

ಮಡಿಕೇರಿ NEWS DESK ಮಾ.17 : ಪಂಜಾಬ್ ನ ಬಟಿಂಡದ ಗುರುಕಾಶಿ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಇದೇ ಮಾರ್ಚ್ 14 ರಿಂದ 16ವರೆಗೆ ನಡೆದ 45 ನೇ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ.ಬಿಟ್ಟಂಗಾಲ ನಾಂಗಾಲ ಮೂಲದ ಚೇಮಿರ ಸೀತಮ್ಮ (ಪ್ರೇಮ) ಇವರು ಬಾರದ ಗುಂಡು ಎಸೆತದಲ್ಲಿ ಪ್ರಥಮ. ತಟ್ಟೆ ಎಸತದಲ್ಲಿ ದ್ವಿತೀಯ. ಸರಪಳಿ ಗುಂಡು ಎಸೆತದಲ್ಲಿ ತೃತೀಯ ಬಹುಮಾನ ಪಡೆದುಕೊಂಡರೆ. ಮೋರಿರ ಶಾಂತಿ ಇವರು ಬಾರದ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಅರಮಣಮಾಡ ಮಮತಾ ಬಾರದ ಗುಂಡು ಎಸೆತ ಪ್ರಥಮ. ಭರ್ಜೀ ಎಸೆತ ಪ್ರಥಮ. ಸರಪಳಿ ಗುಂಡು ಎಸೆತ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐಮುಡಿಯಂಡ ಶೈಲಾ ಇವರು 200ಮೀ ಅಡೆ ತಡೆ ಓಟದಲ್ಲಿ ಪ್ರಥಮ ಸ್ಥಾನವನ್ನು, 100ಮೀ ಅಡೆ ತಡೆ ಓಟದ ಓಟದಲ್ಲಿ ಪ್ರಥಮ ಹಾಗೂ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶ್ರೀಮತಿ ಆಶಾ ಅನಂತ್ ಕುಮಾರ್ ಇವರು ಬಾರದ ಗುಂಡು ಎಸೆತ ಪ್ರಥಮ. ಚಕ್ರ ಎಸೆತ ದ್ವಿತೀಯ. ಸರಪಳಿ ಗುಂಡು ಎಸೆತ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಅಚ್ಚಪಂಡ ಟೀನಾ ಸೋಮಣ್ಣ ಇವರು ಉದ್ದ ಜೀಗಿತದಲ್ಲಿ ಪ್ರಥಮ. ಸ್ಥಾನವನ್ನು ಪಡೆದಿರುತ್ತಾರೆ. ಪಟ್ಟಚೆರುವಂಡ ಗಗನ್ ಮೇದಪ್ಪ ಇವರು ಉದ್ದ ಜಿಗಿತದಲ್ಲಿ ಪ್ರಥಮ. 200ಮೀ ಓಟದಲ್ಲಿ ದ್ವಿತೀಯ. 100ಮೀ ಅಡೆ ತಡೆ ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ 45 ನೇ ರಾಷ್ಟ್ರ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.









