
ವಿರಾಜಪೇಟೆ ಫೆ.23 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ವಿರಾಜಪೇಟೆ ತಾಲೂಕು ಮಾಯಮುಡಿ ವಲಯದ ಪೊನ್ನಪ್ಪಸಂತೆ ಕಾರ್ಯಕ್ಷೇತ್ರದ ಕಲ್ಲುಗುಡಿ ಈಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2,50,000 ಸಹಾಯ ಧನವನ್ನು ನೀಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಹರೀಶ್ ಪಿ. ಚೆಕ್ ಅನ್ನು ದೇವಾಲಯದ ಅಧ್ಯಕ್ಷ ಎ.ಎ.ಪ್ರದೀಪ್ ಅವರಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭ ದೇವಾಲಯ ಸಮಿತಿಯ ಸದಸ್ಯರಾದ ಕೆ.ಜಿ.ಸೋಮಯ್ಯ, ಬಿ.ಕೆ.ಮೊಣ್ಣಪ್ಪ, ಬಿ.ಎ.ದಿನೇಶ್, ವಿನು ಚಂಗಪ್ಪ, ತರುಣ್ ತಿಮ್ಮಯ್ಯ, ರಾಕಿ ಚಂಗಪ್ಪ, ಎಂ.ಎಂ. ತಿಮ್ಮಯ್ಯ, ವಲಯ ಮೇಲ್ವಿಚಾರಕರಾದ ವಸಂತ್, ಒಕ್ಕೂಟದ ಅಧ್ಯಕ್ಷರಾದ ಸೀನಾ, ಸೇವಾ ಪ್ರತಿನಿಧಿ ಬಿಂದು, ಒಕ್ಕೂಟದ ಪದಾಧಿಕಾರಿಗಳಾದ ಉಷಾ, ಗೀತಾ, ಊರಿನ ಗ್ರಾಮಸ್ಥರು ಇದ್ದರು.









