
ಗೋಣಿಕೊಪ್ಪ ಸೆ.16 NEWS DESK : ಗೋಣಿಕೊಪ್ಪದ ಉಮಾಮಹೇಶ್ವರಿ ಬಡಾವಣೆಯ ಪ್ರಸನ್ನಗಣಪತಿ ಸೇವಾ ಸಂಘದ ವತಿಯಿಂದ 15ನೇ ವರ್ಷದಗೌರಿಗಣೇಶೋತ್ಸವದ ಅಂಗವಾಗಿ ಸ್ಥಳೀಯರಿಗೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಗಮನ ಸೆಳೆಯಿತು. ಗೋಣಿಕೊಪ್ಪಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯಬಿ.ಎನ್. ಪ್ರಕಾಶ್, ಒಗ್ಗಟ್ಟಿನ ಮೂಲಕ ಗಣೇಶೋತ್ಸವಆಚರಣೆ ವರ್ಷದಿಂದ ವರ್ಷಕ್ಕೆ ಮುನ್ನಡೆಯುತ್ತಿದೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದಉತ್ಸವ, ಇಂದುಒಂದನೇ ವಿಭಾಗದಜನರ ಪಾಲ್ಗೊಳ್ಳುವಿಕೆಯೊಂದಿಗೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಮಟ್ಟಕ್ಕೆ ಬೆಳೆದಿದೆ ಎಂದರು. ಪ್ರತಿಯೊಬ್ಬರಲ್ಲೂಒಂದಲ್ಲೊಂದು ಪ್ರತಿಭೆಅಡಗಿರುತ್ತದೆ. ಅಂತಹ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಸಮುದಾಯದಜವಾಬ್ದಾರಿ. ಗಣೇಶೋತ್ಸವದಂತಹ ಸಾರ್ವಜನಿಕ ಆಚರಣೆಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಮಕ್ಕಳ, ಯುವಕರ ಹಾಗೂ ಸ್ಥಳೀಯ ಕಲಾವಿದರ ಪ್ರತಿಭೆಅನಾವರಣಕ್ಕೆ ವೇದಿಕೆಯಾಗಬೇಕು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಡಗಿರುವ ಪ್ರತಿಭೆಗಳನ್ನು ಮುನ್ನೆಲೆಗೆತರಬೇಕುಎಂದುಅವರುಕರೆ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳ ಕಲಾ ಪ್ರದರ್ಶನ ಗಮನ ಸೆಳೆಯಿತು. ಕಾರ್ಯಕ್ರಮವು ಬಡಾವಣೆಯಜನರನ್ನುಒಂದೆಡೆ ಸೇರಿಸುವುದರಜತೆಗೆ, ಪರಸ್ಪರ ಬಾಂಧವ್ಯ ಮತ್ತುಒಗ್ಗಟ್ಟಿನ ಸಂದೇಶವನ್ನೂ ಸಾರಿತು. ಉದ್ಯಮಿ ಅಮೃತ್ರಾಜ್, ಕಾಪ್ಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಸೋಮಯ್ಯ, ಪತ್ರಕರ್ತಅರುಣ್ಕುಮಾರ್ ವಿ.ವಿ., ಪ್ರಸನ್ನಯುವಕ ಸಂಘದಉಪಾಧ್ಯಕ್ಷ ದಿಲೀಪ್ ಉಪಸ್ಥಿತರಿದ್ದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಚೈತ್ರ ಸ್ವಾಗತಿಸಿದರು. ಆಶಾ ವಂದನಾರ್ಪಣೆ ನೆರವೇರಿಸಿದರು. ಸಂಘದ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಉಪಾಧ್ಯಕ್ಷ ಅನಿಲ್, ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ಅನ್ವಿತ್ ಹಾಗೂ ಪದಾಧಿಕಾರಿಗಳಾದ ಭರತ್, ಲಿನಾ ರಾಘವೇಂದ್ರ, ಮುರುಳಿ, ಮುಕೇಶ್, ಕೌಶಿಕ್, ಪ್ರಿಯಾ, ಸೌಜನ್ಯ, ಅನ್ವಿತಾ, ಪ್ರಜ್ವಲ್, ಅಜಿತಾ, ನವೀನ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
ವರದಿ : ಕೆ.ಬಿ. ಜಗದೀಶ್ ಜೋಡುಬೀಟಿ,









