Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಭಾರತದ ಆರ್ಥಿಕತೆಗೆ ಯುದ್ಧದ ‘ಶಾಕ್’:ರೂಪಾಯಿ ಮೌಲ್ಯ ಪಾತಾಳಕ್ಕೆ,ಸಾರಿಗೆ ವೆಚ್ಚ ದುಬಾರಿ!*
  • *ಕೆ.ನಿಡುಗಣೆ ಗ್ರಾ.ಪಂ.ಕಚೇರಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲು ಶಾಸಕರ ಸೂಚನೆ*
  • *ಯುದ್ಧ ಪರಿಸ್ಥಿತಿ : HELPLINE ಸಂಖ್ಯೆಗಳು ಇಲ್ಲಿವೆ*
  • *ಮಾ.03 ರಂದು ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ದೇವಾಲಯಗಳಲ್ಲಿ ಸೇವೆಗಳಲ್ಲಿ ವ್ಯತ್ಯಾಸ*
  • *ಮಾ.06 ರಂದು ಮಿನಿ ಉದ್ಯೋಗ ಮೇಳ*
  • *ಚೆನ್ನಯ್ಯನಕೋಟೆ ಮತ್ತು ಕಣ್ಣಂಗಾಲದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ*
  • *ಮಡಿಕೇರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*
  • *ಭಾರತಕ್ಕೆ ಮುಟ್ಟಿದ ಯುದ್ಧದ ಬಿಸಿ: ಒಮನ್ ದಾಳಿಯಲ್ಲಿ ಕನ್ನಡಿಗರು ಇದ್ದಾರೆಯೇ? ಮೃತ ಭಾರತೀಯನ ಗುರುತು ಪತ್ತೆಗೆ ವಿದೇಶಾಂಗ ಇಲಾಖೆ ಕಾರ್ಯತತ್ಪರ*
  • *ಮಿತ್ರ ರಾಷ್ಟ್ರದ ಮೇಲೆ ಮಿತ್ರನಿಂದಲೇ ಅಟ್ಯಾಕ್: ಅಮೆರಿಕದ 3 ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ ಕುವೈತ್; ಪೈಲಟ್‌ಗಳು ಪ್ರಾಣಾಪಾಯದಿಂದ ಪಾರು!*
  • *ಕಾವೇರಿ ನದಿ ಅಳಿದರೆ ಸಂಸ್ಕೃತಿಯೇ ಅಳಿದಂತೆ; ಕಣಿವೆ ಆರತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕುಶಾಲನಗರ ರೋಟರಿ ಸಂಸ್ಥೆಗೆ 50 ರ ಸಂಭ್ರಮ: ವೈವಿಧ್ಯಮಯ ಕಾಯ೯ಕ್ರಮಗಳ ರಸದೌತಣ; ಶ್ರೇಷ್ಟ ವ್ಯಕ್ತಿತ್ವವನ್ನು ಹೊರತಂದು ಸಮಾಜಕ್ಕೆ ಉತ್ತಮ ಸೇವೆ ನೀಡಿ – ಖ್ಯಾತನಟ ರಮೇಶ್ ಅರವಿಂದ್*
ಇತ್ತೀಚಿನ ಸುದ್ದಿಗಳು

*ಕುಶಾಲನಗರ ರೋಟರಿ ಸಂಸ್ಥೆಗೆ 50 ರ ಸಂಭ್ರಮ: ವೈವಿಧ್ಯಮಯ ಕಾಯ೯ಕ್ರಮಗಳ ರಸದೌತಣ; ಶ್ರೇಷ್ಟ ವ್ಯಕ್ತಿತ್ವವನ್ನು ಹೊರತಂದು ಸಮಾಜಕ್ಕೆ ಉತ್ತಮ ಸೇವೆ ನೀಡಿ – ಖ್ಯಾತನಟ ರಮೇಶ್ ಅರವಿಂದ್*

