
ಸುಂಟಿಕೊಪ್ಪ ಫೆ.21 NEWS DESK : ಸುಂಟಿಕೊಪ್ಪ ವ್ಯಾಪ್ತಿಯ ವಿವಿಧ ದೇವಾಲಯಗಳ ಸಹಭಾಗಿತ್ವದಲ್ಲಿ ಗ್ರಾಮ ದೇವರ 7ನೇ ವರ್ಷದ ವಾರ್ಷಿಕ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ದಿನದ ಅಂಗವಾಗಿ ಮುಂಜಾನೆ ಸ್ಥಳ ಶುದ್ಧಿ ಕಲಶ, ಕುಂಕುಮ ಪೂಜೆ, ಅಲಂಕಾರ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು. ನಂತರ ಪ್ರಸಾದ ವಿನಿಯೋಗ ನಡೆಯಿತು. ಗ್ರಾಮ ದೇವರಿಗೆ ಹರಕೆ ಸಮರ್ಪಣೆ ಮಾಡಲಾಯಿತು. ಅರ್ಚಕರಾದ ಗಣೇಶ್ ಭಟ್ ಅವರಿಂದ ಪೂಜಾ ವಿಧಿವಿಧಾನಗಳು ನಡೆಯಿತು. ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜೆ ಪ್ರಾರ್ಥನೆ ಸಲ್ಲಿಸಿದರು. ಸಮಿತಿಯ ಅಧ್ಯಕ್ಷ ಎ.ಶ್ರೀಧರ್ ಕುಮಾರ್, ಕಾರ್ಯದರ್ಶಿ ಸುರೇಶ್ ಗೋಪಿ, ಖಜಾಂಚಿ ದಿನು ದೇವಯ್ಯ, ಉಪಾಧ್ಯಕ್ಷರಾದ ಬಿ.ಡಿ.ರಾಜು ರೈ, ಜೆ.ಎನ್.ಚಂದ್ರಶೇಖರ್, ಸಲಹಾ ಸಮಿತಿಯ ಎ.ಲೋಕೇಶ್ ಕುಮಾರ್, ಶಾಂತರಾಮ್ ಕಾಮತ್,ಬಸವರಾಜು, ಸಂಘಟನಾ ಕಾರ್ಯದರ್ಶಿಗಳಾದ ಧನು ಕಾವೇರಪ್ಪ, ಎಂ.ಎಸ್. ಸುನಿಲ್, ಸಹ ಕಾರ್ಯದರ್ಶಿ ಎ.ಶ್ರೀಧರನ್, ಅಯ್ಯಪ್ಪ, ಪಿ.ಆರ್.ಸುನಿಲ್‍ಕುಮಾರ್, ಪಟ್ಟೆಮನೆ ಕುಟುಂಬಸ್ಥರಾದ ಪಿ.ಪಿ.ಉದಯಕುಮಾರ್, ಪಟ್ಟೆಮನೆ ಸದಾಶಿವ, ಸದಾಶಿವ ರೈ, ಸಂತೋμï, ರವಿ, ಶಿವಕುಮಾರ್, ಸಿ.ಸಿ.ಸುನಿಲ್, ಎಂ.ಆರ್.ಶಶಿಕುಮಾರ್, ಬಿ.ಕೆ.ಪ್ರಶಾಂತ್, ಪ್ರೀತಂ ಪ್ರಭಾಕರ್, ಪಿ.ಆರ್.ಸುಕುಮಾರ್ ಸೇರಿದಂತೆ ವಿವಿಧ ದೇವಾಲಯ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಗ್ರಾಮದೇವರ ಬನದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಬಾಳೆ ಸೇರಿದಂತೆ ತಳಿರು ತೋರಣಗಳು ಹಾಗೂ ಬಣ್ಣ ಬಣ್ಣದ ಹೂವು ಸೇರಿದಂತೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.









