
ಮಡಿಕೇರಿ ಫೆ.20 NEWS DESK : ರೋಟರಿ ದಿನಾಚರಣೆ ಅಂಗವಾಗಿ ಮಡಿಕೇರಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಫೆ.23 ರಂದು ಸೋಮವಾರ ಮಹಿಳೆಯರಿಗಾಗಿ ರಕ್ತದಾನ ಶಿಬಿರ ಹಾಗೂ ಕೃತಕ ಕೈಕಾಲು ಜೋಡಣಾ ಶಿಬಿರ ಆಯೋಜಿಸಲಾಗಿದೆ. ನಗರದಲ್ಲಿಂದು ಸುದ್ಗಿಗೋಷ್ಟಿಯಲ್ಲಿ ಮಾಹಿತಿ ನೀಡಿದ ರೋಟರಿ ಮಿಸ್ಟಿ ಹಿಲ್ಸ್ ನ ವೃತ್ತಿ ಸೇವಾ ಯೋಜನಾ ನಿದೇ೯ಶಕ ಡಾ.ಚೆರಿಯಮನೆ ಪ್ರಶಾಂತ್, ಮಹಿಳೆಯರೂ ರಕ್ತದಾನ ಮಾಡಬಹುದು ಎಂದು ಸ್ತ್ರೀಯರನ್ನು ರಕ್ತದಾನಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ಮಹಿಳೆಯರಿಗಾಗಿಯೇ ವಿಶೇಷವಾಗಿ ರಕ್ತದಾನ ಶಿಬಿರವನ್ನು ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಲಾಗಿದೆ. ಅಂತೆಯೇ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ ಸಹಭಾಗಿತ್ವದಲ್ಲಿ 22 ಮಂದಿಗೆ ಕೖತಕವಾದ ಕೈ ಮತ್ತು ಕಾಲು ಜೋಡಣಾ ಶಿಬಿರವನ್ನು ರೋಟರಿ ದಿನಾಚರಣೆ ಸಂದಭ೯ ಫೆ.23 ರಂದು ನಗರದ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ರೋಟರಿ ಜಿಲ್ಲೆ 3092 ನ ಮಾಜಿ ಗವನ೯ರ್ ನಾಗೇಂದ್ರ ಪ್ರಸಾದ್, ಕೊಡಗು ವೈದ್ಯಕೀಯ ಕಾಲೇಜಿನ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ.ಕರುಂಬಯ್ಯ, ರೋಟರಿ ಜಿಲ್ಲಾ ಸಹಾಯಕ ಗವನ೯ರ್ ಧಿಲನ್ ಚಂಗಪ್ಪ, ವಲಯ ಸೇನಾನಿ ಕಾಯ೯ಪ್ಪ ಸೇರಿದಂತೆ ರೋಟರಿ ಪ್ರಮುಖರು ಕಾಯ೯ಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಡಾ. ಪ್ರಶಾಂತ್ ಮಾಹಿತಿ ನೀಡಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ರೋಟರಿ ಜಿಲ್ಲಾ ಯೋಜನೆ ಅಂಗವಾಗಿ ಮಿಸ್ಟಿ ಹಿಲ್ಸ್ ನಿಂದ 2.50 ಲಕ್ಷ ರು. ವೆಚ್ಚದಲ್ಲಿ ಕೖತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು ಈಗಾಗಲೇ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯಿಂದ ಗುರುತಿಸಲಾದ ಫಲಾನುಭವಿಗಳಿಗೆ ಸೋಮವಾರ ಕೈ ಮತ್ತು ಕಾಲು ಜೋಡಣೆ ನಡೆಯಲಿದೆ ಎಂದರು. ಅಂತೆಯೇ ರೋಟರಿ ದಿನಾಚರಣೆ ಹಿನ್ನಲೆಯಲ್ಲಿ ಫೆ.22 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಅರೆಭಾಷೆ ಗೌಡ ವಿಕಾಸ ವೇದಿಕೆಯ ಪ್ರಹ್ಲಾದ್ ಅಪ್ಪಾಜಿ ಅವರ ಸಹಯೋಗದಲ್ಲಿ ಕೊಡಗು ಜಿಲ್ಲೆಯ ಹೈಸ್ಕೂಲ್ ವಿದ್ಯಾಥಿ೯ಗಳಿಗಾಗಿ ರಸಪ್ರಶ್ನೆ ಸ್ಪಧ೯ ಆಯೋಜಿಸಲಾಗಿದೆ. 