
ಮಡಿಕೇರಿ NEWS DESK ಫೆ.21 : ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ .ಎನ್ .ಬಿಂದುಮಣಿ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಅಪರಾಧದ ವಿವಿಧ ಪ್ರಕರಣಗಳ ತನಿಖೆಯ ಹಂತಗಳನ್ನು ಪರಾಮರ್ಶಿಸಿದರು. ಜಿಲ್ಲೆಯ ಕಾನೂನು ಸುವ್ಯವಸ್ಥೆ, ಅಪರಾಧ ತಡೆ, ಪತ್ತೆ ಮತ್ತು ಬಂದೋಬಸ್ತುಗಳ ಬಗ್ಗೆ ಮಾಹಿತಿ ಪಡೆದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇದಕ್ಕೂ ಮೊದಲು ಜಿಲ್ಲಾ ಕವಾಯತು ಮೈದಾನದಲ್ಲಿ ನಡೆದ ಜಿಲ್ಲಾ ಕವಾಯತುವಿನಲ್ಲಿ ಎಸ್ ಪಿ ಪಾಲ್ಗೊಂಡರು.









