
ಹುದಿಕೇರಿ NEWS DESK ಫೆ.21 : ಪೊನ್ನಂಪೇಟೆ ತಾಲ್ಲೂಕು ಹುದಿಕೇರಿಯಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆಟೋ ತಂಗುದಾಣವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ .ಪೊನ್ನಣ್ಣ ಅವರು ಇಂದು ಉದ್ಘಾಟಿಸಿದರು. ಆಟೋ ಚಾಲಕರೊಂದಿಗೆ ಸಮಾಲೋಚನೆ ನಡೆಸಿದ ಶಾಸಕರು ಅಗತ್ಯ ಸಹಕಾರದ ಭರವಸೆ ನೀಡಿದರು. ಇದೇ ಸಂದರ್ಭ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಿದೇರೀರ ನವೀನ್, ವಲಯ ಅಧ್ಯಕ್ಷರು ಚಂಗುಲಂಡ ಸೂರಜ್, ಡಿಸಿಸಿ ಸದಸ್ಯರು ಪೆಮ್ಮಂಡ ರಾಜ, ಹಿರಿಯರು ಚೆಕ್ಕೇರ ವಾಸು ಕುಟ್ಟಪ್ಪ, ಜಿಮ್ಮಿ ಅಣ್ಣಯ್ಯ, ಸುಧೀರ್, ಪಕ್ಷದ ಮುಖಂಡರು ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ನೊರೇರ ಮನೋಹರ್, ರಮೇಶ್, ಬಿಪಿನ್, ರೋನಿ, ಮದನ್ ಮಂದಣ್ಣ, ಕಿಸು, ಹುದಿಕೇರಿ ವಲಯ ಯುವ ಘಟಕದ ಅಧ್ಯಕ್ಷರು ರೀಕ್ಷಿತ್ ಕಾರ್ಯಪ್ಪ, ಮೌನ, ಮಂಜು ದೇವಯ್ಯ, ಬಾನಾಂಗಡ ಅರುಣ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.