ಮಾರ್ಚ್ 2, 20263 Mins Read
Facebook WhatsApp Twitter Telegram Copy Link Threads Email LinkedIn Pinterest
Follow us on Google News
Google News
Facebook Twitter WhatsApp Email Telegram Copy Link
ಕುಶಾಲನಗರ, NEWS DESK ಮಾ.02: ಕುಶಾಲನಗರದ ಎಸ್ ಎಲ್ ಎನ್ ಸಭಾಂಗಣದಲ್ಲಿ ಕುಶಾಲನಗರ ರೋಟರಿ ಸಂಸ್ಥೆಯ ಸುವಣ೯ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ರಮೇಶ್ ಅರವಿಂದ್ ಕೆಲವು ದೊಡ್ಡ ಸಂಗತಿಗಳು ಕ್ಲೀಷೆಯಾಗುವ ಈ ಕಾಲಘಟ್ಟದಲ್ಲಿ ಸಣ್ಣ ಚಿಂತನೆಗಳೇ ದೊಡ್ಡ ಪರಿಣಾಮ ಬೀರಬಲ್ಲವಾಗಿದೆ. ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿದ್ದೇ ಆದಲ್ಲಿ ಅದ್ಬುತ ಯಶಸ್ಸು ಖಂಡಿತಾ ಸಾಧ್ಯವಿದೆ, ಯಾವುದೇ ಕೆಲಸ ಮಾಡುವ ಮುನ್ನ ನಿಮ್ಮ ಕೆಲಸವನ್ನು ಜಗತ್ತು ಗಮನಿಸುತ್ತಿರುತ್ತದೆ ಎಂದುಕೊಂಡು ಮಾಡಿದಾಗ ಕೆಲಸ ಸುಲಭಸಾಧ್ಯವಾಗುತ್ತದೆ  ಎಂದರು.
ಸಾಮಾಜಿಕ ಸೇವೆ ಮೂಲಕ  ಕುಶಾಲನಗರ ರೋಟರಿ ಸಂಸ್ಥೆಯು 50 ವಷ೯ಗಳನ್ನು ಕಳೆದಿರುವುದು ಗಮನಾಹ೯ವಾಗಿದೆ ಎಂದು ಶ್ಲಾಘಿಸಿದ ರಮೇಶ್ ಅರವಿಂದ್ ಖ್ಯಾತ ಕಲಾವಿದರು ಮೊದಲಿನಂತೆ ವಷ೯ಗಟ್ಟಲೆ ವಾರಗಟ್ಟಲೆ ಸೂಪರ್ ಸ್ಟಾರ್ ಗಳಾಗಿ ಮುಂದುವರೆಯುವ ಕಾಲದ ಬದಲಾಗಿ  ಸೂಪರ್ ಸ್ಟಾರ್ ಗಿರಿ ಗಂಟೆಗೆ ಸೀಮಿತವಾಗುವ ಕಾಲದಲ್ಲಿ ನಾವಿದ್ದೇವೆ . ಆದರೆ ರೋಟರಿ ಸಂಸ್ಥೆಯು ಕೈಗೊಳ್ಲುವ ಸೇವಾ ಕಾಯ೯ ಸಮಾಜದಲ್ಲಿ 50 ವಷಾ೯ನುಗಟ್ಟಲೆ ಕಾಲ ರೋಟರಿಯನ್ನು ಸೂಪರ್ ಸ್ಟಾರ್ ಆಗಿಯೇ ಇರುವಂತೆ ಮಾಡಿದೆ ಎಂದೂ ರಮೇಶ್ ಹೆಮ್ಮೆಯಿಂದ ನುಡಿದರು.
