ  ಕೇವಲ ವಹಿವಾಟಲ್ಲ. ನಿಜಾಥ೯ದಲ್ಲಿ ಅವರದ್ದು ಮಹೋನ್ನತ ಸೇವೆಯಾಗಿದೆ ಎಂದರು. ಹೊಸ ಫಾಮಾ೯ಭವನ ಕೊಡಗಿನ ಔಷಧ ವ್ಯಾಪಾರಿಗಳ ಪಾಲಿಗೆ ನವನವೀನ ಚಿಂತನೆಯ ಸ್ವರೂಪವಾಗಿದೆ. ಇಲ್ಲಿ ಕೈಗೊಳ್ಳುವ ನಿಧಾ೯ರಗಳು ವ್ಯಾಪಾರಸ್ಥರ ರಕ್ಷಣೆಗೋಸ್ಕರ ಇರಲಿದೆ. ಫಾಮಾ೯ ಭವನ ಜಿಲ್ಲೆಯ ಔಷಧಿ ವ್ಯಾಪಾರಸ್ಥರ ಒಗ್ಗಟ್ಟಿನ ಮನೆಯಂತಿರಲಿದೆ ಎಂದರು.  ಸಂಘವು ಜನರ ಆರೋಗ್ಯದ ಹಿತಚಿಂತನೆಯೊಂದಿಗೆ, ಸಮಾಜಮುಖಿಯಾಗಿ ಕಾಯ೯ನಿವ೯ಹಿಸಲಿದೆ ಎಂದೂ ಅವರು ಹೇಳಿದರು. ಜಿಲ್ಲೆಯ ಔಷದ ವ್ಯಾಪಾರಸ್ಥರು ನೈತಿಕತೆಯೊಂದಿಗೆ, ನ್ಯಾಯಯುತ ಮಾಗ೯ದಲ್ಲಿ ಮುಂದೆಯೂ ಹೆಜ್ಜೆಯಿಡಲಿದ್ದಾರೆ ಎಂದೂ ಜೀವನ್ ಭರವಸೆಯಿಂದ ನುಡಿದರು.

ಕನಾ೯ಟಕ ಔಷದ ವ್ಯಾಪಾರಿಗಳ ಸಂಘದ ಖಜಾಂಜಿ ಬಿ. ಉಮೇಶ್,   ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಗೌರವ ಕಾಯ೯ದಶಿ೯ ಡಿ.ಐ. ಪುರುಷೋತ್ತಮ್, ಉಪಾಧ್ಯಕ್ಷರುಗಳಾದ ಅಂಬೆಕಲ್ ವಿನೋದ್,  ಮೇವಿ೯ನ್ ಫನಾ೯ಂಡೀಸ್, ಜಂಟಿ ಕಾಯ೯ದಶಿ೯ ಕೆ.ವಸಂತ್ ಕುಮಾರ್, ಖಜಾಂಚಿ ಪ್ರಸಾದ್ ಗೌಡ, ನಿದೇ೯ಶಕ ಜಗನ್ನಾಥ್, ಡಾ. ಸುಧಾಕರ್ ಶೆಟ್ಟಿ ವೇದಿಕೆಯಲ್ಲಿದ್ದರು..ಶೖಧ್ದಾ ಶಾಸ್ತ್ರಿ ಪ್ರಾಥಿ೯ಸಿ, ಡಿ.ಐ. ಪುರುಷೋತ್ತಮ್,ಸ್ವಾಗತಿಸಿ, ಜಂಟಿ ಕಾಯ೯ದಶಿ೯ ವಸಂತ್ ಕುಮಾರ್ ವಂದಿಸಿ, ವಿನಯ್ ಕುಮಾರ್ ನಿರೂಪಿಸಿದ ಕಾಯ೯ಕ್ರಮದಲ್ಲಿ  ಕೊಡಗಿನ  ವಿವಿಧೆಡೆಗಳಿಂದ ಬಂದಿದ್ದ ಔಷಧ ವ್ಯಾಪಾರಸ್ಥರು  ಪಾಲ್ಗೊಂಡಿದ್ದರು.

ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ನಿಮಿ೯ಸಲಾದ  ಫಾಮಾ೯ ಭವನದ   ಉದ್ಘಾಟನೆ ಸಂದಭ೯ ಹಿರಿಯ ಔಷಧ ವ್ಯಾಪಾರಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು

ಫಾಮಾ೯ ಭವನದ ಲೋಕಾಪ೯ಣೆ ಸಂದಭ೯ ಕೊಡಗಿನ ಹಿರಿಯ ಔಷಧ ವ್ಯಾಪಾರಸ್ಥರುಗಳಾದ  ವೀರಾಜಪೇಟೆಯ ಗಣೇಶ್ ಮೆಡಿಕಲ್ಸ್ ನ ಸುದಶ೯ನ್ ರೈ, ಕುಶಾಲನಗರದ ರಾಧಾಕೖಷ್ಣ ಮೆಡಿಕಲ್ಸ್ ನ ಶ್ರೀಪತಿ ಎಸ್.ಎಲ್., ಸುಂಟಿಕೊಪ್ಪದ ಅಶ್ವಿನಿ ಮೆಡಿಕಲ್ಸ್ ನ  ಕೆ. ಗೋಪಾಲ ಭಟ್ ,  ನಾಪೋಕ್ಲುವಿನ ರಾಘವೇಂದ್ರ ಮೆಡಿಕಲ್ಸ್ ನ ಎಂ.ಎಂ.ನರೇಂದ್ರ, ಸೋಮವಾರಪೇಟೆಯ ಮೆಡಿಕಲ್ ಎಂಪೋರಿಯಂ ಮೇವಿ೯ನ್ ಫೆನಾ೯ಂಡೀಸ್, ಮಡಿಕೇರಿಯ ವಿನೋದ್ ಮೆಡಿಕಲ್ಸ್ ನ ಅಂಬೆಕಲ್ ಕುಶಾಲಪ್ಪ, ಶನಿವಾರಸಂತೆಯ ಅನ್ನಪೂಣ೯ ಮೆಡಿಕಲ್ಸ್ ನ ಹೆಚ್.ಎಸ್. ಸುರೇಶ್, ಕೊಡ್ಲಿಪೇಟೆಯ ಶ್ರೀನಿವಾಸ ಮೆಡಿಕಲ್ಸ್ ನ ಎಸ್.ಎಸ್. ಶ್ರೀನಿವಾಸ್,
ಗೋಣಿಕೊಪ್ಪಲುವಿನ ಕಾವೇರಿ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ನ ಎನ್.ಯು. ಭೀಮಯ್ಯ  ಸಂಘದ  ಪೂವಾ೯ಧ್ಯಕ್ಷರಾದ ಮಡಿಕೇರಿಯ ರಾಜ್ ಮೆಡಿಕಲ್ಸ್ ನ ಜಿ.ಎಸ್. ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಾಮಾ೯ ಭವನದ ಗುತ್ತಿಗೆದಾರರಾದ ಮನೋಜ್ಞ  ಮತ್ತು ಇಂಜಿನಿಯರ್ ಪ್ರಮೋದ್ ಕುಮಾರ್ ರೈ , ಜಿಲ್ಲಾ ಔಷಧ ವ್ಯಾಪಾರಸ್ಥರ  ಸಂಘದ ಅಧ್ಯಕ್ಷ ಎ.ಕೆ. ಜೀವನ್, ಸುಮಾ ಜೀವನ್ ಅವರನ್ನೂ  ಈ ಸಂದಭ೯ ಸನ್ಮಾನಿಸಲಾಯಿತು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಯುಕೊ ಅಧ್ಯಕ್ಷ ಮಂಜು ಚಿಣ್ಣಪ್ಪಗೆ ಸನ್ಮಾನ*

ಏಪ್ರಿಲ್ 18, 2026

*ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*

ಏಪ್ರಿಲ್ 18, 2026

*3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*

ಏಪ್ರಿಲ್ 18, 2026

*ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*

ಏಪ್ರಿಲ್ 18, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ವಿಶೇಷ

(*ಬರಹ : ಗೀತಾಂಜಲಿ ಎನ್.ಎಂ ಸೋಮವಾರಪೇಟೆ ) ಮಡಿಕೇರಿ ಏ.18 NEWS DESK : ಮಾನವ ಸಮಾಜದ ಬೆಳವಣಿಗೆ ಕೇವಲ…

*3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*

ಏಪ್ರಿಲ್ 18, 2026

*ಕುಶಾಲನಗರ ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ ಆಚರಣೆ*

ಏಪ್ರಿಲ್ 18, 2026

*ಕುಶಾಲನಗರ : ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ‌ಅವಘಡಗಳ‌ ಕುರಿತು ವಿಶೇಷ ಕಾರ್ಯಾಗಾರ*

ಏಪ್ರಿಲ್ 18, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 18, 2026

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.18 ರಂದು ಗೆಲುವು ಸಾಧಿಸಿದ ತಂಡಗಳು

ಏಪ್ರಿಲ್ 18, 2026

*ಮಡಿಕೇರಿ : ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ” ಉದ್ಘಾಟನೆ*

ಏಪ್ರಿಲ್ 18, 2026

*ಕಾಂಗ್ರೆಸ್ ಮುಖವಾಡ ಕಳಚಿಬಿದ್ದಿದೆ : ಕೊಡಗು ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026

*ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಏಪ್ರಿಲ್ 18, 2026

*ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.