
ಸುಂಟಿಕೊಪ್ಪ ಫೆ.21 NEWS DESK : ಆದಮ್ಯವಾದ ಶಕ್ತಿ ರೂಪವೇ ದೇವರು, ಜೀವ ಸಂಕುಲಕ್ಕೆ ಬೆಳಕು, ಮಳೆ, ಗಾಳಿ, ಭೂಮಿಯನ್ನು ನೀಡಿರುವುದೇ ಜನ್ಮ ಸಾರ್ಥಕವಾಗಲು. ಸಂಸ್ಕಾರಯುತ ಜೀವನ ಮುಖ್ಯ. ಸ್ವಾರ್ಥ ಜೀವನದಿಂದ ಬದುಕಿನ ನೆಮ್ಮದಿಯನ್ನು ಕೆಡಿಸಿಕೊಳ್ಳಬಾರದೆಂದು ಅರಸಿಕೆರೆ ಹಾರ್ನಳ್ಳಿ ಶ್ರೀ ಕೋಡಿಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು. ಜಂಬೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ 12ನೇ ಪುನಾರ್ ಪ್ರತಿಷ್ಠಾಪನಾದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಮನುಕುಲ ಶ್ರೇಷ್ಠವಾದುದು. ದೇವರ ಸಾಕ್ಷತ್ಕರದಿಂದ ನೆಮ್ಮದಿ, ಸಮೃದ್ಧಿ ಸಿಗಲಿದೆ. ಗಳಿಕೆಯ ಕಡೆ ಹೆಚ್ಚಿನ ಚಿಂತನೆ ನಡೆಸದೆ ಸಂಸ್ಕಾರ ಸಹಿತವಾದ ಸ್ವಾರ್ಥ ರಹಿತ ಬದುಕನ್ನು ಕಟ್ಟಿಕೊಳ್ಳಬೇಕು. ದೇವಾಲಯ ಶ್ರದ್ಧಾಭಕ್ತಿಯ ಕೇಂದ್ರವೆಂದು ಕಂಡುಕೊಳ್ಳಬೇಕು. ಸ್ವಾರ್ಥಕ್ಕಾಗಿ ಜೀವನ ನಡೆಸದೆ ಪರರ ಹಿತಕ್ಕಾಗಿಯೂ ಬದುಕನ್ನು ಮುಡಿಪಾಗಿಡಬೇಕು. ಮಾನವರೆಲ್ಲೇ ದೇವರಿದ್ದಾರೆ ಆದರೆ ದೇಗುಲ, ಮಠ ಮಂದಿರ ಮನಷ್ಯನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಶನಿವಾರಸಂತೆ ಮುದ್ದಿನಕಟ್ಟೆ ಮಠದ ಶ್ರೀ ಅಧೀನವ ಸಿದ್ಧಲಿಂಗಾ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ಮೊದಲು ಮಾನವರಾಗಿ ಬದುಕಲು ಕಲಿಯಬೇಕು. ಪುಣ್ಯ ಕೈಂಕರ್ಯದಲ್ಲಿ ಬದುಕಿನ ಮೌಲ್ಯಗಳನ್ನು ರೂಢಿಸಿಕೊಂಡು ಶಾಂತಿ ನೆಮ್ಮದಿಯ ಕಡೆಗೆ ಬದುಕನ್ನು ಕೊಂಡೊಯ್ಯಬೇಕು. ಮಹಿಳೆಯರು ಮಕ್ಕಳಿಗೆ ಸಂಸ್ಕøತಿ, ಆಚಾರ, ವಿಚಾರವನ್ನು ಕಲಿಸಲು ಮುಂದಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಪ್ರತಿ ಊರಿನಲ್ಲಿ ದೇವಾಲಯ ಸ್ಥಾಪನೆಯಾಗಬೇಕು. ನಮ್ಮ ಆಚಾರ, ವಿಚಾರ, ಸಂಸ್ಕøತಿಯನ್ನು ಉಳಿಸಲು ಮಠಾಧೀಶರುಗಳೊಂದಿಗೆ ಕೈಜೋಡಿಸಬೇಕು. ಹಿಂದೂ ಧರ್ಮದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು. ಜಂಬೂರು ಗ್ರಾಮದ ಬಸವೇಶ್ವರ ದೇವಸ್ಥಾನ ಅಭಿವೃದ್ಧಿಯಾಗಲೆಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಮಲಿಕಾರ್ಜುನ ಸ್ವಾಮಿಜಿ ಮಾತನಾಡಿ, ಮನುಷ್ಯನ ಬದುಕು ಕ್ಷಣಿಕ. ಜೀವಿತವಾಧಿಯಲ್ಲಿ ಸಂಪರ್ಕವಾದ ಅಂತರಂಗ ದಾರಿದ್ರ್ಯವನ್ನು ಹೋಗಲಾಡಿಸುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಂಡು ಸಮಾಜಕ್ಕೆ ದೇಶಕ್ಕೆ ಪ್ರತಿಯೊಬ್ಬರೂ ತನ್ನ ಕೊಡುಗೆಯನ್ನು ನೀಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಮೊದಲಿಗೆ ಮಹಿಳೆಯರು ಪೂರ್ಣಕುಂಭದೊಂದಿಗೆ ಎರಡು ಭಾಗದಲ್ಲಿ ನಿಂತು ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರೀ ಡಾ.ಶಿವಾನಂದ ಶಿವಯೋಗಿ ಮಹಾಸ್ವಾಮಿಗಳನ್ನು ದೇವಾಲಯಕ್ಕೆ ವಾದ್ಯಗೋಷ್ಠಿಯೊಂದಿಗೆ ಕರೆ ತರಲಾಯಿತು. ಕಾರ್ಯಕ್ರಮದಲ್ಲಿ ಮಾದಾಪುರದ ವಿಶ್ವ ಶಾಂತಿ ನಿಲಯದ ಸ್ವಾಮಿ ಸೋಮನಾಥ ನಂದಪುರಿ, ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ, ಜಿ.ಪಂ ಮಾಜಿ ಸದಸ್ಯ ಟಿ.ಪಿ.ಸಂದೇಶ, ಮಾದಾಪುರ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷ ಸುರೇಶ್‍ಬಾವೆ,ಸದಸ್ಯ ಪಿ.ಆಡಿ.ಅಂತೋಣಿ, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್.ಕಾವೇರಪ್ಪ, ಉಪಾಧ್ಯಕ್ಷ ಪಿ.ಎಸ್.ರತೀಶ, ಪ್ರಧಾನ ಕಾರ್ಯದರ್ಶಿ ಮಂಜು, ಕಾರ್ಯದರ್ಶಿ ತಿಲಕ್ ಕುಮಾರ್, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಜೆ.ಜೆ. ಸೇರಿದಂತೆ ಮತ್ತಿತರರು ಇದ್ದರು. ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.