ಸಂವಾದ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಮಾತನಾಡಿ,  ಸಣ್ಣ ವಯಸ್ಸಿನಲ್ಲಿಯೇ ಜನ ನನಗೆ ಶಾಸಕನಾಗುವ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಜನಸೇವೆಗೆ ತಾನು ಎಲ್ಲಾ ಸಮಯ ಮುಡಿಪಾಗಿಟ್ಟಿದ್ದೇನೆ ಎಂದರು.ಸುಮಾರು 25 ವಷ೯ಗಳ ಸಮಸ್ಯೆಯಾಗಿ ಪರಿಣಮಿಸಿರುವ ಮಡಿಕೇರಿಯ ತ್ಯಾಜ್ಯದ ಗುಡ್ಡದಲ್ಲಿನ ಕಸಕ್ಕೆ ವೈ5ಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ.ಸ್ವಚ್ಚ ಭಾರತ್ ಯೋಜನೆಯಡಿಯಲ್ಲಿ 12 ಕೋಟಿ ರು. ಅನುದಾನದಲ್ಲಿ ಮಡಿಕೇರಿ, ಕುಶಾಲನಗರ ಮತ್ತು ವೀರಾಜಪೇಟೆಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗುತ್ತದೆ ಎಂದು ಹೇಳಿದರು.
ಮಕ್ಕಳಲ್ಲಿ ಪ್ಲಾಸ್ಟಿಕ್ ಬಳೆಕೆಯಿಂದಾಗುವ ಅಪಾಯದ ಬಗ್ಗೆ ತಿಳುವಳಿಕೆ ಮೂಡಿಸಿ, ಪ್ಲಾಸ್ಟಿಕ್ ಮುಕ್ತ ಕೊಡಗನ್ನು ರೂಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದೂ ಡಾ.ಮಂಥರ್ ಗೌಡ ಈ ಸಂದಭ೯ ಕರೆ ನೀಡಿದರು. ರೋಟರಿ ಸುವಣ೯ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಜಿಲ್ಲೆ 3181 ನ ಗವನ೯ರ್ ಪಿ.ಕೆ. ರಾಮಕೖಷ್ಣ, ಸ್ವಚ್ಚ ಕುಶಾಲನಗರದಂಥ ಗಮನಾಹ೯ ಯೋಜನೆ ಮೂಲಕ ರೋಟರಿ ಸಂಸ್ಥೆಯು ಅತ್ಯುತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು. ಎಸ್ ಎಲ್ ಎನ್ ಸಂಸ್ಥೆಯ ಪ್ರಮುಖರಾದ ಸಾತಪ್ಪನ್ ಮಾತನಾಡಿ, ಕುಶಾಲನಗರ ಸ್ವಚ್ಚ ನಗರವಾಗಿ ರೂಪಾತಂರಗೊಂಡು ಕೊಡಗಿನಲ್ಲಿಯೇ ಸ್ವಚ್ಚತೆಗೆ ಮಾದರಿಯಾಗಬೇಕೆಂದು ಕರೆ ನೀಡಿದರು. ಕುಶಾಲನಗರ ರೋಟರಿ ಸಂಸ್ಥೆಯ ಯುವ ಅಧ್ಯಕ್ಷ ಮಾಳೆಯಂಡ ಮನುಪೆಮ್ಮಯ್ಯ ಮಾತನಾಡಿ, 48 ಸದಸ್ಯರ ಸಹಕಾರದೊಂದಿಗೆ ಸ್ವಚ್ಚ ಕುಶಾಲನಗರ, ಪ್ಲಾಸ್ಟಿಕ್ ಮುಕ್ತ ಕುಶಾಲನಗರಕ್ಕಾಗಿ ಪಣತೊಟ್ಟಿದ್ದೇವೆ. ಉತ್ತಮ ಸಮಾಜದ ಪರಿಕಲ್ಪನೆಯೊಂದಿಗೆ ವೈವಿಧ್ಯಮಯ ಕಾಯ೯ಕ್ರಮಗಳನ್ನು ಆಯೋಜಿಸುತ್ತಾ ಸುವಣ೯ ಸಂಭ್ರಮ ವಷ೯ವನ್ನು ಆಚರಿಸಿಕೊಳ್ಳಲಾಗುತ್ತಿದೆ ಎಂದರು. ಸುವಣ೯ ಸಂಭ್ರಮ  ಆಚರಣಾ ಸಮಿತಿ ಅಧ್ಯಕ್ಷ ಎಸ್.