15 ತಂಡಗಳು ನೋಂದಾಯಿಸಿಕೊಂಡಿದ್ದು ಪ್ರಥಮ ಬಹುಮಾನವಾಗಿ 10 ಸಾವಿರ ರು. ದ್ವಿತೀಯ ಬಹುಮಾನವಾಗಿ 6 ಸಾವಿರ ರು. ಮತ್ತು ತೖತೀಯ ಬಹುಮಾನವಾಗಿ 3 ಸಾವಿರ ನಗದನ್ನು ಟ್ರೋಫಿಯೊಂದಿಗೆ ನೀಡಲಾಗುತ್ತದೆ ಎಂದೂ ರತ್ನಾಕರ್ ರೈ ತಿಳಿಸಿದರು. ಮಹಿಳಾ ರಕ್ತದಾನ ಶಿಬಿರದ ಸಂಚಾಲಕಿ ರಶ್ಮಿದೀಪಾ ಮಾತನಾಡಿ. ಅನೀಮಿಯಾ ಮತ್ತು ರಕ್ತದಾನದ ಪ್ರಯೋಜನದ ಬಗ್ಗೆ ಮಹಿಳೆಯರಲ್ಲಿ ಜಾಗ್ರತಿ ಮೂಡಿಸುವ ಉದ್ದೇಶದಿಂದ ಮಿಸ್ಟಿ ಹಿಲ್ಸ್ ವತಿಯಿಂದ ಮಹಿಳೆಯರೇ ರಕ್ತದಾನ ಮಾಡುವಂಥ ವಿನೂತನ ಶಿಬಿರ ಆಯೋಜಿಸಲ್ಪಟ್ಟಿದೆ. ಮಹಿಳೆಯರು ಯಾಕೆ ರಕ್ತದಾನ ಮಾಡಬೇಕು ಎಂಬ ಬಗ್ಗೆ ಹಾಗೂ ಮಹಿಳೆಯರಲ್ಲಿ ರಕ್ತದಾನದ ಬಗೆಗಿರುವ ತಪ್ಪು ಕಲ್ಪನೆ ಹೋಗಲಾಡಿಸುವ ಉದ್ದೇಶದಿಂದ ಈ ವಿನೂತನ ಶಿಬಿರ ಆಯೋಜಿಸಲ್ಪಟ್ಟಿದೆ ಎಂದರು. ರೋಟರಿ ಮಿಸ್ಟಿ ಹಿಲ್ಸ್ ಮುಂದಿನ ಸಾಲಿನ ಕಾಯ೯ದಶಿ೯ ಡಾ.ಚೇತನ್ ಮಾತನಾಡಿ, ಶೇ. 5 ರಷ್ಟು ಪ್ರಮಾಣದಲ್ಲಿ ಮಾತ್ರ ಮಹಿಳೆಯರು ರಕ್ತದಾನ ಮಾಡಲು ಮುಂದಾಗುತ್ತಿದ್ದಾರೆ. ಸಾಕಷ್ಟು ತಪ್ಪು ತಿಳುವಳಿಕೆಗಳು ಇರುವುದೇ ಮಹಿಳೆಯರಲ್ಲಿ ರಕ್ತದಾನದ ಹಿಂಜರಿಕೆಗೆ ಕಾರಣವಾಗಿದೆ ಎಂದರು. ರಕ್ತದಾನದ ಮೂಲಕ ರಕ್ತ ಅಗತ್ಯವುಳ್ಳ ಮತ್ತೊಂದು ಜೀವವನ್ನು ಉಳಿಸುವ ಮಹತ್ವದ ಹೊಣೆಗಾರಿಕೆ ನಿಭಾಯಿಸುವುದರೊಂದಿಗೆ ರಕ್ತದಾನದಿಂದ ಪ್ರತೀಯೋವ೯ರೂ ತಮ್ಮಲ್ಲಿರುವ ಅನೇಕ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು. ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಕೊಡಗು ಸಂಚಾಲಕ ಅಂಕಾಚಾರಿ ಮಾತನಾಡಿ, ಕೖತಕ ಕೈಕಾಲು ಜೋಡಣೆ ಶಿಬಿರದ ಮೂಲಕ 21 ಮಂದಿಗೆ ಹೊಸ ಜೀವನ ನೀಡುವ ಪ್ರಯತ್ನ ಮಾಡಲಾಗಿದೆ. ವಿವಿಧ ಕಾರಣಗಳಿಂದ ಕಾಲು, ಕೈ ಸ್ವಾಧೀನ ಇಲ್ಲದವರಿಗೆ ಕೖತಕವಾಗಿ ಕೈಕಾಲು ಜೋಡಿಸಿ ಅವರಲ್ಲಿಯೂ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ರೋಟರಿ ಸಹಯೋಗದಲ್ಲಿ ಮಾಡಲಾಗುತ್ತಿದೆ ಎಂದರು. ಕೖತಕ ಕೈಕಾಲು ಜೋಡಣೆಯಿಂದ ಸಾಮಾನ್ಯರಂತೆ ಭವಿಷ್ಯದಲ್ಲಿ ಜೀವನ ಸಾಗಿಸಲು ಸಾಧ್ಯವಿದೆ ಎಂದೂ ಅಂಕಾಚಾರಿ ನುಡಿದರು. ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ವಿಶ್ವದ 46 ಸಾವಿರ ದೇಶಗಳಲ್ಲಿ 13 ಲಕ್ಷ ಸದಸ್ಯರನ್ನೊಳಗೊಂಡ ರೋಟರಿ ಸೇವಾ ಸಂಸ್ಥೆಯು ಅಮೇರಿಕಾ ಮೂಲದ ಪೌಲ್ ಹೇರೀಸ್ ಅವರಿಂದ ಸ್ಥಾಪನೆಯಾಗಿ 121 ವಷ೯ಗಳಾದ ದಿನವನ್ನೇ ರೋಟರಿ ದಿನವನ್ನಾಗಿ ಫೆ.23 ರಂದು ಆಚರಿಸಲಾಗುತ್ತಿದೆ. ವಿಶ್ವದಲ್ಲಿಯೇ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ರೋಟರಿ ಮೊದಲ ಸ್ಥಾನ ಪಡೆದಿದ್ದು, ಫೆ.23 ರಂದು ವಿಭಿನ್ನ ಮತ್ತು ಜನರಿಗೆ ಸೇವಾ ಯೋಜನೆಯಂಥ ಅಥ೯ಪೂಣ೯ ಕಾಯ೯ಕ್ರಮಗಳ ಮೂಲಕ ರೋಟರಿ ದಿನಾಚರಣೆ ಆಯೋಜಿಸಲ್ಪಟ್ಟಿದೆ ಎಂದು ನುಡಿದರು. ಮಹಿಳೆಯರು ರಕ್ತದಾನ ಮಾಡಲು ಇಚ್ಚಿಸಿದರೆ ಹೆಚ್ಚಿನ ಮಾಹಿತಿಗೆ ಸಂಪಕ೯ ಸಂಖ್ಯೆ – 7760841544









