
ಸುಂಟಿಕೊಪ್ಪ NEWS DESK ಮಾ.15 : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವವು ತಾ. 21ರಿಂದ 23 ರವರೆಗೆ ವಿಶೇಷ ಪೂಜೆಗಳು ನಡೆಯಲಿದೆ ಎಂದು ಶ್ರೀ.ಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಸ್ಥಾನ ಸಮಿತಿಯ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶನಿವಾರ ದಂದು ಬೆಳಿಗ್ಗೆ 6.30 ಗಂಟೆಗೆ ಗಣಪತಿ ಹವನ 7.15 ಗಂಟೆಗೆ ಶುದ್ಧಿ ಪುಣ್ಯಾಹ, 7.30 ಗಂಟೆಗೆ ಬಾವುಟವನ್ನು ಏರಿಸುವುದು, ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ 6 ಗಂಟೆಗೆ ಚಂಡೆಮೇಳ, 7. ಗಂಟೆಗೆ ಶ್ರೀಮುತ್ತಪ್ಪ ವೆಳ್ಳಾಟಂ ನಡೆಯಲಿದೆ. ತಾ.22 ಭಾನುವಾರ ದಂದು ಬೆಳಿಗ್ಗೆ 7 ಗಂಟೆಗೆ ವಾದ್ಯಮೇಳ, 11 ಗಂಟೆಗೆ ಶ್ರೀ.ಶಾಸ್ತಪ್ಪನ ವೆಳಾಳಟಂ,ಮಧ್ಯಾಹ್ನ 1 ಗಂಟೆಗೆ ಶ್ರೀ ಗುಳಿಗವೆಳ್ಳಾಟಂ, ಸಂಜೆ 4 ಗಂಟೆಗೆ ಅಡಿಯರ ಮೆರವಣಿಗೆ, ರಾತ್ರಿ 7 ಗಂಟೆಗೆ ಶ್ರೀ. ಮುತ್ತಪ್ಪ ವೆಳ್ಳಾಟಂ, 8 ಗಂಟೆಗೆ ಶ್ರೀ. ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, 8.30 ಗಂ. ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು, 9.ಗಂ.ವಿಷ್ಣುಮೂರ್ತಿ ವೆಳ್ಳಾಟಂ,11 ಗಂ. ಕಳಿಗ ಪಾಟ್ ಅಂದಿವೇಳ ಕಳಸಂ ಸ್ವೀಕರಿಸುವುದು, ವೆಳ್ಳಕಟ್ಟ್, 1-15ಕ್ಕೆ ಗುಳಿಗನ ಕೋಲ,2 ಗಂ. ಶಾಸ್ತಪ್ಪನ ಕೋಲ, ಬೆಳಗಿನ ಜಾವ 4 ಗಂಟೆಗೆ ಶ್ರೀಮುತ್ತಪ್ಪ ಮತ್ತು ಶ್ರೀ ತಿರುವಪ್ಪನ ಕೋಲ, 5 ಗಂಟೆಗೆ ಗಂಭೀರ ಪಟಾಕಿ. ತಾ. 23. ರಂದು ಬೆಳಿಗ್ಗೆ 7 ಗಂ. ಶ್ರೀ ರಕ್ತ ಚಾಮುಂಡಿಕೋಲ, 8 ಗಂ. ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, 9. ಗಂ. ಶ್ರೀ ವಿಷ್ಣುಮೂರ್ತಿಕೋಲ, 10 ಗಂ. ಶ್ರೀ ಚಾಮುಂಡೇಶ್ವರಿ ಕೋಲ, 11 ಗಂ. ಶ್ರೀ ವಸೂರಿ ಮಾಲೆ ಕೋಲ, ಮದ್ಯಾಹ್ನ 11.30 ಗಂ. ಗುರುಶ್ರೀ ದರ್ಪಣ, ಅಪರಾಹ್ನ 12 ಗಂ. ಬಾವುಟ ಇಳಿಸಲಾಗುವುದೆಂದು ಶ್ರೀ ಚಾಮುಂಡೇಶ್ವರಿ ಹಾಗೂ ಮುತ್ತಪ್ಪ ದೇವಾಲಯ ಸಮಿತಿ ಆಡಳಿತ ಮಂಡಳಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.