ಕೆ. ಸತೀಶ್ ಮಾತನಾಡಿ, 1976 ರಲ್ಲಿ ಕೆ.ಬಿ. ಬೋಪಣ್ಣ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಕುಶಾಲನಗರ ರೋಟರಿ ಸಂಸ್ಥೆಯು ಮಾನವ ಸೇವೆ, ವಿದ್ಯಾಸೇವೆ,,ಆರೋಗ್ಯಸೇವೆಯಂಥ ಹಲವಾರು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ ಎಂದು ಮಾಹಿತಿ ನೀಡಿದರು.
ಎಸ್ ಎಲ್ ಎನ್ ಸಂಸ್ಥೆ ಪ್ರಮುಖ  ವಿಶ್ವನಾಥನ್, ದಾನಿಗಳಾದ  ಸಿ.ಜೆ. ಅನಿಲ್ ಕುಮಾರ್,  ಶರಣ್ ಪೂಣಚ್ಚ, ಕುಶಾಲನಗರ ರೋಟರಿ ಕ್ಲಬ್‌ನ ಕಾರ್ಯದರ್ಶಿ ಹೆಚ್.ಪಿ. ಮಂಜುನಾಥ್, ಖಜಾಂಚಿ ಕೆ.ಎಂ. ಜೇಕಬ್, ಸುವರ್ಣ ಸಂಭ್ರಮ ಸಮಿತಿ ಉಪಾಧ್ಯಕ್ಷರಾಗಿ ಮಹೇಶ್ ಕುಮಾರ್ ನಲ್ವಾಡೆ, ಡಾ. ಹರಿ ಎ. ಶೆಟ್ಟಿ, ಸಂಚಾಲಕ ಕ್ರೆಜ್‌ವೆಲ್ ಕೋಟ್ಸ್, ಸಹಾಯಕ ಗವರ್ನರ್   ಉಲ್ಲಾಸ್‌ಕೃಷ್ಣ, ಸಮಿತಿ ಕಾರ್ಯದರ್ಶಿ ಎಂ.ಡಿ. ರಂಗಸ್ವಾಮಿ, ಖಜಾಂಚಿ ಪಿ.ಆರ್. ನವೀನ್, ಸಹ ಕಾರ್ಯದರ್ಶಿ ರಿಚರ್ಡ್ ಡಿಸೋಜ, ಹಣಕಾಸು ಸಮಿತಿ ಅಧ್ಯಕ್ಷ   ಸಿ.ಎ. ರುದ್ರೇಶ್ ಪಟೇಲ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆ.ಎಸ್. ರಾಜಶೇಖರ್, ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು.  ಕಾಯ೯ಕ್ರಮದಲ್ಲಿ ಎಸ್ ಎಲ್ ಎನ್ ಸಂಸ್ಥೆಯ ಸಾತಪ್ಪನ್ ಮತ್ತು ವಿಶ್ವನಾಥನ್ ಅವರಿಗೆ ರೋಟರಿ ಗೋಲ್ಡನ್ ಪಸ೯ನಾಲಿಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರತೀಯೋವ೯ರಲ್ಲಿಯೂ ಇರುವ ಶ್ರೇಷ್ಠವಾದ ವ್ಯಕ್ತಿತ್ವವನ್ನು ಹೊರತರುವ ಮೂಲಕ ಸಮಾಜದಲ್ಲಿ ಉತ್ತಮ ಸೇವಾಕಾಯ೯ಗಳಿಗೆ ಮುಂದಾಗಿ ಎಂದು ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಕರೆ ನೀಡಿದ್ದಾರೆ.
ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ನಿರೂಪಿಸಿದ ಸಾಂಸ್ಕೖತಿಕ ಕಾಯ೯ಕ್ರಮಗಳು ಕಿಕ್ಕಿರಿದು ಸೇರಿದ್ದ ಜನರನ್ನು ಆಕಷಿ೯ಸಿತ್ತು. ಖ್ಯಾತ ಗಾಯಕ ಚಂದನ್ ಶೆಟ್ಟಿ ಅವರ ಹಾಡುಗಳು, ಮಿಮಿಕ್ತಿ ಕಲಾವಿದ ಗೋಪಿಯವರ ಮಿಮಿಕ್ರಿ,  ಕಾಮಿಡಿ ಕಿಲಾಡಿಗಳು ಖ್ಯಾತಿಯ  ಪ್ರವೀಣ್ ಮತ್ತು ದೀಪಿಕಾ  ಅವರ ಹಾಸ್ಯ, ವೈವಿಧ್ಯಮಯ ನೖತ್ಯ ಕಾಯ೯ಕ್ರಮಗಳು, ವಣ೯ ಚೌಹಾನ್ ಮತ್ತು ಖಾಸಿಂ ಆಲಿ ಅವರ ಗಾಯನ ಕಾಯ೯ಕ್ರಮಗಳು ರೋಟರಿ ಸುವಣ೯ ಮಹೋತ್ಸವದ ಪ್ರಮುಖ ಆಕಷ೯ಣೆಯಾಗಿದ್ದವು. ಕೊಡವ ನೖತ್ಯಕ್ಕೆ ಚಂದನ್ ಶೆಟ್ಟಿ ಕೂಡ ಹೆಜ್ಜೆ ಹಾಕಿ ಗಮನ ಸೆಳೆದರು.
ರೋಟರಿಯ ನೂರಾರು ಸದಸ್ಯರು, ಸಾವ೯ಜನಿಕರು ಕುಶಾಲನಗರ ರೋಟರಿ ಸಂಸ್ಥೆಯ ಸುವಣ೯ ಸಂಭ್ರಮ ಸಮಾರಂಭವನ್ನು ಆನಂದಿಸಿದರು.
ಬಾಕ್ಸ್  ಕಾರ್ಯಕ್ರಮದಲ್ಲಿ ರೋಟರಿ ಸುವರ್ಣ ಮಹೋತ್ಸವ ಅಂಗವಾಗಿ ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ ನಿರ್ವಹಣೆಗಾಗಿ ರೋಟರಿ ವತಿಯಿಂದ ಒಟ್ಟು ರೂ  50 ಸಾವಿರ  ರುಪಾಯಿ ಚೆಕ್ ಅನ್ನು ಸಂಘದ ಅಧ್ಯಕ್ಷರಾದ ಚಂದ್ರಮೋಹನ್ ಎಂ ಎನ್ ಅವರಿಗೆ ರೋಟರಿ ಅಧ್ಯಕ್ಷರು ಮನು ಪೆಮ್ಮಯ್ಯ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು.
ಇದೇ ಸಂದರ್ಭ ಶಾಸಕ ಡಾ ಮಂತರ್ ಗೌಡ ಅವರು ಕುಶಾಲನಗರ  ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ ನಿರ್ಮಾಣಕ್ಕೆ  ಶಾಸಕರ ಅನುದಾನದಲ್ಲಿ 5 ಲಕ್ಷ ರೂಗಳ ದೇಣಿಗೆ  ನೀಡುವುದಾಗಿ ಘೋಷಿಸಿದರು.
Follow us on Google News
Share. Facebook Twitter Pinterest LinkedIn Tumblr Email WhatsApp
Previous Article*ಕಡಗದಾಳುವಿನಲ್ಲಿ ವೈಭವದಿಂದ ಜರುಗಿದ ʼಹಿಂದು ಸಂಗಮ’*
Next Article *ಕುಶಾಲನಗರದಲ್ಲಿ ನಡೆದ ಮಾಸದ  ನೆನಪು ಗೀತಾ ಗಾಯನ*

*ಕೆ.ನಿಡುಗಣೆ ಗ್ರಾ.ಪಂ.ಕಚೇರಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲು ಶಾಸಕರ ಸೂಚನೆ*

ಮಾರ್ಚ್ 2, 2026

ಮಡಿಕೇರಿ, NEWS DESK ಮಾ.2:-ಮಡಿಕೇರಿ ತಾಲೂಕಿನ ಕೆ.ನಿಡುಗಣೆಯಲ್ಲಿ ನೂತನ ಗ್ರಾಮ ಪಂಚಾಯತ್ ಕಚೇರಿ ನಿರ್ಮಾಣಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ…

*ಯುದ್ಧ ಪರಿಸ್ಥಿತಿ : HELPLINE ಸಂಖ್ಯೆಗಳು ಇಲ್ಲಿವೆ*

ಮಾರ್ಚ್ 2, 2026

*ಮಾ.03 ರಂದು ಖಗ್ರಾಸ ಚಂದ್ರ ಗ್ರಹಣದ ಪ್ರಯುಕ್ತ ದೇವಾಲಯಗಳಲ್ಲಿ ಸೇವೆಗಳಲ್ಲಿ ವ್ಯತ್ಯಾಸ*

ಮಾರ್ಚ್ 2, 2026

*ಮಾ.06 ರಂದು ಮಿನಿ ಉದ್ಯೋಗ ಮೇಳ*

ಮಾರ್ಚ್ 2, 2026

*ಚೆನ್ನಯ್ಯನಕೋಟೆ ಮತ್ತು ಕಣ್ಣಂಗಾಲದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ*

ಮಾರ್ಚ್ 2, 2026

*ಮಡಿಕೇರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಚಾಲನೆ*

ಮಾರ್ಚ್ 2, 2026

*ಭಾರತಕ್ಕೆ ಮುಟ್ಟಿದ ಯುದ್ಧದ ಬಿಸಿ: ಒಮನ್ ದಾಳಿಯಲ್ಲಿ ಕನ್ನಡಿಗರು ಇದ್ದಾರೆಯೇ? ಮೃತ ಭಾರತೀಯನ ಗುರುತು ಪತ್ತೆಗೆ ವಿದೇಶಾಂಗ ಇಲಾಖೆ ಕಾರ್ಯತತ್ಪರ*

ಮಾರ್ಚ್ 2, 2026

*ಮಿತ್ರ ರಾಷ್ಟ್ರದ ಮೇಲೆ ಮಿತ್ರನಿಂದಲೇ ಅಟ್ಯಾಕ್: ಅಮೆರಿಕದ 3 ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ ಕುವೈತ್; ಪೈಲಟ್‌ಗಳು ಪ್ರಾಣಾಪಾಯದಿಂದ ಪಾರು!*

ಮಾರ್ಚ್ 2, 2026

*ಕಾವೇರಿ ನದಿ ಅಳಿದರೆ ಸಂಸ್ಕೃತಿಯೇ ಅಳಿದಂತೆ; ಕಣಿವೆ ಆರತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ*

ಮಾರ್ಚ್ 2, 2026

*”ಕಲೆಯ ಮೂಲಕ ಕಲಿಕೆ” ರೋಟರಿ ಮಡಿಕೇರಿ ವುಡ್ಸ್ ನಿಂದ ವಿಶಿಷ್ಟ ಕಾರ್ಯಕ್ರಮ : ಭಾಷೆ, ಬರಹ ಮತ್ತು ಭಾವನೆಗಳ ಸಮ್ಮಿಲನವೇ ಶಿಕ್ಷಣ : ಯು.ಆರ್.ನಾಗೇಶ್ ಕುಮಾರ್*

ಮಾರ್ಚ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.